ಹುಟ್ಟುಹಬ್ಬ ಆಚರಿಸದಿರಲು ಸಚಿನ್ ನಿರ್ಧಾರ
Team Udayavani, Apr 24, 2020, 6:01 AM IST
ಮುಂಬಯಿ: ದೇಶದಲ್ಲಿ ಕೋವಿಡ್ 19 ಮಹಾಮಾರಿ ನೂರಾರು ಜನರನ್ನು ಬಲಿ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ತಮ್ಮ 47ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ಎಪ್ರಿಲ್ 24 ರಂದು ಸಚಿನ್ 47ನೇ ವರ್ಷಕ್ಕೆ ಕಾಲಿಡಲಿದ್ದಾರೆ. ದೇಶಾದ್ಯಾಂತ ಕೋವಿಡ್ 19 ವಿರುದ್ಧ ಹೋರಾಟ ಮಾಡುತ್ತಿರುವವರಿಗೆ ಗೌರವ ಸೂಚಿಸುವ ಉದ್ದೇಶದಿಂದ ಸಚಿನ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.