Crime: ಗರ್ಭಿಣಿ ಸೊಸೆ ಮೇಲೆ ಮಾವನಿಂದ ಅತ್ಯಾಚಾರ!
Team Udayavani, Sep 14, 2023, 8:42 PM IST
ಮುಜಫ್ಫರನಗರ: ಉತ್ತರಪ್ರದೇಶದ ಮುಜಫ್ಫರನಗರದಲ್ಲಿ 7 ತಿಂಗಳ ಗರ್ಭಿಣಿ ಸೊಸೆಯ ಮೇಲೆ ಮಾವನೇ ಅತ್ಯಾಚಾರ ಮಾಡಿದ್ದಾನೆ. ಇಷ್ಟೆಲ್ಲ ಅನಾಹುತ ಆದ ಮೇಲೆ ಆಕೆಯ ಪತಿ, ಇನ್ನು ನೀನು ನನ್ನ ತಾಯಿಯಿದ್ದಂತೆ ಎಂದು ಹೇಳಿ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದಾನೆ! ಪ್ರಕರಣ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. 7 ತಿಂಗಳ ಗರ್ಭಿಣಿ ತನ್ನ ಮಾವ ಮತ್ತು ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ತಾನು ಯಾವ ತಪ್ಪೂ ಮಾಡದಿದ್ದರೂ ನನ್ನ ಮೇಲೆ ಪತಿ ಹಲ್ಲೆ ಮಾಡಿ, ಮನೆಯಿಂದ ಹೊರಹಾಕಿದ್ದಾನೆ, ಮಾವ ಅತ್ಯಾಚಾರ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.