
ODI: ಅಪರೂಪದ ಕ್ಲೀನ್‌ಸ್ವೀಪ್ ಅವಕಾಶ ಮರಳಿ ರೋಹಿತ್ ಸಾರಥ್ಯ ಕಾಂಗರೂಗೆ ವೈಟ್‌ವಾಶ್ ಭೀತಿ
Team Udayavani, Sep 26, 2023, 11:11 PM IST

ರಾಜ್‌ಕೋಟ್: ಏಕದಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯ ವಿರುದ್ಧ ಕ್ಲೀನ್‌ಅಪರೂಪದ ಕ್ಲೀನ್‌ಸ್ವೀ ಪ್ ಅವಕಾಶ ಮರಳಿ ರೋಹಿತ್ ಸಾರಥ್ಯ ಕಾಂಗರೂಗೆ ವೈಟ್‌ವಾಶ್ ಭೀತಿಪ್ ಅವಕಾಶವೊಂದು ಭಾರತದ ಮುಂದೆ ತೆರೆಯಲ್ಪಟ್ಟಿದೆ. ಬುಧವಾರ ರಾಜ್‌ಕೋಟ್‌ನಲ್ಲಿ ಅಂತಿಮ ಪಂದ್ಯ ಏರ್ಪಡಲಿದ್ದು, ಇದನ್ನೂ ಗೆದ್ದು ವಿಶ್ವಕಪ್‌ಗೂ ಮುನ್ನ ಇತಿಹಾಸವೊಂದನ್ನು ನಿರ್ಮಿಸುವುದು ಟೀಮ್ ಇಂಡಿಯಾದ ಯೋಜನೆ.
5 ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಫ್ರಂಟ್‌ಲೈನ್ ಆಟಗಾರರಿಗೆ ಭಾರತ ವಿಶ್ರಾಂತಿ ನೀಡಿತ್ತು. ಕೆ.ಎಲ್. ರಾಹುಲ್ ನಾಯಕತ್ವದ ಯುವ ತಂಡ ಏನು ಸಾಧಿಸೀತು ಎಂಬ ಆತಂಕ ಸಹಜವಾಗಿಯೇ ಕಾಡಿತ್ತು. ಆದರೆ ಅವಕಾಶ ಪಡೆದ ಆಟಗಾರರೆಲ್ಲ ಇದನ್ನು ಎರಡೂ ಕೈಗಳಲ್ಲಿ ಬಾಚಿಕೊಂಡರು. ಎರಡೂ ಪಂದ್ಯಗಳಲ್ಲಿ ಭಾರತ ಮಹೋನ್ನತ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿತು.
ಈಗ ಅಂತಿಮ ಪಂದ್ಯಕ್ಕೆ ರೋಹಿತ್ ಶರ್ಮ ಆಗಮನವಾಗಿದೆ. ಅವರು ಮರಳಿ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ. ಜತೆಗೆ ಕೊಹ್ಲಿ, ಪಾಂಡ್ಯ, ಕುಲದೀಪ್ ಕೂಡ ಆಗಮಿಸಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ 74 ಹಾಗೂ 104 ರನ್ ಬಾರಿಸಿದ ಶುಭಮನ್ ಗಿಲ್, ಇವರಿಗೆ ಉತ್ತಮ ಜತೆ ನೀಡಿದ ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್ ತಂಡದಿಂದ ಬೇರ್ಪಟ್ಟಿದ್ದಾರೆ.
ಯುವ ಪಡೆ 2-0 ಮುನ್ನಡೆ ದೊರಕಿಸಿ ಕೊಟ್ಟ ಬಳಿಕ ಅನುಭವಿಗಳ ತಂಡ ಈ ಹಾದಿಯಲ್ಲಿ ಸಾಗದೇ ಹೋದರೆ ಅದು ರೋಹಿತ್ ಬಳಗಕ್ಕೊಂದು ಅವಮಾನವೇ ಸರಿ. ಹೀಗಾಗಿ ರಾಜ್‌ಕೋಟ್ ಮುಖಾಮುಖೀಯನ್ನು ಭಾರತ ಲಘುವಾಗಿ ಪರಿಗಣಿಸುವ ಸಾಧ್ಯತೆ ಖಂಡಿತ ಇಲ್ಲ. ಅಲ್ಲದೇ ವಿಶ್ವಕಪ್‌ನಲ್ಲಿ ಭಾರತದ ಮೊದಲ ಎದುರಾಳಿ ಕೂಡ ಆಸ್ಟ್ರೇಲಿಯವೇ ಆಗಿದೆ. ಎರಡೂ ತಂಡಗಳಿಗೆ ಇದು ವಿಶ್ವಕಪ್ ಪೂರ್ವದ ಅಂತಿಮ ಪಂದ್ಯವೂ ಹೌದು.
ಸ್ಟಾರ್ಕ್ ಆಗಮನ
ಆಸ್ಟ್ರೇಲಿಯ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಕೆಲವು ತಿಂಗಳ ಹಿಂದೆ ಇದೇ ತಂಡ ಭಾರತವನ್ನು 2-1ರಿಂದ ಮಣಿಸಿತ್ತು. ಆಗ ಮಿಚೆಲ್ ಸ್ಟಾರ್ಕ್ ಘಾತಕವಾಗಿ ಕಾಡಿದ್ದರು. ರಾಜ್‌ಕೋಟ್‌ನಲ್ಲಿ ಸ್ಟಾರ್ಕ್ ಆಡಲಿದ್ದಾರೆ. ಇವರು ಆಸ್ಟ್ರೇಲಿಯವನ್ನು ಕ್ಲೀನ್‌ಅಪರೂಪದ ಕ್ಲೀನ್‌ಸ್ವೀಪ್ ಅವಕಾಶ ಮರಳಿ ರೋಹಿತ್ ಸಾರಥ್ಯ ಕಾಂಗರೂಗೆ ವೈಟ್‌ವಾಶ್ ಭೀತಿಪ್ ಸಂಕಟದಿಂದ ಪಾರುಮಾಡಬಲ್ಲರೇ? ಪ್ರಶ್ನೆ ಸಹಜ.
ಇಂದೋರ್‌ನಂತೆ ರಾಜ್‌ಕೋಟ್‌ನಲ್ಲೂ ರನ್ ಹೊಳೆ ಹರಿಯುವ ಸಾಧ್ಯತೆ ಇದೆ. ಹೀಗಾಗಿ ಮೊದಲು ಬ್ಯಾಟಿಂಗ್ ನಡೆಸುವ ತಂಡಕ್ಕೆ ಲಾಭ ಹೆಚ್ಚು ಎನ್ನಬಹುದು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

VIDEO; 43 ಎಸೆತದಲ್ಲಿ 193 ರನ್ ಚಚ್ಚಿದ ಬ್ಯಾಟರ್; ಸ್ಟ್ರೈಕ್ ರೇಟ್ ಬರೋಬ್ಬರಿ 449!

Cricket; ಗಂಭೀರ್ ವಿರುದ್ಧ ಆರೋಪ ಮಾಡಿದ ಶ್ರೀಶಾಂತ್ ಗೆ ಲೀಗಲ್ ನೋಟಿಸ್ ನೀಡಿದ ಎಲ್‌ಎಲ್‌ಸಿ

Retirement; ಮೌನ ಮುರಿದ ಸ್ಟೀವನ್ ಸ್ಮಿತ್

South Africa Tour; ಭಾರತೀಯ ತಂಡ ಡರ್ಬಾನ್‌ಗೆ ಆಗಮನ

West Indies ವಿರುದ್ಧ ನಡೆದ ದ್ವಿತೀಯ ಏಕದಿನ : ಇಂಗ್ಲೆಂಡಿಗೆ 6 ವಿಕೆಟ್ ಗೆಲುವು