Manipal “ವೈದ್ಯ ಜಗತ್ತಿಗೆ ವಲಿಯತ್ತಾನ್‌ ಕೊಡುಗೆ ಅಪಾರ’

ಮಾಹೆ: ಶ್ರದ್ಧಾಂಜಲಿ ಸಭೆಯಲ್ಲಿ ಡಾ| ಎಚ್‌.ಎಸ್‌. ಬಲ್ಲಾಳ್‌

Team Udayavani, Jul 19, 2024, 12:08 AM IST

Manipal ಪ್ರೊ| ವಲಿಯತ್ತಾನ್‌ ನಿಧನಕ್ಕೆ ಮಾಹೆ ಸಂತಾಪ

ಮಾಹೆ: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸಾಧನೆಗೈದ ಪ್ರೊ| ಮಾರ್ತಾಂಡ ವರ್ಮ ಶಂಕರನ್‌ ವಲಿಯತ್ತಾನ್‌ ಅವರು ವೈದ್ಯ ಜಗತ್ತಿಗೆ ಸಲ್ಲಿಸಿದ್ದ ಕೊಡುಗೆ ಅಪಾರ ಎಂದು ಮಾಹೆ ಸಹ ಕುಲಾಧಿಪತಿ ಡಾ| ಎಚ್‌. ಎಸ್‌. ಬಲ್ಲಾಳ್‌ ಹೇಳಿದರು.

ಮಾಹೆ ವತಿಯಿಂದ ಗುರುವಾರ ಜರಗಿದ ಸಂತಾಪ ಸೂಚಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮಹಾನ್‌ಖ್ಯಾತಿಯ ವಿಜ್ಞಾನಿಯೂ ಆಗಿದ್ದ ಅವರು ಸರಳ ಜೀವನ ಶೈಲಿಯ ಮೂಲಕ ಎಲ್ಲರಿಗೂ ಮಾದರಿ, ಮಾರ್ಗದರ್ಶಕರಾಗಿ ಬದುಕಿದ್ದವರು. ಮಾಹೆಯ ಮೊದಲ ಕುಲಪತಿಯಾಗುವ ಮೂಲಕ ಸಂಸ್ಥೆಯ ಯಶಸ್ಸಿನ ತಳವನ್ನು ಭದ್ರವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ದೂರದೃಷ್ಟಿತ್ವ, ಅಭಿವೃದ್ಧಿಶೀಲ ಚಿಂತನೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿದ್ದ ಅವರ ವಿಶಾಲ ಚಿಂತನೆ ಮಾಹೆ ಬೆಳವಣಿಗೆಯಲ್ಲಿ ಅತ್ಯಮೂಲ್ಯ ಕೊಡುಗೆಗಳಾಗಿವೆ ಎಂದು ತಿಳಿಸಿ ಸಂತಾಪ ಸೂಚಿಸಿದರು.

ಕುಲಪತಿ ಲೆ| ಜ| ಡಾ| ಎಂ. ಡಿ. ವೆಂಕಟೇಶ್‌ ಮಾತನಾಡಿ, ಪ್ರೊ| ವಲಿಯತ್ತಾನ್‌ ಅವರು ವೈದ್ಯ ಜಗತ್ತಿಗೆ ನೀಡಿದ ಕೊಡುಗೆ ಅನನ್ಯವಾಗಿದೆ.

ಮೌಲ್ಯಯುತ ಜೀವನದ ಆದರ್ಶ ಅವರ ವೈದ್ಯ ವಿಜ್ಞಾನ ಪಾಂಡಿತ್ಯ ಈ ಸಮಾಜಕ್ಕೆ ದೊರೆತ ಭಾಗ್ಯ ಎಂದು ಸಂತಾಪ ನುಡಿಗಳನ್ನಾಡಿದರು.

ವಿಶ್ರಾಂತ ಕುಲಪತಿಗಳಾದ ಡಾ| ಪಿ. ಎಲ್‌. ಎನ್‌. ಜಿ. ರಾವ್‌, ಡಾ| ಕೆ. ರಾಮ ನಾರಾಯಣ್‌ ಸಂತಾಪ ಸೂಚಿಸಿ ಮಾತನಾಡಿದರು. ಕುಲಸಚಿವ ಡಾ| ಗಿರಿಧರ್‌ ಕಿಣಿ ನಿರೂಪಿಸಿದರು. ಸಹ ಕುಲಪತಿ ಡಾ| ಶರತ್‌ ಕುಮಾರ್‌ ರಾವ್‌, ಕೆಎಂಸಿ ಡೀನ್‌ ಡಾ| ಪದ್ಮರಾಜ್‌ ಹೆಗ್ಡೆ ಮೊದಲಾದವರು ಭಾಗವಹಿಸಿದ್ದರು.

ಪ್ರೊ| ವಲಿಯತ್ತಾನ್‌ ಅವರ ಪುತ್ರ ಡಾ| ಮನೀಷ್‌ ಮಾತನಾಡಿದರು. ಮಾಹೆ ವಿವಿಧ ವಿಭಾಗದ ಮುಖ್ಯಸ್ಥರು, ಸಿಬಂದಿ ಭಾಗವಹಿಸಿದ್ದರು. ಪ್ರೊ| ವಲಿಯತ್ತಾನ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನ ಪ್ರಾರ್ಥನೆ ನೆರವೇರಿಸಲಾಯಿತು.

ಗುರುವಾರ ಬೆಳಗ್ಗೆ ಬೀಡಿನಗುಡ್ಡೆಯಲ್ಲಿ ನಡೆದ ಅಂತ್ಯ ಸಂಸ್ಕಾರದಲ್ಲಿ ಮಾಹೆ ಹಿರಿಯ ಅಧಿಕಾರಿಗಳು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಮಾಹೆ ಟ್ರಸ್ಟ್‌ ಅಧ್ಯಕ್ಷ ಡಾ| ರಂಜನ್‌ ಪೈ, ಟ್ರಸ್ಟಿ ವಸಂತಿ ಪೈ, ಮಣಿಪಾಲ್‌ ಮೀಡಿಯ ನೆಟವರ್ಕ್‌ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್‌ ಯು. ಪೈ ಸಂತಾಪ ಸೂಚಿಸಿದ್ದಾರೆ.

Ad

ಟಾಪ್ ನ್ಯೂಸ್

Kasaragod: ಮೀನಿನ ಬಲೆಗೆ ಸಿಲುಕಿದ ಮಾನವ ಮೃತದೇಹ!

Kasaragod: ಮೀನಿನ ಬಲೆಗೆ ಸಿಲುಕಿದ ಮಾನವ ಮೃತದೇಹ!

ಬ್ಯಾಂಕ್‌ ನೌಕರಿಗೆ ಸೇರಿದ ರಿಷಿ ಸುನಕ್‌: 70 ಗಂಟೆ ಕೆಲಸದ ಬಗ್ಗೆ ಭಾರಿ ಚರ್ಚೆ

ಬ್ಯಾಂಕ್‌ ನೌಕರಿಗೆ ಸೇರಿದ ರಿಷಿ ಸುನಕ್‌: 70 ಗಂಟೆ ಕೆಲಸದ ಬಗ್ಗೆ ಭಾರಿ ಚರ್ಚೆ

Manipal: ಕಸ ವಿಲೇವಾರಿ ಸಿಬಂದಿಗೆ ಹ*ಲ್ಲೆ, ಜೀವಬೆದರಿಕೆ

Manipal: ಕಸ ವಿಲೇವಾರಿ ಸಿಬಂದಿಗೆ ಹ*ಲ್ಲೆ, ಜೀವಬೆದರಿಕೆ

ಮೂಡುಬಿದಿರೆಯ ಮಹಿಳೆ ನಾಪತ್ತೆ; ಪ್ರಕರಣ ದಾಖಲು

ಮೂಡುಬಿದಿರೆಯ ಮಹಿಳೆ ನಾಪತ್ತೆ; ಪ್ರಕರಣ ದಾಖಲು

Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು

Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು

ಏಷ್ಯಾದ ಅತ್ಯಂತ ಹಿರಿಯ ಆನೆ ‘ವತ್ಸಲ’ ಸಾವು…

Oldest Elephant: ಬದುಕಿನ ಯಾನ ನಿಲ್ಲಿಸಿದ ವತ್ಸಲಾ.. ಏಷ್ಯಾದ ಅತ್ಯಂತ ಹಿರಿಯ ಆನೆ ಇನ್ನಿಲ್ಲ

Rekha-Gupta-CM

ದಿಲ್ಲಿ ಸಿಎಂ ಅಧಿಕೃತ ನಿವಾಸ ನವೀಕರಣ ಟೆಂಡರ್‌ ರದ್ದುಗೊಳಿಸಿದ ಸರಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal: ಕಸ ವಿಲೇವಾರಿ ಸಿಬಂದಿಗೆ ಹ*ಲ್ಲೆ, ಜೀವಬೆದರಿಕೆ

Manipal: ಕಸ ವಿಲೇವಾರಿ ಸಿಬಂದಿಗೆ ಹ*ಲ್ಲೆ, ಜೀವಬೆದರಿಕೆ

24

Udyavara: ಕಂಟೈನರ್‌ಗೆ ಪಿಕಪ್‌ ಢಿಕ್ಕಿ; ಓರ್ವ ಸಾವು

death

Malpe: ವ್ಯಕ್ತಿ ಆತ್ಮಹ*ತ್ಯೆ; ದೂರು ದಾಖಲು

14

Malpe ಬೀಚ್‌ ರಸ್ತೆಯಲ್ಲಿ 2 ತಿಂಗಳುಗಳಿಂದ ಕತ್ತಲ ಹಾದಿ!

12

Udupi: ಮಹಿಳಾ ಸ್ವ-ಸಹಾಯ ಗುಂಪುಗಳಿಂದ ಕೃಷಿ ಡ್ರೋನ್‌ ಪಡೆಯಲು ಅರ್ಜಿ ಆಹ್ವಾನ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Kasaragod: ಮೀನಿನ ಬಲೆಗೆ ಸಿಲುಕಿದ ಮಾನವ ಮೃತದೇಹ!

Kasaragod: ಮೀನಿನ ಬಲೆಗೆ ಸಿಲುಕಿದ ಮಾನವ ಮೃತದೇಹ!

ಬ್ಯಾಂಕ್‌ ನೌಕರಿಗೆ ಸೇರಿದ ರಿಷಿ ಸುನಕ್‌: 70 ಗಂಟೆ ಕೆಲಸದ ಬಗ್ಗೆ ಭಾರಿ ಚರ್ಚೆ

ಬ್ಯಾಂಕ್‌ ನೌಕರಿಗೆ ಸೇರಿದ ರಿಷಿ ಸುನಕ್‌: 70 ಗಂಟೆ ಕೆಲಸದ ಬಗ್ಗೆ ಭಾರಿ ಚರ್ಚೆ

Manipal: ಕಸ ವಿಲೇವಾರಿ ಸಿಬಂದಿಗೆ ಹ*ಲ್ಲೆ, ಜೀವಬೆದರಿಕೆ

Manipal: ಕಸ ವಿಲೇವಾರಿ ಸಿಬಂದಿಗೆ ಹ*ಲ್ಲೆ, ಜೀವಬೆದರಿಕೆ

ಮೂಡುಬಿದಿರೆಯ ಮಹಿಳೆ ನಾಪತ್ತೆ; ಪ್ರಕರಣ ದಾಖಲು

ಮೂಡುಬಿದಿರೆಯ ಮಹಿಳೆ ನಾಪತ್ತೆ; ಪ್ರಕರಣ ದಾಖಲು

Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು

Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.