
ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್; ಎಂಟು ಸೋಲಿನ ನಂಟು
Team Udayavani, Jan 17, 2022, 10:45 PM IST

ಬೆಂಗಳೂರು: ಪ್ರೊ ಕಬಡ್ಡಿ ಮೇಲಾಟದಲ್ಲಿ ತೆಲುಗು ಟೈಟಾನ್ಸ್ ತಂಡದ ಸೋಲಿನ ಆಟ ಮುಂದುವರಿದಿದೆ.
ಸೋಮವಾರದ ಮುಖಾಮುಖಿಯಲ್ಲಿ ಅದು ಬೆಂಗಾಲ್ ವಾರಿಯರ್ ಕೈಯಲ್ಲಿ 27-28 ಅಂತರದ ಆಘಾತಕ್ಕೆ ಸಿಲುಕಿತು. ಇದು 10 ಪಂದ್ಯಗಳಲ್ಲಿ ಟೈಟಾನ್ಸ್‌ಗೆ ಎದುರಾದ 8ನೇ ಸೋಲು. ಅದಿನ್ನೂ ಗೆಲುವಿನ ಮುಖವನ್ನೇ ಕಂಡಿಲ್ಲ!
ಬೆಂಗಾಲ್ ಪರ ರೈಡರ್ ಮಣಿಂದರ್ ಸಿಂಗ್ (10) ಅತ್ಯುತ್ತಮ ಆಟವಾಡಿದರು. ಇದು ಬೆಂಗಾಲ್‌ಗೆ ಒಲಿದ 5ನೇ ಜಯ.
ಯೋಧ ಪರಾಕ್ರಮ: ಮೊದಲ ಪಂದ್ಯದಲ್ಲಿ ಯುಪಿ ಯೋಧ 50-40 ರಿಂದ ಪುನೇರಿಗೆ ಸೋಲು ಣಿಸಿತು. ರೈಡರ್ ಗಿಲ್ ಯೋಧನಂತೆ ಹೋರಾಡಿ 21 ಅಂಕ ಗಳಿಸಿದರು.
ಟಾಪ್ ನ್ಯೂಸ್
