ಗೆಲುವಿನ ಕನಸಲ್ಲಿ ಪಂಜಾಬ್- ಹೈದರಾಬಾದ್: ಪಂಜಾಬ್ ತಂಡದಲ್ಲಿ ಮೂರು ಬದಲಾವಣೆ
Team Udayavani, Apr 21, 2021, 3:01 PM IST
ಚೆನ್ನೈ: ಸತತ ಸೋಲಿನಿಂದ ಕಂಗೆಟ್ಟಿರುವ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಇಂದು ಮುಖಾಮುಖಿಯಾಗುತ್ತಿದೆ. ಚಿಪಾಕ್ ಅಂಗಳದಲ್ಲಿ ಟಾಸ್ ಗೆದ್ದ ಪಂಜಾಬ್ ನಾಯಕ ರಾಹುಲ್, ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡ ಮೊದಲ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿ ಬೀಗಿದ ಬೆನ್ನಲ್ಲೇ ಸತತ ಎರಡು ಪಂದ್ಯ ಸೋತು ಆಘಾತಕ್ಕೊಳಗಾಗಿದೆ. ಡೇವಿಡ್ ವಾರ್ನರ್ ಸಾರಥ್ಯದ ಹೈದರಾಬಾದ್ ತಂಡ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದೆ. ಇಂದಿನ ಪಂದ್ಯ ಗೆದ್ದು ಜಯದ ನಗೆ ಬೀರಲು ಎರಡೂ ತಂಡಗಳೂ ಪ್ರಯತ್ನಿಸುತ್ತಿದೆ.
ಇಂದಿನ ಪಂದ್ಯಕ್ಕಾಗಿ ಎರಡೂ ತಂಡಗಳು ಕೆಲವು ಬದಲಾವಣೆ ಮಾಡಿಕೊಂಡಿದೆ. ಪಂಜಾಬ್ ತಂಡದಲ್ಲಿ ಜೇ ರಿಚರ್ಡ್ಸನ್, ಜಲಜ್ ಸಕ್ಸೇನ ಮತ್ತು ಮೆರಿಡಿತ್ ಹೊರಗುಳಿದರೆ, ಮೋಸಿಸ್ ಹೆನ್ರಿಕ್ಸ್, ಮುರುಗನ್ ಅಶ್ವಿನ್ ಮತ್ತು ಫಾಬಿಯನ್ ಅಲೆನ್ ಸ್ಥಾನ ಪಡೆದಿದ್ದಾರೆ.
ಹೈದರಾಬಾದ್ ತಂಡದಲ್ಲೂ ಮೂರು ಬದಲಾವಣೆ ಮಾಡಲಾಗಿದೆ. ಮುಜೀಬ್ ಉರ್ ರೆಹಮಾನ್ ಬದಲಿಗೆ ಕೇನ್ ವಿಲಿಯಮ್ಸನ್, ಸಮದ್ ಬದಲಿಗೆ ಕೇದಾರ್ ಜಾಧವ್ ಮತ್ತು ಮನೀಷ್ ಪಾಂಡೆ ಬದಲಿಗೆ ಸಿದ್ದಾರ್ಥ್ ಕೌಲ್ ಇಂದು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ತಂಡಗಳು:
ಪಂಜಾಬ್: ಕೆ.ಎಲ್.ರಾಹುಲ್ (ನಾ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್ ದೀಪಕ್ ಹೂಡಾ, ನಿಕೋಲಸ್ ಪೂರನ್, ಮೋಸಿಸ್ ಹೆನ್ರಿಕ್ಸ್, ಶಾರುಖ್ ಖಾನ್, ಫಾಬಿಯನ್ ಅಲೆನ್, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ಅರ್ಶ್ ದೀಪ್ ಸಿಂಗ್
ಹೈದರಾಬಾದ್: ಡೇವಿಡ್ ವಾರ್ನರ್ (ನಾ), ಜಾನಿ ಬೇರ್ ಸ್ಟೋ, ವಿರಾಟ್ ಸಿಂಗ್, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, , ಅಭಿಷೇಕ್ ಶರ್ಮಾ, ಕೇದಾರ್ ಜಾಧವ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಖಲೀಲ್ ಅಹಮದ್, ಸಿದ್ದಾರ್ಥ್ ಕೌಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಚ್ಚಿದ ಬಾಗಿಲಿನ ಹಿಂದೆ ಆರ್‌ಸಿಬಿ: ಗುಜರಾತ್ ಟೈಟಾನ್ಸ್ ವಿರುದ್ಧ ಇಂದು ಅಂತಿಮ ಪಂದ್ಯ
ರೋಚಕ ಜಯ ಸಾಧಿಸಿದ ಲಕ್ನೋ ಜೈಂಟ್ಸ್ ಪ್ಲೇಆಫ್ ಗೆ ಖಚಿತ
ಐಪಿಎಲ್ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳಿಗೆ ಕೋಲ್ಕತಾ ಸಜ್ಜು
ಐಪಿಎಲ್ 2022: ಕೋಲ್ಕತಾ ನೈಟ್ರೈಡರ್ ಗೆ ಬೇಕು ದೊಡ್ಡ ಗೆಲುವು
ಹೈದರಾಬಾದ್ಗೆ ದೂರದಲ್ಲಿ ಪ್ಲೇ ಆಫ್ ಆಸೆ; ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಗೆಲುವು