
ಭಾರತಕ್ಕೆ ಬರುತ್ತಿದ್ದ ಹಿಂದೂಗಳ ತಡೆದ ಪಾಕಿಸ್ತಾನ !
Team Udayavani, Feb 9, 2023, 7:40 AM IST

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಅಲ್ಪಸಸಂಖ್ಯಾತರಾಗಿರುವ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ಕಿರುಕುಳ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆ ದೇಶ ತೊರೆದು ಭಾರತದತ್ತ ಹೊರಟಿದ್ದ 190 ಹಿಂದೂಗಳ ಕುಟುಂಬ ಸದಸ್ಯರನ್ನು ಪಾಕಿಸ್ತಾನದ ವಲಸೆ ಅಧಿಕಾರಿಗಳು ತಡೆದಿದ್ದಾರೆ.
ಯಾವ ಕಾರಣಕ್ಕಾಗಿ ನೆರೆಯ ದೇಶದತ್ತ ಪ್ರಯಾಣ ನಡೆಸುತ್ತಿದ್ದಾರೆ ಎಂಬ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದಾಗ ಅವರು ಸೂಕ್ತ ಉತ್ತರ ನೀಡಲಿಲ್ಲ. ಈ ಕಾರಣಕ್ಕಾಗಿ ಅವರನ್ನು ತಡೆಯಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
ಹೆಂಗಸರು ಮಕ್ಕಳು ಸೇರಿದಂತೆ ಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದ ಹಿಂದೂ ಕುಟುಂಬಗಳು ಧಾರ್ಮಿಕ ಯಾತ್ರೆ ವೀಸಾದ ಮೂಲಕ ಭಾರತ ಪ್ರವೇಶಿಸಲು ಪಂಜಾಬ್‌ನ ವಾಘಾ ಗಡಿಗೆ ಧಾವಿಸಿದ್ದಾರೆ. ಈ ವೇಳೆ ಪಾಕ್ ವಲಸೆ ಪ್ರಾಧಿಕಾರದ ಅಧಿಕಾರಿಗಳು ಅವರನ್ನು ತಡೆ ಹಿಡಿದಿದ್ದಾರೆ.
ಪಾಕ್‌ನ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ.1.18 ರಷ್ಟು ಹಿಂದೂಗಳಿದ್ದು, ಅಲ್ಪಸಂಖ್ಯಾತರಾಗಿರುವ ಹಿಂದೂಗಳನ್ನು ಪಾಕ್ ಸರ್ಕಾರ ಅತ್ಯಂತ ನಿಷ್ಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ. ಈ ಹಿನ್ನೆಲೆ ಧಾರ್ಮಿಕ ವೀಸಾ ಪಡೆದು ಭಾರತಕ್ಕೆ ಆಗಮಿಸುವ ಪಾಕ್‌ನ ಹಿಂದೂಗಳು ಇಲ್ಲಿಯೇ ಉಳಿದುಬಿಟ್ಟಿರುವ ನಿದರ್ಶನಗಳೂ ಇವೆ. ರಾಜಸ್ಥಾನ ಹಾಗೂ ದೆಹಲಿಯ ನಿರಾಶ್ರಿತ ಶಿಬಿರಗಳಲ್ಲಿ ಇಂಥ ಸಾಕಷ್ಟು ಪಾಕ್ ಹಿಂದೂಗಳಿದ್ದಾರೆ.
ಟಾಪ್ ನ್ಯೂಸ್
