ಭಯೋತ್ಪಾದನೆಗೆ ಪಾಕ್ “ಮಾದಕ’ ಅಸ್ತ್ರ! ತಿರುಗೇಟು ನೀಡಲು ಸೇನೆ ಬದ್ಧ
ಕಣಿವೆಯಲ್ಲಿ ಪಾಕ್ ಕುತಂತ್ರ ಹೆಚ್ಚಳ
Team Udayavani, Feb 8, 2023, 7:20 AM IST
ಶ್ರೀನಗರ: ಜಟ್ಟಿ ಬಿದ್ದರೂ, ಮೀಸೆ ಮಣ್ಣಾಗಿಲ್ಲ ಎನ್ನುವಂತೆ ಕಾಶ್ಮೀರ ವಿಚಾರದಲ್ಲಿ ಪದೇ ಪದೆ ಕೈ ಸುಟ್ಟುಕೊಳ್ಳುತ್ತಿದ್ದರೂ, ಪಾಕಿಸ್ತಾನ ಬುದ್ಧಿ ಕಲಿಯುತ್ತಿಲ್ಲ. ಯುವಕರನ್ನು ಭಯೋತ್ಪಾದನೆಗೆ ಪ್ರೇರೇಪಿಸುವ ಪಿತೂರಿಗೆ ಭಾರತೀಯ ಸೇನೆ ಕಡಿವಾಣ ಹಾಕುತ್ತಿದ್ದಂತೆ, ಈಗ ಮಾದಕವಸ್ತುಗಳನ್ನು ಭಯೋತ್ಪಾದನೆಗೆ ಪಾಕಿಸ್ತಾನ ಅಸ್ತ್ರವಾಗಿಸಿಕೊಂಡಿದೆ ಎಂದು ಸೇನೆ ತಿಳಿಸಿದೆ.
ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ಲೆ.ಜ.ಉಪೇಂದ್ರ ದ್ವಿವೇದಿ ಈ ಕುರಿತು ಮಾಹಿತಿ ನೀಡಿದ್ದಾರೆ. ನೇರವಾಗಿ ಭಾರತವನ್ನು ಎದುರಿಸಲಾಗದೇ, ದೇಶದ ವಿರುದ್ಧ ಪಿತೂರಿ ರೂಪಿಸುತ್ತಿರುವ ಪಾಕ್ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸಲು ಈಗ ಮಾದಕವಸ್ತುಗಳ ಆಮಿಶ ಒಡ್ಡುತ್ತಿದೆ. ಪಾಕಿಸ್ತಾನ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳು ಹಾಗೂ ಮಾದಕವಸ್ತುಗಳನ್ನು ಸಾಗಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ ಎಂದಿದ್ದಾರೆ. ಇದೇ ವೇಳೆ ಪಾಕ್‌ನ ಇಂಥ ಕುತಂತ್ರಗಳಿಗೆ ಬಗ್ಗುವುದಿಲ್ಲ. ಈಗಾಗಲೇ ಡ್ರೋನ್ ನಿಗ್ರಹ ತಂತ್ರಜ್ಞಾನದ ಮೂಲಕ ಪಾಕ್ ಪ್ರಯತ್ನಗಳಿಗೆ ಮಣ್ಣುಮುಕ್ಕಿಸಿದ್ದೇವೆ. ಮಂದೆ ಯಾವ ಸನ್ನಿವೇಶ ಬಂದರೂ ಹಿಮ್ಮೆಟ್ಟಿಸಲು ಸಿದ್ಧ ಎಂದು ಹೇಳಿದ್ದಾರೆ.
ಧ್ವಜ ಹಾರುತ್ತಿರುವುದು ಗಾಳಿಯಿಂದಲ್ಲ!:
ತ್ರಿವರ್ಣ ಧ್ವಜ ಹಾರುತ್ತಿರುವುದು ಗಾಳಿಯಿಂದಲ್ಲ, ದೇಶಕ್ಕಾಗಿ ಮಡಿದ ಸೈನಿಕನ ಉಸಿರಿನಿಂದ. ದೇಶದ ಜನರು ನಮ್ಮನ್ನು ನಂಬಿದ್ದಾರೆ. ಅವರ ರಕ್ಷಣೆಗಾಗಿ ನಾವು ಸದಾ ಸಿದ್ಧರಿರಬೇಕು ಎಂದಿದ್ದಾರೆ. ಅಲ್ಲದೇ, ದೇಶದ ಸಾರ್ವಭೌಮತೆಯನ್ನು ಕಾಯ್ದುಕೊಳ್ಳಲು ಸೇನೆಯ ಎಲ್ಲಾ ಶ್ರೇಣಿಯ ಸೈನಿಕರಿಗೆ ಅವರು ಸೂಚಿಸಿದ್ದಾರೆ.
ಚೀನ ಹಿಮ್ಮೆಟ್ಟಿಸಲು ಬದ್ಧ
ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯ ಯಥಾಸ್ಥಿತಿ ಬದಲಾಯಿಸುವಲ್ಲಿ ಚೀನದ ಪ್ರಯತ್ನಕ್ಕೆ ಭಾರತ ಅತ್ಯಂತ ನಿರ್ಭೀತ ಮತ್ತು ಕ್ಷಿಪ್ರಗತಿಯಲ್ಲಿ ತಿರುಗೇಟು ನೀಡುತ್ತಿದೆ. ಭದ್ರತೆಗೆ ತೊಡಕಾಗುವ ಚೀನದ ಯಾವುದೇ ಆಕ್ರಮಣವನ್ನು ಹಿಮ್ಮೆಟ್ಟಿಸಿ, ತಕ್ಕ ತಿರುಗೇಟು ನೀಡಲು ಭಾರತೀಯ ಸೇನೆ ಬದ್ಧವಾಗಿದೆ. ಗಸ್ತು ಚಟುವಟಿಕೆ, ತಾಂತ್ರಿಕ ಕಣ್ಗಾವಲಿನ ಮೂಲಕ ದೇಶದ ಸಮಗ್ರತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ಲೆ.ಜ.ದ್ವಿವೇದಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ
ಅಮೃತಪಾಲ್ ಸಿಂಗ್ ಜನಪ್ರಿಯತೆಗಾಗಿ ಮಂದೀಪ್ ಸಂಘಟನೆ ಪಿಗ್ಗಿಬ್ಯಾಕ್ ಮಾಡಿದನೇ?
ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ
ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಪತ್ತೆಯಾಯ್ತು ಕಾಂಡೋಮ್, ಮದ್ಯದ ಬಾಟಲಿ…
ಗೋವಾ ಸಮುದ್ರ ತೀರದಲ್ಲಿ ಮದುವೆಯಾಗುವ ಕನಸು ಕಾಣುತ್ತಿದ್ದವರಿಗೆ ಇನ್ನು ಹೆಚ್ಚು ಖರ್ಚು
MUST WATCH
ಹೊಸ ಸೇರ್ಪಡೆ
ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ
ಮಾಸ್ ಲುಕ್ ನಲ್ಲಿ ‘ರಾನಿ’ ಎಂಟ್ರಿ; ನಾಯಕ ನಟನಾಗಿ ಕಿರಣ್ ರಾಜ್
ಒಳಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಚುನಾವಣಾ ಗಿಮಿಕ್-ಡಾ.ಜಿ.ಪರಮೇಶ್ವರ
ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ
ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್