
ಅಬುಧಾಬಿ ಓಪನ್: ಸಾನಿಯಾ ಜೋಡಿಗೆ ಆಘಾತ
Team Udayavani, Feb 7, 2023, 11:32 PM IST

ಅಬುಧಾಬಿ: ಟೆನಿಸ್ ಬಾಳ್ವೆಯ ವಿದಾಯದ ಬಾಗಿಲಲ್ಲಿರುವ ಸಾನಿಯಾ ಮಿರ್ಜಾ “ಅಬುಧಾಬಿ ಓಪನ್’ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ. ಅವರು ಅಮೆರಿಕದ ಬೆಥನಿ ಮಾಟೆಕ್ ಸ್ಯಾಂಡ್ಸ್ ಜತೆಗೂಡಿ ವನಿತಾ ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದರು.
ಕರ್ಸ್ಟನ್ ಫ್ಲಿಪ್‌ಕೆನ್ಸ್ (ಬೆಲ್ಜಿಯಂ)-ಲಾರಾ (ಜರ್ಮನಿ) ವಿರುದ್ಧ ಇಂಡೋ-ಅಮೆರಿಕನ್ ಜೋಡಿ 3-6, 4-6 ನೇರ ಸೆಟ್‌ಗಳಿಂದ ಪರಾಭವಗೊಂಡಿತು.
6 ಬಾರಿಯ ಗ್ರ್ಯಾನ್‌ಸ್ಲಾಮ್ ವಿಜೇತೆ ಸಾನಿಯಾ ಮಿರ್ಜಾ ವಿದಾಯಕ್ಕೂ ಮುನ್ನ ಇನ್ನೊಂದು ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ದುಬಾೖ ಟೆನಿಸ್ ಚಾಂಪಿಯನ್‌ಶಿಪ್ ಆಗಿದ್ದು, ಫೆ. 19ರಂದು ಆರಂಭವಾಗಲಿದೆ.
ಸಾನಿಯಾ ಮಿರ್ಜಾಗೆ ಗ್ರ್ಯಾನ್‌ಸ್ಲಾಮ್‌ನಲ್ಲಿ ಗೆಲುವಿನ ವಿದಾಯ ಹೇಳುವ ಸುವರ್ಣಾವಕಾಶವಿತ್ತು. ಆಸ್ಟ್ರೇಲಿಯನ್ ಓಪನ್ ಮಿಕ್ಸೆಡ್ ಡಬಲ್ಸ್‌ನಲ್ಲಿ ಅವರು ರೋಹನ್ ಬೋಪಣ್ಣ ಜತೆಗೂಡಿ ಫೈನಲ್ ತಲುಪಿದ್ದರು. ಆದರೆ ಅಲ್ಲಿ ರನ್ನರ್ ಅಪ್‌ಗೆ ಸಮಾಧಾನಪಡಬೇಕಾಯಿತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೋಷಿಯಲ್ ಮೀಡಿಯಾದಲ್ಲಿ ತಮ್ಮ 10 ನೇ ತರಗತಿ ಅಂಕಪಟ್ಟಿ ಹಂಚಿಕೊಂಡ ಕಿಂಗ್ ಕೊಹ್ಲಿ!

ಹೈದರಾಬಾದ್ ತಂಡದ ನಾಯಕತ್ವ ಬದಲಾವಣೆ? ಮಾಕ್ರಮ್ ಬದಲು ಕಾಣಸಿಕೊಂಡ ಭುವನೇಶ್ವರ್

ಈ ಬಾರಿಯಾದರೂ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

ಐಪಿಎಲ್ 2023: ಆರ್ ಸಿಬಿಯ ಮೊದಲ ಪಂದ್ಯಕ್ಕೆ ಲಭ್ಯವಿಲ್ಲ ಹೇಜಲ್ವುಡ್, ಮ್ಯಾಕ್ಸವೆಲ್

ಮುಂಬೈನಲ್ಲಿ ವಿಶ್ವಕಪ್ ಸೆಮಿಫೈನಲ್ ಮ್ಯಾಚ್; ಭಾರತ- ಪಾಕ್ ಪಂದ್ಯ ನಡೆಯುವುದು ಎಲ್ಲಿ?