ಗೆಳೆಯನ ಕೊಂದವರ ಬಂಧನ


Team Udayavani, Dec 16, 2021, 10:54 AM IST

3friends

ವಾಡಿ: ಸಮೀಪದ ಮಾರಡಗಿ ಗ್ರಾಮದ ಸಮೀಪದಲ್ಲಿ ಇತ್ತೀಚೆಗೆ ಸ್ನೇಹಿತನನ್ನು ಕೊಂದು ತಲೆಮರೆಸಿಕೊಂಡಿದ್ದ ಉಳಂಡಗೇರಾ ತಾಂಡಾದ ಹರ್ಯಾ ರಾಠೊಡ, ವಾಲ್ಮೀಕ್‌ ಕಿಶನ್‌, ಮೋಹನ ಮಾನ್ಯಾ ಮಿಣಜಗಿ ಎನ್ನುವವರನ್ನು ವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಲವಾರ ವಲಯದ ಕೊಲ್ಲೂರು ಸಮೀಪದ ಉಳಂಡಗೇರಾ ತಾಂಡಾದ ವಿಜಯ ರೂಪ್ಲಾ ಚಿನ್ನಾ ರಾಠೊಡ (36) ಎಂಬ ವ್ಯಕ್ತಿಯನ್ನು ಕಳೆದ ನ.18ರಂದು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಜಟಿಲವಾದ ಪ್ರಕರಣ ಭೇದಿಸಲು ಮುಂದಾದ ಖಾಕಿಪಡೆ, ಆರೋಪಿಗಳ ಬೇಟೆಗೆ ಪಣ ತೊಟ್ಟಿತ್ತು. ಕೊಲೆಗೆ ಕಾರಣ ಕಲೆಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಲೆಯಾದ ವಿಜಯಕುಮಾರ ಮತ್ತು ಅದೇ ತಾಂಡಾದ ಹರಿ ಚಿನ್ನಾ ರಾಠೊಡ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ನಂತರ ನ್ಯಾಯ ಪಂಚಾಯತಿ ಮಾಡಿಸಿ ನನಗೆ ಅವಮಾನ ಮಾಡಿದ್ದಾನೆ ಎನ್ನುವ ಕಾರಣಕ್ಕೆ ಹರ್ಯ್ಯಾ ರಾಠೊಡ ಎಂಬಾತ ಗೆಳೆಯ ವಿಜಯ ಕುಮಾರನ ಕೊಲೆಗೆ ಯೋಜನೆ ರೂಪಿಸಿದ್ದ. ಇದಕ್ಕಾಗಿ ವಾಲ್ಮೀಕ್‌ ಕಿಶನ್‌ ಚಿನ್ನಾ ರಾಠೊಡ, ಮೋಹನ್‌ ಮಾನ್ಯ, ಸಿದ್ಧು ಚಿನ್ನಾ ರಾಠೊಡ, ಶಿವು ಹೀರು ಚಿನ್ನಾ ರಾಠೊಡ ಎನ್ನುವರ ಸಹಾಯ ಪಡೆದಿದ್ದ. ಕೊಲೆಗೂ ಮುಂಚೆ ವಿಜಯ ಕುಮಾರನ ಚಲನವಚನಗಳ ಮೇಲೆ ನಿಗಾವಹಿಸಿದ್ದರು.

ನ.18ರಂದು ಆರೋಪಿಗಳು ವಿಜಯ ಕುಮಾರನನ್ನು ಬೈಕ್‌ ಮೇಲೆ ಕೂಡಿಸಿ ಕುಂಬಾರಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವೈನ್‌ ಶಾಪ್‌ಗೆ ತಂದು ಕಂಠಪೂರ್ತಿ ಮದ್ಯ ಕುಡಿಸಿದ್ದರು. ಕತ್ತಲಾಗುವವರೆಗೂ ನಾಲವಾರದಲ್ಲಿ ಸಮಯ ಕಳೆದಿದ್ದರು. ನಂತರ ಮಾರಡಗಿ ಗ್ರಾಮ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿಜಯ ಕುಮಾರನ ಮರ್ಮಾಂಗಕ್ಕೆ ಪೆಟ್ಟು ನೀಡಿ, ಉಸಿರು ನಿಂತ ಬಳಿಕ ಕಾಲುವೆಗೆ ಎಸೆದು ಪರಾರಿಯಾಗಿದ್ದರು.

ಈ ಕೊಲೆಯನ್ನು ಆತ್ಮಹತ್ಯೆ ಅಥವಾ ಅಪಘಾತ ಎಂಬಂತೆ ಬಿಂಬಿಸಲು ಆರೋಪಿಗಳು ಮೃತನ ದೇಹದ ಮೇಲೆ ಬೈಕ್‌ ಹಾಯಿಸಿ ಗಾಯಗೊಳಿದ್ದೆವು ಎಂದು ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪಿಎಸ್‌ಐ ವಿಜಯಕುಮಾರ ಭಾವಗಿ ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸಿಪಿಐ ಕೃಷ್ಣಪ್ಪ ಕಲ್ಲೆದೇವರು ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದ ಮುಂಬೈ ನಗರವನ್ನು ಜಾಲಾಡಿದ ವಾಡಿ ಠಾಣೆ ಪಿಎಸ್‌ಐ ವಿಜಯಕುಮಾರ ಭಾವಗಿ ಹಾಗೂ ಸಿಬ್ಬಂದಿಗಳಾದ ಮಧುಕರ, ನಾಗೇಂದ್ರ ತಳವಾರ, ದತ್ತಾತ್ರೇಯ ಜಾನೆ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಮೋಹನ್‌ ಮಾನ್ಯ ಮತ್ತು ವಾಲ್ಮೀಕ್‌ ಕಿಶನ್‌ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಮಂಗಳವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದಕ್ಕೂ ಮುಂಚೆ ಪ್ರಮುಖ ಆರೋಪಿ ಹರ್ಯಾ ಚಿನ್ನಾ ರಾಠೊಡನನ್ನು ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿತ್ತು. ತಲೆಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳಾದ ಸಿದ್ಧು ಮತ್ತು ಶಿವರಾಂ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಟಾಪ್ ನ್ಯೂಸ್

lok adalat

ಚೆಕ್‌ ಅಮಾನ್ಯ ಪ್ರಕರಣ: 5.69 ಲಕ್ಷ ರೂ. ದಂಡ

police karnataka

ಕುರ್ಕಾಲು:ಯುವತಿ ನಾಪತ್ತೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

cON-AA

15ಕ್ಕೂ ಹೆಚ್ಚು ದಲಿತ ನಾಯಕರು ಕಾಂಗ್ರೆಸ್‌ ಸೇರ್ಪಡೆ

police siren

ಬೆಳಾಲು ಎರ್ಮಲದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಮದ್ಯ ವಶ

ಮಕ್ಕಳ ಪರೀಕ್ಷೆ ಜತೆಗೆ ಆಟವಾಡುವುದು ಬೇಡ

ಮಕ್ಕಳ ಪರೀಕ್ಷೆ ಜತೆಗೆ ಆಟವಾಡುವುದು ಬೇಡ

ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ

ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾರ್ಚ್ 23ರಂದು ಮೇಯರ್ ಚುನಾವಣೆ: ಯಾರಿಗೆ ಯುಗಾದಿ

ಮಾರ್ಚ್ 23ಕ್ಕೆ ಮೇಯರ್ ಚುನಾವಣೆ: ಬಿಜೆಪಿ, ಕಾಂಗ್ರೆಸ್,ಜೆಡಿಎಸ್… ಯಾರಿಗೆ ಯುಗಾದಿ?

ಸಿದ್ದರಾಮಯ್ಯಗೆ ಆಳಂದ ಕ್ಷೇತ್ರ ಬಿಟ್ಟು ಕೊಡುವೆ: ಬಿ.ಆರ್.ಪಾಟೀಲ್

ಸಿದ್ದರಾಮಯ್ಯಗೆ ಆಳಂದ ಕ್ಷೇತ್ರ ಬಿಟ್ಟು ಕೊಡುವೆ: ಬಿ.ಆರ್.ಪಾಟೀಲ್

3-wadi-crime-news

ವಾಡಿ: ಹೆದ್ದಾರಿ ಮೇಲೆ ಪೊಲೀಸ್ ಪೇದೆ ಶವ: ಕೊಲೆ ಶಂಕೆ

1-fasddasdas

ಹೇಡಿ ರಾಜಕಾರಣಿ: ಪ್ರಿಯಾಂಕ್ ಖರ್ಗೆ ವಿರುದ್ಧ ಆಂದೋಲಾ ಶ್ರೀ ಪರೋಕ್ಷ ವಾಗ್ದಾಳಿ

4-chincholi

ಚಿಂಚೋಳಿ: ವಿದ್ಯುತ್‌ ತಂತಿ ತಗುಲಿ ತಾಯಿ ಮಕ್ಕಳು ಸೇರಿ ಮೂವರ ದುರ್ಮರಣ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

lok adalat

ಚೆಕ್‌ ಅಮಾನ್ಯ ಪ್ರಕರಣ: 5.69 ಲಕ್ಷ ರೂ. ದಂಡ

police karnataka

ಕುರ್ಕಾಲು:ಯುವತಿ ನಾಪತ್ತೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

cON-AA

15ಕ್ಕೂ ಹೆಚ್ಚು ದಲಿತ ನಾಯಕರು ಕಾಂಗ್ರೆಸ್‌ ಸೇರ್ಪಡೆ

police siren

ಬೆಳಾಲು ಎರ್ಮಲದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಮದ್ಯ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.