ಮಳೆಗಾಲದ ತುರ್ತು ಕಾಮಗಾರಿಗಳು ವಿಳಂಬ

ಮೇ ಮೊದಲ ವಾರದಿಂದ ನಡೆಸಲು ಸಿದ್ಧತೆ

Team Udayavani, Apr 27, 2020, 6:25 AM IST

ಮಳೆಗಾಲದ ತುರ್ತು ಕಾಮಗಾರಿಗಳು ವಿಳಂಬ

ಕುದ್ರೋಳಿ ಬಳಿಯ ರಾಜಕಾಲುವೆ.

ವಿಶೇಷ ವರದಿ-ಮಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸ್ಥಗಿತಗೊಂಡಿರುವ ಮಳೆಗಾಲದ ತುರ್ತು ಕಾಮಗಾರಿಗಳನ್ನು ಕೂಡಲೇ ಆರಂಭಿಸಲು ಮಹಾನಗರ ಪಾಲಿಕೆ ಕಾರ್ಯೋನ್ಮುಖವಾಗಿದೆ.

ಬೃಹತ್‌ ಚರಂಡಿಗಳು ಹಾಗೂ ಇತರ ಚರಂಡಿಗಳ ಹೂಳೆತ್ತುವ 1.68 ಕೋ. ರೂ. ವೆಚ್ಚದ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್‌ ಕರೆಯಲಾಗಿದ್ದು ಮೇ ಮೊದಲ ವಾರದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ತ್ವರಿತಗತಿಯಲ್ಲಿ ಪೂರ್ಣ ಗೊಳಿಸಲು ಸಿದ್ಧತೆಗಳನ್ನು ನಡೆಸುತ್ತಿದೆ. ಮೇ ಅಂತ್ಯ ಅಥವಾ ಜೂನ್‌ ಪ್ರಥಮ ವಾರದಲ್ಲಿ ಮಳೆಗಾಲ ಆರಂಭವಾಗಲಿದ್ದು ಇದರೊಳಗೆ ತುರ್ತು ಕಾಮಗಾರಿಗಳನ್ನು ಪೂರ್ಣಗೊಳಿಸ ಬೇಕಾದ ಅನಿವಾರ್ಯವಿದೆ.

ಮಹಾನಗರ ಪಾಲಿಕೆಯಲ್ಲಿ ಪ್ರತಿ ವರ್ಷ ಮಾರ್ಚ್‌ ತಿಂಗಳಿನಲ್ಲಿ ಮಳೆ ಗಾಲಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಎಪ್ರಿಲ್‌ನಿಂದ ಕಾಮ ಗಾರಿಗಳನ್ನು ಆರಂಭಿಸಿ ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ. ಆದರೆ ಈ ಬಾರಿ ಮನಪಾ ಸಿಬಂದಿ ಯನ್ನು ಕೊರೊನಾ ನಿಯಂತ್ರಣ ಕೆಲಸಗಳಲ್ಲಿ ತೊಡಗಿಸಿ ಕೊಳ್ಳಲಾಗಿದ್ದು ಕಚೇರಿ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ. ಮಾ. 24ರಿಂದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮಳೆಗಾಲ ಸಮೀಪಿಸುತ್ತಿದ್ದು ತುರ್ತು ಕಾಮ ಗಾರಿಗಳನ್ನು ನಡೆಸದಿದ್ದರೆ ಮುಂದೆ ಸಮಸ್ಯೆ ತಲೆದೋರುವ ಸಾಧ್ಯತೆಗಳಿವೆ.

ರಾಜಕಾಲುವೆಗಳ ಹೂಳೆತ್ತುವಿಕೆ
ಮಂಗಳೂರು ನಗರದಲ್ಲಿ ಅತ್ತಾವರ, ಕಂಕನಾಡಿ, ಕುದ್ರೋಳಿ, ಬಲ್ಲಾಳ್‌ಬಾಗ್‌, ಜಪ್ಪಿನಮೊಗರು, ಪಂಪ್‌ವೆಲ್‌, ಕೊಟ್ಟಾರಚೌಕಿ, ಕೋಡಿಕಲ್‌, ಮಾಲೆಮಾರ್‌, ಉಜ್ಯೋಡಿ, ಜಪ್ಪು ಮಹಾಕಾಳಿಪಡು³, ಕೊಂಚಾಡಿ, ಪಾಂಡೇಶ್ವರ ಸಹಿತ ನಗರದಲ್ಲಿರುವ ರಾಜ ಕಾಲುವೆಗಳು ಹಾಗೂ ಇತರ ಚರಂಡಿಗಳ ಹೂಳೆತ್ತುವಿಕೆ ಕಾಮಗಾರಿಗಳನ್ನು 36 ಪ್ಯಾಕೇಜ್‌ಗಳಾಗಿ ಮಾಡಲಾಗಿದೆ. ಮೇ 10ರೊಳಗೆ ಕಾಮಗಾರಿ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಗ್ಯಾಂಗ್‌ಗಳ ರಚನೆ
ಪಾಲಿಕೆಯ 60 ವಾರ್ಡ್‌ಗಳಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಗಳಲ್ಲಿ ತುಂಬಿರುವ ಹೂಳು ಹಾಗೂ ಮಣ್ಣು ತೆಗೆದು ಸ್ವತ್ಛಗೊಳಿಸುವ ಕಾರ್ಯಕ್ಕೆ ಗ್ಯಾಂಗ್‌ಗಳನ್ನು ರಚಿಸುವ ಕಾರ್ಯ ನಡೆಯುತ್ತಿದ್ದು ಪ್ರತಿವಾರ್ಡ್‌ಗೂ 2.12 ಲಕ್ಷ ರೂ. ಮೀಸಲಿರಿಸಲಾಗಿದೆ.

ತುರ್ತು ಕಾಮಗಾರಿಗೆ ಆದ್ಯತೆ ?
ತೋಡು, ಚರಂಡಿಗಳ ಹೂಳೆತ್ತುವುದು, ಭೂಕುಸಿತ ತಡೆ ಸಹಿತ ತುರ್ತು ಕಾಮಗಾರಿಗಳನ್ನು ಮಾತ್ರ ಈ ಬಾರಿ ಕೈಗೆತ್ತಿಗೊಳ್ಳಲಾಗುತ್ತಿದೆ. ಉಳಿದಂತೆ ತೀರಾ ಅವಶ್ಯವಿರುವ ಕಾಮಗಾರಿಗಳಿಗೆ ಮಾತ್ರ ಆದ್ಯತೆ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆದಾಯ ಸಂಗ್ರಹದಲ್ಲಿ ಹಿನ್ನಡೆ
ಮನಪಾ ಆದಾಯ ಸಂಗ್ರಹದಲ್ಲೂ ಹಿನ್ನಡೆಯಾಗಿದೆ. ಮಾರ್ಚ್‌, ಎಪ್ರಿಲ್‌ನಲ್ಲಿ ಆಸ್ತಿ ತೆರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವ ಸಮಯ.ಲಾಕ್‌ಡೌನ್‌ನಿಂದಾಗಿ ತೆರಿಗೆ ಸಂಗ್ರ ಹಕ್ಕೆ ಹಿನ್ನಡೆಯಾಗಿದೆ. ಪಾಲಿಕೆ ನೀರಿನ ಶುಲ್ಕ ವಸೂಲಿ ಕೂಡ ಸ್ಥಗಿತ ಗೊಂಡಿದೆ. ರಾಜ್ಯ ಸರಕಾರದ ಎಸ್‌ಎಫ್‌ಸಿ ಅನುದಾನ ಲಭ್ಯತೆಯೂ ಅನಿಶ್ಚಿತತೆಯಲ್ಲಿದೆ.

ಮುನ್ನೆಚ್ಚರಿಕೆ
ಮಳೆಗಾಲದ ತುರ್ತು ಕಾಮ ಗಾರಿಗಳು ಮೇ ತಿಂಗಳ ಮೊದಲ ವಾರದಿಂದ ಆರಂಭಗೊಳ್ಳಲಿದೆ. ಮಳೆಗಾಲದಲ್ಲಿ ಹೆಚ್ಚು ಕಂಡುಬರುವ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆ ಆರೋಗ್ಯ ವಿಭಾಗದಿಂದ ಪೂರಕ ಕ್ರಮಗಳು ಆರಂಭಗೊಂಡಿದ್ದು ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲದಂತೆ ಕ್ರಮಗಳನ್ನು ಕೈಗೊಳ್ಳಲು ನಗರ ಯೋಜನಾ ಇಲಾಖೆಯ ಅಧಿ ಕಾರಿಗಳಿಗೆ ಸೂಚನೆ ನೀಡಲಾಗಿದೆ
– ದಿವಾಕರ್‌ ಪಾಂಡೇಶ್ವರ, ಮೇಯರ್‌, ಮನಪಾ

ಟಾಪ್ ನ್ಯೂಸ್

ದೇವಸ್ಥಾನ ಜೀರ್ಣೋದ್ಧಾರ ಅನುದಾನಕ್ಕೆ ಲಂಚ ಪಡೆಯುವಾಗ ಮುಜರಾಯಿ ತಹಶೀಲ್ದಾರ ಎಸಿಬಿ ಬಲೆಗೆ

ದೇವಸ್ಥಾನ ಜೀರ್ಣೋದ್ಧಾರ ಅನುದಾನಕ್ಕೆ ಲಂಚ ಪಡೆಯುವಾಗ ಮುಜರಾಯಿ ತಹಶೀಲ್ದಾರ ಎಸಿಬಿ ಬಲೆಗೆ

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; ಇಬ್ಬರು ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; 7 ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಹೈಕಮಾಂಡ್ ಜೊತೆ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಹೈಕಮಾಂಡ್ ಜೊತೆ ಸಿಎಂ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಭಾರತ: 24ಗಂಟೆಯಲ್ಲಿ 3.37 ಲಕ್ಷ ಕೋವಿಡ್ ಪ್ರಕರಣ ಪತ್ತೆ, 10,000 ಗಡಿದಾಟಿದ ಒಮಿಕ್ರಾನ್

ಭಾರತ: 24ಗಂಟೆಯಲ್ಲಿ 3.37 ಲಕ್ಷ ಕೋವಿಡ್ ಪ್ರಕರಣ ಪತ್ತೆ, 10,000 ಗಡಿದಾಟಿದ ಒಮಿಕ್ರಾನ್

1death

ವೈದ್ಯಕೀಯ ನಿರ್ಲಕ್ಷ್ಯ ಆರೋಪ: ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು; ಕುಟುಂಬಿಕರ ಆಕ್ರೋಶ

ಕಾರ್ಕಳ: ಕೊರಗಜ್ಜನಿಗೆ ಅವಮಾನ; ಪ್ರಕರಣ ದಾಖಲು

ಕಾರ್ಕಳ: ಕೊರಗಜ್ಜನಿಗೆ ಅವಮಾನ; ಪ್ರಕರಣ ದಾಖಲು

World Giants

ದಿಲ್ಶನ್,ತರಂಗ ಬ್ಯಾಟಿಂಗ್ ವೈಭವ: ವರ್ಲ್ಡ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿದ ಏಶ್ಯನ್ ಲಯನ್ಸ್



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1death

ವೈದ್ಯಕೀಯ ನಿರ್ಲಕ್ಷ್ಯ ಆರೋಪ: ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು; ಕುಟುಂಬಿಕರ ಆಕ್ರೋಶ

ಮೈಸೂರು-ಮಂಗಳೂರು ರೈಲ್ವೇ: ಹಳಿಯೇರದ ವಿದ್ಯುದೀಕರಣ!

ಮೈಸೂರು-ಮಂಗಳೂರು ರೈಲ್ವೇ: ಹಳಿಯೇರದ ವಿದ್ಯುದೀಕರಣ!

ಸರಕಾರ ಒಪ್ಪಿದಲ್ಲಿ ಸೇವೆಗೆ ಅವಕಾಶ: ಡಾ| ರಾಜೇಂದ್ರ

ಸರಕಾರ ಒಪ್ಪಿದಲ್ಲಿ ಸೇವೆಗೆ ಅವಕಾಶ: ಡಾ| ರಾಜೇಂದ್ರ

ದ.ಕ., ಉಡುಪಿ: ಕೋವಿಡ್ ದಿಂದ 13 ಮಕ್ಕಳು “ಅನಾಥ’!

ದ.ಕ., ಉಡುಪಿ: ಕೋವಿಡ್ ದಿಂದ 13 ಮಕ್ಕಳು “ಅನಾಥ’!

ಟ್ಯಾಬ್ಲೋ ಮೆರವಣಿಗೆ ಬೆಂಬಲಿಸಿ: ಜನಾರ್ದನ ಪೂಜಾರಿ

ಟ್ಯಾಬ್ಲೋ ಮೆರವಣಿಗೆ ಬೆಂಬಲಿಸಿ: ಜನಾರ್ದನ ಪೂಜಾರಿ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

ದೇವಸ್ಥಾನ ಜೀರ್ಣೋದ್ಧಾರ ಅನುದಾನಕ್ಕೆ ಲಂಚ ಪಡೆಯುವಾಗ ಮುಜರಾಯಿ ತಹಶೀಲ್ದಾರ ಎಸಿಬಿ ಬಲೆಗೆ

ದೇವಸ್ಥಾನ ಜೀರ್ಣೋದ್ಧಾರ ಅನುದಾನಕ್ಕೆ ಲಂಚ ಪಡೆಯುವಾಗ ಮುಜರಾಯಿ ತಹಶೀಲ್ದಾರ ಎಸಿಬಿ ಬಲೆಗೆ

6elephant

ಸಂಪಾಜೆ ನೆಲ್ಲಿಕುಮೇರಿ ಕಾರ್ಣಿಕ ದೈವ ಕಟ್ಟೆಗೆ ಕಾಡಾನೆ ದಾಳಿ

5fire

ಬೆಂಕಿ ಅವಘಡ: ಕೃಷಿಭೂಮಿ ಬೆಂಕಿಗಾಹುತಿ

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; ಇಬ್ಬರು ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; 7 ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

4bank

ಡಿಸಿಸಿ ಬ್ಯಾಂಕ್‌ನಿಂದ ಬಡ್ಡಿ ರಹಿತ ಸಾಲ ವಿತರಣೆ: ಹೇರೂರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.