ಹುಣಸೂರು: ಸಾಲಿಗ್ರಾಮ ಠಾಣಾ ಪಿ.ಎಸ್.ಐ. ಹೃದಯಾಘಾತದಿಂದ ನಿಧನ
Team Udayavani, Jun 29, 2022, 9:56 AM IST
ಹುಣಸೂರು: ನಗರದ ಮೈಸೂರು ರಸ್ತೆಯ ಹೌಸಿಂಗ್ ಬೋರ್ಡ್ ನಿವಾಸಿ ಪ್ರಸ್ತುತ ಸಾಲಿಗ್ರಾಮ ಠಾಣೆಯ ಪಿ.ಎಸ್.ಐ. ದೊಡ್ಡೇಗೌಡ (59) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪಿ.ಎಸ್.ಐ. ದೊಡ್ಡೇಗೌಡ ಅವರು ಸೋಮವಾರ ರಾತ್ರಿ ರೌಡ್ಸ್ ನಲ್ಲಿದ್ದ ಸಂದರ್ಭದಲ್ಲಿ ಅಸ್ವಸ್ಥಗೊಂಡ ಅವರನ್ನು ಕೆ.ಆರ್. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.