ಮೂರನೇ ಅಲೆ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ


Team Udayavani, Jan 20, 2022, 3:31 PM IST

ಮೂರನೇ ಅಲೆ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ

ದೇವನಹಳ್ಳಿ: ಕೊರೊನಾ ಮೂರನೇ ಅಲೆ ವ್ಯಾಪಿಸುತ್ತಿದ್ದು, ಸಾರ್ವಜನಿಕರು ಮುಂಜಾಗ್ರತಾ ಕ್ರಮ ಕೈಗೊಂಡು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಂಡು ಮೂರನೇ ಅಲೆಯನ್ನು ನಿಯಂತ್ರಿಸಲು ಪ್ರಯತ್ನಿ ಸಬೇಕು ಎಂದು ತಾಪಂ ಆಡಳಿತಾಧಿಕಾರಿ ರಮೇಶ್‌ ರೆಡ್ಡಿ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಪಂ ವತಿಯಿಂದ ಹಮ್ಮಿಕೊಂಡಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ವಿವಿಧ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ
ಮಾತನಾಡಿದ ಅವರು, ಕೇಂದ್ರ, ರಾಜ್ಯ ಸರ್ಕಾರ ಹೊರಡಿಸಿರುವ ಕೋವಿಡ್‌ ನಿಯಮ ಕಠಿಣವಾಗಿ ಜಾರಿಯಾಗುವಂತೆ ಅಗತ್ಯ ಕ್ರಮ ಅಧಿಕಾರಿಗಳು ವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಮೊದಲ ಮತ್ತು ಎರಡನೇ ಡೋಸ್‌ ಲಸಿಕೆ ಪಡೆಯುವಂತೆ ಆಗಬೇಕು. ಯಾರು ಲಸಿಕೆ ತೆಗೆದುಕೊಂಡಿರುವುದಿಲ್ಲ ಅಂತಹವರಿಗೆ ಲಸಿಕೆ ಹಾಕಿಸಬೇಕು ಎಂದರು.

ಕಾಮಗಾರಿ ಪೂರ್ಣಗೊಳಿಸಿ: ಎಲ್ಲ ಇಲಾಖೆಗಳಿಗೆ ಸರ್ಕಾರದಿಂದ ಬಂದಿರುವ ಎಲ್ಲ ಅನುದಾನಗಳನ್ನು ಫೆಬ್ರವರಿ 15ರ ಒಳಗಾಗಿ ಖರ್ಚು ಮಾಡಬೇಕು. ಸಮರ್ಪಕವಾಗಿ ಅನುದಾನವನ್ನು ಬಳಕೆ ಮಾಡಬೇಕು. ಬಂದಿರುವ ಅನುದಾನ ಸರ್ಕಾರಕ್ಕೆ ವಾಪಸ್‌ ಹೋಗದಂತೆ ಎಚ್ಚರವಹಿಸಿ ಕೆಲಸ ಮಾಡಬೇಕು. ಯಾವುದೇ ಕಾಮಗಾರಿ ಕುಂಠಿತಗೊಂಡಿದ್ದರೆ ಅಂತಹ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ತಲುಪುವಂತೆ ಆಗಬೇಕು ಎಂದು ಸೂಚನೆ ನೀಡಿದರು.

ಬಿದ್ದ ಮನೆಗೆ ಪರಿಹಾರ: ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್‌. ಡಿ. ವಸಂತ್‌ ಕುಮಾರ್‌ ಮಾತನಾಡಿ, ಗ್ರಾಪಂಗಳಲ್ಲಿ 15ಕ್ಕೂ ಹೆಚ್ಚು ಸದಸ್ಯರಿರುವ ಕಡೆ ಮೂವತ್ತು ಮನೆ, 15ರಿಂದ 24 ಸದಸ್ಯರಿರುವ ಕಡೆಗಳಲ್ಲಿ 40 ಮನೆ, 25ಕ್ಕಿಂತ ಹೆಚ್ಚು ಇರುವ ಸದಸ್ಯರ ಕಡೆ ಮನೆಗಳು ಮಂಜೂರಾಗಿದ್ದು, ಅರ್ಹರನ್ನು ಗುರುತಿಸಿ ಹಂಚಿಕೆ ಮಾಡಬೇಕು. 1,835 ಹೆಕ್ಟೇರ್‌ ಮಳೆಗೆ ಬೆಳೆ ನಾಶವಾಗಿದ್ದು, ಒಂದು ಕೋಟಿ 24 ಸಾವಿರ ರೂ.ಗಳ ಪರಿಹಾರವನ್ನು ನೀಡಲಾಗಿದೆ. 179 ಮನೆಗಳು ಬಿದ್ದಿದ್ದವು. ಅದಕ್ಕೂ ಸಹ ಪರಿಹಾರವನ್ನು ನೀಡಲಾಗಿದೆ ಎಂದರು.

ಕ್ರಮ ಕೈಗೊಳ್ಳಲಾಗುತ್ತದೆ: ಆರು ಕಡೆಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆಗಬೇಕು. ನರೇಗಾ ಯೋಜನೆಯಡಿ ಉತ್ತಮ ಕೆಲಸ ಮಾಡಲಾಗುತ್ತಿದೆ. ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ ಕಡೆ ಕೊಳವೆಬಾವಿ ಕೊರೆಸಿ ನೀರು ಕೊಡಲಾಗುವುದು. ಖಾಸಗಿ ಬೋರವೆಲ್‌ ಮೂಲಕ ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ತಾಪಂ ಸಹಾಯಕ ನಿರ್ದೇಶಕ ಸುನಿಲ್‌, ಪ್ರಧಾನಮಂತ್ರಿ ರೋಜ್‌ ಗಾರ್‌ ಯೋಜನೆ ಸಹಾಯಕ ನಿರ್ದೇಶಕ ನಾರಾಯಣಪ್ಪ, ಕೃಷಿ ಸಹಾಯಕ ನಿರ್ದೇಶಕಿ ವೀಣಾ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಾಸಂತಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಟಾಪ್ ನ್ಯೂಸ್

1-sa-dsd

ಅಮರನಾಥ ಯಾತ್ರೆ : ಬೆಳಗ್ಗೆ 7 ರಿಂದ ಸಂಜೆ 6 ರ ನಡುವೆ ಮಾತ್ರ ಪ್ರಯಾಣ

mamata

ಸಿಎಂ ಮಮತಾ ಬ್ಯಾನರ್ಜಿ ಮನೆಯಲ್ಲಿ ಭಾರಿ ಭದ್ರತಾ ಲೋಪ ; ತನಿಖೆ

kejriwal 2

ಉದಯಪುರ-ಅಮರಾವತಿ ಹತ್ಯೆಗಳನ್ನು ಖಂಡಿಸಿದ ದೆಹಲಿ ಸಿಎಂ ಕೇಜ್ರಿವಾಲ್

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಹೋದ ಯುವತಿ ನಾಪತ್ತೆ

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಹೋದ ಯುವತಿ ನಾಪತ್ತೆ

1-sf-s-fdf

ಪ್ರಧಾನಿ ಕಚೇರಿ ಅಧಿಕಾರಿ ಎಂದು ಡಿಸಿಗೆ ಕರೆ : ದೂರು ದಾಖಲು!

HDK

ಮಂಕುಬೂದಿ ಎರಚಿ…; ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಹೆಚ್ ಡಿಕೆ ಕಿಡಿ

ನೇತ್ರಾವತಿ ನದಿಗೆ ಈಜಲು ಹೋದ ಕಾಲೇಜು ವಿದ್ಯಾರ್ಥಿಗಳು : ಓರ್ವ ನಿರುಪಾಲು, ನಾಲ್ವರ ರಕ್ಷಣೆ

ನೇತ್ರಾವತಿ ನದಿಗೆ ಈಜಲು ಹೋದ ಐವರು ಯುವಕರು : ಓರ್ವ ನಿರುಪಾಲು, ನಾಲ್ವರ ರಕ್ಷಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-9

ಎಎಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿ ಸಾಧ್ಯ

ಭೂಸ್ವಾಧೀನಕ್ಕೆ ನೋಟಿಸ್‌ ಜಾರಿ

ಭೂಸ್ವಾಧೀನಕ್ಕೆ ನೋಟಿಸ್‌ ಜಾರಿ

tdy-22

ಅಪೌಷ್ಟಿಕತೆ ನಿವಾರಣೆಗೆ ಪಣ

ಕಂಪನಿಗಳ ಸಾಮಾಜಿಕ ಜವಾಬ್ದಾರಿಯಡಿ ಶಿಕ್ಷಣಕ್ಕೆ ಒತ್ತು; ಶಾಸಕ ವೆಂಕಟರಮಣಯ್ಯ

ಕಂಪನಿಗಳ ಸಾಮಾಜಿಕ ಜವಾಬ್ದಾರಿಯಡಿ ಶಿಕ್ಷಣಕ್ಕೆ ಒತ್ತು; ಶಾಸಕ ವೆಂಕಟರಮಣಯ್ಯ

ಜೀವ ಉಳಿವಿಗೆ ಟ್ರಾಫಿಕ್‌ ಶಿಕ್ಷಣ ಅವಶ್ಯ; ಲಕ್ಷ್ಮಣ್‌ ನಾಯಕ್‌

ಜೀವ ಉಳಿವಿಗೆ ಟ್ರಾಫಿಕ್‌ ಶಿಕ್ಷಣ ಅವಶ್ಯ; ಲಕ್ಷ್ಮಣ್‌ ನಾಯಕ್‌

MUST WATCH

udayavani youtube

ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!

udayavani youtube

ಮದ್ರಸಾದಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…

udayavani youtube

ಎಂ.ಎಸ್ ಧೋನಿಯ 17 ವರ್ಷ ಹಿಂದಿನ ದಾಖಲೆ ಮುರಿದ ರಿಷಭ್ ಪಂತ್

udayavani youtube

ಮಲ್ಪೆಯಲ್ಲಿ ಲಂಗರು ಹಾಕಿದ್ದ ದೋಣಿಯ ಅವಶೇಷ ಕಾಪು ಪರಿಸರದಲ್ಲಿ ಪತ್ತೆ… ಅಪಾರ ನಷ್ಟ

udayavani youtube

ಹುಣಸೂರು : ಆಕಸ್ಮಿಕ ಬೆಂಕಿಗೆ ಲಕ್ಷಾಂತರ ರೂಪಾಯಿ ನಷ್ಟ… ಕಂಗಾಲಾದ ಮಾಲೀಕ

ಹೊಸ ಸೇರ್ಪಡೆ

1-sa-dsd

ಅಮರನಾಥ ಯಾತ್ರೆ : ಬೆಳಗ್ಗೆ 7 ರಿಂದ ಸಂಜೆ 6 ರ ನಡುವೆ ಮಾತ್ರ ಪ್ರಯಾಣ

mamata

ಸಿಎಂ ಮಮತಾ ಬ್ಯಾನರ್ಜಿ ಮನೆಯಲ್ಲಿ ಭಾರಿ ಭದ್ರತಾ ಲೋಪ ; ತನಿಖೆ

kejriwal 2

ಉದಯಪುರ-ಅಮರಾವತಿ ಹತ್ಯೆಗಳನ್ನು ಖಂಡಿಸಿದ ದೆಹಲಿ ಸಿಎಂ ಕೇಜ್ರಿವಾಲ್

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಹೋದ ಯುವತಿ ನಾಪತ್ತೆ

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಹೋದ ಯುವತಿ ನಾಪತ್ತೆ

1-sf-s-fdf

ಪ್ರಧಾನಿ ಕಚೇರಿ ಅಧಿಕಾರಿ ಎಂದು ಡಿಸಿಗೆ ಕರೆ : ದೂರು ದಾಖಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.