LIVE Updates; ಕರ್ನಾಟಕ ಲೋಕಸಮರ; ಕರ್ನಾಟಕದಲ್ಲಿ ಶೇ.36ರಷ್ಟು ಮತದಾನ

ದೇಶದೆಲ್ಲೆಡೆ ಎರಡನೇ ಹಂತದ ಮತದಾನ ಪ್ರಾರಂಭ

Team Udayavani, Apr 18, 2019, 9:16 AM IST

ತಮ್ಮ ಹಕ್ಕನ್ನು ಚಲಾಯಿಸಿದ ಹಿರಿಯರೊಬ್ಬರು ‘ಸೆಲ್ಫಿ ಕಾರ್ನರ್‌’ನಲ್ಲಿ ಕಾಣಿಸಿಕೊಂಡಿದ್ದು ಹೀಗೆ...

ಬೆಂಗಳೂರು: ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ 11 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 95 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು ಗುರುವಾರ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆಗೆ ಚಾಲನೆ ದೊರಕಿದೆ.11ಗಂಟೆವರೆಗೆ ಒಟ್ಟು ಶೇ.12.69ರಷ್ಟು ಮತದಾನವಾಗಿದೆ. ಕರ್ನಾಟಕದಲ್ಲಿ ಶೇ.36ರಷ್ಟು ಮತದಾನ

ರಾಜ್ಯದಲ್ಲಿ ಇಂದು ಪ್ರಥಮ ಹಂತದ ಮತದಾನ ನಡೆಯುತ್ತಿದ್ದು ದಕ್ಷಿಣ ಕರ್ನಾಟಕ ಭಾಗದ ಒಟ್ಟು 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಚಾಲನೆ ಪಡೆದುಕೊಂಡಿದೆ.

ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ ಕುಮಾರ್‌ ಅವರು ಬೆಳಿಗ್ಗೆ ಬೆಂಗಳೂರಿನ ಹೆಚ್‌.ಎಸ್‌.ಅರ್‌.ಲೇ ಔಟ್‌ ನಲ್ಲಿರುವ ಲಾರೆನ್ಸ್‌ ಇಂಗ್ಲೀಷ್‌ ಶಾಲೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕೇತಗಾನಹಳ್ಳಿ ಮತಗಟ್ಟೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪತ್ನಿ ಮತ್ತು ಪುತ್ರನ ಜೊತೆಗೆ ಬಂದು ಮತಚಲಾಯಿಸಿದರು. ಸಚಿವ ಯು.ಟಿ. ಖಾದರ್‌ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಬೋಳಿಯಾರು ಶಾಲೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.

ರಾಜ್ಯ ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಕೋಟತಟ್ಟು ಗ್ರಾಮ ಪಂಚಾಯತ್‌ ನ 165ನೇ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ದ.ಕ. ಕ್ಷೇತ್ರದ ಕಾಂಗ್ರೆಸ್‌ ಹುರಿಯಾಳು ಮಿಥುನ್‌ ರೈ ಅವರು ಮಂಗಳೂರಿನಲ್ಲಿ ಮತದಾನ ಮಾಡಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಪಕಕ್ಷೇತರ ಅಭ್ಯರ್ಥಿ ನಟ ಪ್ರಕಾಶ್‌ ರೈ, ನಂದನ್‌ ನಿಲೇಕಣಿ, ಜಗ್ಗೇಶ್‌ ದಂಪತಿ, ನಟ ರಮೇಶ್‌ ಅರವಿಂದ್‌ ದಂಪತಿ, ಮೈಸೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಜಯ ಶಂಕರ್‌, ಪ್ರಮೋದ್‌ ಮಧ್ವರಾಜ್‌ ಇದುವರೆಗೆ ತಮ್ಮ ಹಕ್ಕನ್ನು ಚಲಾಯಿಸಿದ ಪ್ರಮುಖರಾಗಿದ್ದಾರೆ.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ