ಧ್ವನಿ ಸಮಸ್ಯೆ ಎಂದರೇನು? ನಿಮ್ಮ ಧ್ವನಿಯನ್ನು ಸಂರಕ್ಷಿಸಿಕೊಳ್ಳಿ

Team Udayavani, Jun 23, 2022, 12:25 PM IST

voice

ವಿವಿಧ ಪ್ರಾಣಿ ಪಕ್ಷಿಗಳು ಧ್ವನಿಯನ್ನು ಹೊರಡಿಸಬಲ್ಲವಾದರೂ ಅರ್ಥಪೂರ್ಣವಾಗಿ ಮಾತನಾಡುವ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ ಹೊಂದಿರುವವರು ನಾವು ಅಂದರೆ ಮನುಷ್ಯರು ಮಾತ್ರ. ನಮಗಿರುವ ಈ ಧ್ವನಿಶಕ್ತಿಯ ಪ್ರಾಮುಖ್ಯದ ಬಗ್ಗೆ ಅರಿವು ಹೆಚ್ಚಿಸಲು ಪ್ರತೀ ವರ್ಷ ಎಪ್ರಿಲ್‌ 16ರಂದು ವಿಶ್ವ ಧ್ವನಿ ದಿನವನ್ನು ಆಚರಿಸಲಾಗುತ್ತದೆ.

ಧ್ವನಿ ಸಮಸ್ಯೆ ಎಂದರೇನು? ಯಾವಾಗ ವೈದ್ಯರನ್ನು ಭೇಟಿಯಾಗಬೇಕು? ಧ್ವನಿಯಲ್ಲಿ ಯಾವುದೇ ಹಠಾತ್‌ ಅಥವಾ ನಿಧಾನವಾದ ಬದಲಾವಣೆಗಳು ಕಂಡುಬಂದು, ಸಾಕಷ್ಟು ದೀರ್ಘ‌ಕಾಲ ಉಳಿದುಕೊಂಡಿದ್ದರೆ ಎಚ್ಚರಿಕೆ ವಹಿಸಬೇಕು.

ಧ್ವನಿಯು ವ್ಯಕ್ತಿಯ ಜೀವಂತಿಕೆಯ ಸಂಕೇತ ಎಂಬುದಾಗಿ ಪರಿಗಣಿಸಲ್ಪಡುತ್ತದೆ. ವ್ಯಕ್ತಿ ನಮ್ಮೆದುರಿಗೆ ಇಲ್ಲದಿದ್ದರೂ ಕೇವಲ ಧ್ವನಿಯನ್ನು ಆಧರಿಸಿ ಗುರುತಿಸುವುದು ನಮಗೆ ಬಹಳ ಸುಲಭ. ಧ್ವನಿಯು ವ್ಯಕ್ತಿಯ ವ್ಯಕ್ತಿತ್ವದ ಹೆಗ್ಗುರುತು.

ಧ್ವನಿಪೆಟ್ಟಿಗೆಗೆ ಉಂಟಾಗುವ ಯಾವುದೇ ವಿಧವಾದ ಹಾನಿಯು ವ್ಯಕ್ತಿ ಪರಿಣಾಮಕಾರಿಯಾಗಿ ಮಾತನಾಡುವ ಶಕ್ತಿಗೆ ಕುಂದು ತರುತ್ತದೆ ಮಾತ್ರವಷ್ಟೇ ನಿಮ್ಮ ಅಲ್ಲ; ಧ್ವನಿ ಪೆಟ್ಟಿಗೆಯು ನಮ್ಮ ಶ್ವಾಸಾಂಗ ವ್ಯೂಹದ ಪ್ರಧಾನ ದ್ವಾರವಾಗಿಯೂ ಕೆಲಸ ಮಾಡುವುದರಿಂದ ಕೆಲವೊಮ್ಮೆ ಮಾರಣಾಂತಿಕವೂ ಆಗಬಹುದು.

ನಿಜ, ನಾವು ಸುರಕ್ಷಿತವಾಗಿ ಆಹಾರ ಸೇವಿಸಬೇಕಾದರೆ ಈ ದ್ವಾರಗಳು ಸರಿಯಾಗಿ ಮುಚ್ಚಿಕೊಂಡಿರಬೇಕು. ಇದು ಧ್ವನಿಪೆಟ್ಟಿಗೆಯ ಜೀವಶಾಸ್ತ್ರೀಯ ಚಟುವಟಿಕೆ. ಅದರ ಜೀವಶಾಸ್ತ್ರೀಯೇತರ ಕೆಲಸ ಎಂದರೆ, ಧ್ವನಿಯನ್ನು ಉತ್ಪತ್ತಿ ಮಾಡುವುದು. ಅದು ನಾವು ಪರಿಣಾಮಕಾರಿಯಾಗಿ ಸಂವಹನ ನಡೆಸುವುದಕ್ಕಾಗಿ ಧ್ವನಿಯನ್ನು ಉತ್ಪಾದಿಸುತ್ತದೆ. ನಮ್ಮನ್ನು ನಾವು ಇತರರಿಗಿಂತ ಭಿನ್ನವಾಗಿರಿಸಿಕೊಳ್ಳಲು ಸಹಾಯ ಮಾಡುವುದು, ನಮ್ಮ ಲಿಂಗತ್ವ ಗುರುತನ್ನು ಒದಗಿಸುವುದು, ನಾವು ಹಾಡಲು, ಬೇರೆ ಬೇರೆ ಸದ್ದುಗಳನ್ನು ಅನುಕರಿಸಲು, ನಮ್ಮ ವಿವಿಧ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದು ಇದೇ ಧ್ವನಿಪೆಟ್ಟಿಗೆಯಿಂದ ಉತ್ಪಾದನೆಗೊಂಡ ಧ್ವನಿ. ಹಾಗಾದರೆ ನಮ್ಮ ಧ್ವನಿಪೆಟ್ಟಿಗೆಯ ಮೇಲೆ ಎಷ್ಟು ದೊಡ್ಡ ಹೊರೆ, ಹೊಣೆಗಾರಿಕೆ ಇದೆ ಎಂಬುದನ್ನು ಲೆಕ್ಕ ಹಾಕಿ! ಇಷ್ಟು ಪ್ರಾಮುಖ್ಯ ಕಾರ್ಯಭಾರವನ್ನು ಹೊಂದಿರುವ ಧ್ವನಿಪೆಟ್ಟಿಗೆಯ ಬಗ್ಗೆ ನಾವು ಎಷ್ಟು ಎಚ್ಚರ, ಕಾಳಜಿ ವಹಿಸುತ್ತಿದ್ದೇವೆ? ದುರದೃಷ್ಟವಶಾತ್‌, ನಾವು ಧ್ವನಿ ಸಂಬಂಧಿ ಸಮಸ್ಯೆಗಳನ್ನು ಅನುಭವಿಸುವ ವರೆಗೆ ಧ್ವನಿಪೆಟ್ಟಿಗೆಯ ಪ್ರಾಮುಖ್ಯದ ಬಗ್ಗೆ ನಮಗೆ ಅರಿವಾಗುವುದೇ ಇಲ್ಲ. ಈಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕು, ಧ್ವನಿಸಂಬಂಧಿ ಸಮಸ್ಯೆಗಳು ಉಲ್ಬಣಗೊಂಡು ಗಂಭೀರ ದುಷ್ಪರಿಣಾಮ ಉಂಟುಮಾಡುವುದಕ್ಕೆ ಮುನ್ನ ನಾವು ನಮ್ಮ ಧ್ವನಿಪೆಟ್ಟಿಗೆಯ ಬಗ್ಗೆ ಕಾಳಜಿ ವಹಿಸಬೇಕು.

ಯಾರು ಧ್ವನಿ ಸಮಸ್ಯೆಗಳಿಗೆ ತುತ್ತಾಗಬಹುದು?

ವೃತ್ತಿಪರ ಧ್ವನಿ ಬಳಕೆದಾರರಲ್ಲಿ ಧ್ವನಿಸಂಬಂಧಿ ಸಮಸ್ಯೆಗಳು ಹೆಚ್ಚು ಕಂಡುಬರುತ್ತವೆ. ಇಂಥವರಲ್ಲಿ ಶಿಕ್ಷಕರು, ಗಾಯಕ-ಗಾಯಕಿಯರು (ತರಬೇತಿ ಹೊಂದಿದವರು, ತರಬೇತಿ ಇಲ್ಲದ ಹವ್ಯಾಸಿಗಳು, ಭಜನೆ ಹಾಡುಗಾರರು ಮತ್ತು ಆರ್ಕೆಸ್ಟ್ರಾ ಹಾಡುಗಾರರು), ಯಕ್ಷಗಾನ ಕಲಾವಿದರು, ನಾಟಕ ಕಲಾವಿದರು, ಬಸ್‌ ನಿರ್ವಾಹಕರು, ಮಾರಾಟಗಾರರು ಮತ್ತು ದೂರವಾಣಿ ಆಪರೇಟರ್‌ಗಳು ಸೇರಿದ್ದಾರೆ. ಧ್ವನಿಸಂಬಂಧಿ ಸಮಸ್ಯೆಗಳು ಗೃಹಿಣಿರು, ಸಣ್ಣ ಮಕ್ಕಳು ಮತ್ತು ಹಿರಿಯರಲ್ಲಿಯೂ ಕಂಡುಬರುತ್ತವೆ.

ಸ್ಪೀಚ್‌ ಪೆಥಾಲಜಿಸ್ಟ್‌ಗಳನ್ನು ಯಾಕೆ ಆದಷ್ಟು ಬೇಗನೆ ಕಾಣಬೇಕು?

ಧ್ವನಿ ಸಂಬಂಧಿ ಸಮಸ್ಯೆಗಳಲ್ಲಿ ಹಲವನ್ನು ವರ್ತನಾತ್ಮಕ ಧ್ವನಿ ಚಿಕಿತ್ಸೆ (ಬಿಹೇವಿಯರಲ್‌ ವಾಯಿಸ್‌ ಥೆರಪಿ)ಯಿಂದಲೇ ಗುಣಪಡಿಸಬಹುದಾದ್ದರಿಂದ ಆದಷ್ಟು ಬೇಗನೆ ಸ್ಪೀಚ್‌ ಪೆಥಾಲಜಿಸ್ಟ್‌ ಅವರನ್ನು ಸಂಪರ್ಕಿಸಬೇಕು. ಸರಳವಾಗಿ ಹೇಳಬೇಕೆಂದರೆ, ಧ್ವನಿಸಂಬಂಧಿ ಸಮಸ್ಯೆಗಳನ್ನು ಬೇಗನೆ ಗುರುತಿಸಿದರೆ ಧ್ವನಿ ಚಿಕಿತ್ಸೆಯಿಂದ ಅವುಗಳಿಗೆ ಉಪಶಮನ ಒದಗಿಸಬಹುದು. ಸಮಸ್ಯೆ ಉಲ್ಬಣಿಸಿದರೆ ಧ್ವನಿ ಚಿಕಿತ್ಸೆ ಮತ್ತು/ ಅಥವಾ ಶಸ್ತ್ರಚಿಕಿತ್ಸೆ ಅಗತ್ಯ ಬೀಳಬಹುದು.

ಸ್ಪೀಚ್‌ ಪೆಥಾಲಜಿಸ್ಟ್‌ಗಳನ್ನು ಬೇಗನೆ ಕಾಣಬೇಕಾದ ಇತರರು ಯಾರು?

ಪ್ರೌಢ ವಯಸ್ಸಿಗೆ ಕಾಲಿಡುವ ಸಮಯದಲ್ಲಿ ಧ್ವನಿ ಬೆಳವಣಿಗೆ ಉಂಟಾಗದ ಮತ್ತು ಹುಡುಗಿಯರ ಧ್ವನಿಯನ್ನು ಹೋಲುವ ಧ್ವನಿಯುಳ್ಳ ಹದಿಹರಯದ ಹುಡುಗರು, ಮೂಗಿನಿಂದ ಮಾತಾಡಿದಂತಹ ಧ್ವನಿಯುಳ್ಳವರು, ನರಶಾಸ್ತ್ರೀಯ ಸಮಸ್ಯೆಗಳನ್ನು ಹೊಂದಿರುವ ವಯೋವೃದ್ಧರು ಮತ್ತು ತಮ್ಮ ಧ್ವನಿ ತೀರಾ ಸಣ್ಣದಾಗಿದೆ ಎಂದುಕೊಳ್ಳುವವರು, ಸಂಭಾಷಣೆಯನ್ನು ಪೂರ್ಣಗೊಳಿಸಲು ಕಷ್ಟವಾಗಿ ಕೀರಲು ಧ್ವನಿಯೊಂದಿಗೆ ಏದುಸಿರು ಬಿಡುವವರು ಕೂಡ ಆದಷ್ಟು ಬೇಗನೆ ಸ್ಪೀಚ್‌ ಪೆಥಾಲಜಿಸ್ಟ್‌ರನ್ನು ಕಾಣಬೇಕು.

– ಡಾ| ದೀಪಾ ಎನ್‌. ದೇವಾಡಿಗ ಅಸೋಸಿಯೇಟ್‌ ಪ್ರೊಫೆಸರ್‌, ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ ಟಿಎಂಎ ಪೈ ಆಸ್ಪತ್ರೆ, ಉಡುಪಿ/ ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.