ನನಗೆ ಟಿಕೆಟ್‌ ತಪ್ಪಲು ಕೆಲವರ ಸ್ವಾರ್ಥ ಕಾರಣ; Jagadish Shettar


Team Udayavani, Apr 16, 2023, 1:28 PM IST

4-jagadish-shettar

ಶಿರಸಿ : ನನಗೆ ಆರೋಗ್ಯವಿದೆ, ಯಾವುದೇ ಕಪ್ಪು ಚುಕ್ಕೆ ಇಲ್ಲ, ಸಣ್ಣ ಗ್ರಾಮ ಪಂಚಾಯತ್‌ ನಿಂದ ಎಲ್ಲ ಕಡೆ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ನನಗೆ ವಯಸ್ಸೂ ಇದೆ. ಯಾಕೆ ಟಿಕೆಟ್ ಕೊಟ್ಟಿಲ್ಲ ಎಂದು ಕೇಳಿದರೂ ಹೇಳಿಲ್ಲ. ಆ ನೋವಿದೆ. ಮೂಲ  ಬಿಜೆಪಿಗರನ್ನು ಹೊರಗೆ ಹಾಕಲಾಗುತ್ತಿದೆ. ಮೂಲ ಮನೆಯಿಂದ ಹೊರ ಹೋಗುವ ನೋವು ನನಗೂ ಇದೆ. ಆದರೆ, ಹುಬ್ಬಳ್ಳಿಯಿಂದ ಸ್ಪರ್ಧಿಸುವುದು ಖಚಿತ. ಆದರೆ, ಹೇಗೆ ಎಂಬುದನ್ನು ಹುಬ್ಬಳ್ಳಿಗೆ ತೆರಳಿ ಸಮಾಲೋಚನೆ ನಡಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಬಿಜೆಪಿಗೆ ರಾಜಿನಾಮೆ ನೀಡಿದ ಜಗದೀಶ್ ಶೆಟ್ಟರ್  ಹೇಳಿದರು.

ಭಾನುವಾರ (ಎ.16) ಶಿರಸಿಯ ಸ್ಪೀಕರ್ ಕಚೇರಿಗೆ ಅಗಮಿಸಿದ ಶೆಟ್ಟರ್  ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಯಡಿಯೂರಪ್ಪ ಅವರು ನನಗೆ ಹುದ್ದೆ, ಅಧಿಕಾರ ನೀಡಲಾಗಿತ್ತು ಎಂದಿದ್ದರೆ, ಟಿಕೆಟ್ ಸಲುವಾಗಿ ನನ್ನ ಪರವಾಗಿ ಆಗ ಮಾತಾಡಿ ಈಗ ಹೀಗೆ ಹೇಳಿದರೆ ಹೇಗೆ? ಹಿಂದೆ ಕೆಜೆಪಿ ಯಾಕೆ ಹೋಗಿದ್ದರು ಎಂದೂ ಕೇಳಿದ ಅವರು ಟಿಕೆಟ್ ಕೊಡದೇ ಇರಲು ಕೆಲವರ ಸ್ವಾರ್ಥ ಕಾರಣ ಎಂದರು.

ಶನಿವಾರ ಬಿಜೆಪಿ ಪ್ರಮುಖರು ಸೇರಿ ಹುಬ್ಬಳ್ಳಿಯಲ್ಲಿ ಶೆಟ್ಟರ್ ಜೊತೆ ಮಾತುಕತೆ ನಡೆಸಿದ್ದು, ಸಂಧಾನ ವಿಫಲವಾಗಿತ್ತು. ರವಿವಾರ ಬೆಳಿಗ್ಗೆ 11.10ಕ್ಕೆ ಶಿರಸಿಗೆ ಬಂದ ಶೆಟ್ಟರ್ ಅವರ ಜೊತೆ ಗಂಟೆಗಳಿಗೂ ಅಧಿಕ ಕಾಲ ಸ್ಪೀಕರ್ ಜೊತೆ ಮಾತುಕತೆ ನಡೆಸಿ ನಂತರ ರಾಜೀನಾಮೆ ನೀಡಿದರು‌.

ಆರ್‌ಎಸ್‌ಎಸ್ ಮೂಲಕ ರಾಜಕೀಯಕ್ಕೆ ಬಂದ ಜಗದೀಶ್ ಶೆಟ್ಟರ್ 1990ರಲ್ಲಿ ಹುಬ್ಬಳ್ಳಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕವಾದರು. ಅಲ್ಲಿಂದ ಪಕ್ಷದ ಬಲವರ್ಧನೆಗೆ ಇನ್ನಷ್ಟು ಕೊಡುಗೆ ಆರಂಭಿಸಿದ್ದರು.  ಕಾರ್ಯಕರ್ತರಾಗಿ ಸೇರಿ ನಾಯಕರಾಗಿ ಬೆಳೆದಿದ್ದ ಶೆಟ್ಟರ, 1994 ರಿಂದ 2023 ತನಕ 6 ಅವಧಿಗೆ  ಶಾಸಕರಾಗಿದ್ದರು.

ಸಚಿವರಾಗಿ ವಿಧಾನಸಭಾ ಸ್ಪೀಕರ್, ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿ ಸ್ಥಾನಕ್ಕೆ ಡಿ. ವಿ. ಸದಾನಂದ ಗೌಡ ರಾಜೀನಾಮೆ ನೀಡಿದ ಬಳಿಕ ಜಗದೀಶ್ ಶೆಟ್ಟರ್ ರಾಜ್ಯದ 21ನೇ ಮುಖ್ಯಮಂತ್ರಿಯಾಗಿ 10 ತಿಂಗಳು ಕಾರ್ಯ ಮಾಡಿದ್ದರು‌.

ಪಕ್ಷದಲ್ಲೂ ಹಿರಿತನ ಸಾಧಿಸಿದ್ದರು. ಕೇಂದ್ರ ಬಿಜೆಪಿಯ ಟಿಕೆಟ್ ಆಯ್ಕೆ ಸಮಿತಿಯಲ್ಲಿ ಕೂಡ ಇದ್ದರು. ಆದರೆ, ಇವರಿಗೇ ಟಿಕೆಟ್ ಸಿಗದೇ ಇದ್ದಾಗ ಸಿಡಿದೆದಿದ್ದರು.

ಪ್ರಮುಖರಾದ ತವನಪ್ಪ ಅಷ್ಟಗಿ, ಎಸ್.ಐ.ಚಿಕ್ಕನಗೌಡ ಇತರರು ಇದ್ದರು.

Ad

ಟಾಪ್ ನ್ಯೂಸ್

baby 2

Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!

Rcb-highcourt

ಐಪಿಎಲ್‌ ಕಾಲ್ತುಳಿತ ಪ್ರಕರಣ: ಸ್ಥಿತಿಗತಿ ವರದಿ ಆರ್‌ಸಿಬಿ, ಕೆಎಸ್‌ಸಿಎ ಜತೆ ಹಂಚಲು ನಿರ್ದೇಶನ

Surya-Tejasvi-MP

ರಾಜ್ಯ ಸರ್ಕಾರ ಭೂಸ್ವಾಧೀನ ಕೈ ಬಿಟ್ಟಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ ಅಸಮಾಧಾನ 

drowned

ಗಂಗೊಳ್ಳಿ ದೋಣಿ ದುರಂತ; ಓರ್ವ ಮೀನುಗಾರನ ಶ*ವ ಪತ್ತೆ: ಮುಂದುವರಿದ ಹುಡುಕಾಟ

ಮೋದಿ, ಆರ್‌ಎಸ್‌ಎಸ್‌ ಟೀಕೆ: ವ್ಯಂಗ್ಯಚಿತ್ರಕಾರನಿಗೆ ಮಧ್ಯಂತರ ಜಾಮೀನು

Hemant Malviya: ಮೋದಿ, ಆರ್‌ಎಸ್‌ಎಸ್‌ ಟೀಕೆ: ವ್ಯಂಗ್ಯಚಿತ್ರಕಾರನಿಗೆ ಮಧ್ಯಂತರ ಜಾಮೀನು

Andhra-CM-Nara-Lokesh

ದೇವನಹಳ್ಳಿ ಭೂಸ್ವಾಧೀನ ರದ್ದು ಬೆನ್ನಲ್ಲೇ ಉದ್ಯಮಿಗಳಿಗೆ ಆಂಧ್ರ ಪ್ರದೇಶ ಗಾಳ

ಕಂ ಬ್ಯಾಕ್‌ ಟೈಗರ್‌! ವಿವಿಧ ರಾಜ್ಯಗಳಲ್ಲಿನ ಕರಾವಳಿಯ ಐಟಿ ವೃತ್ತಿಪರರಿಗೆ ಆಹ್ವಾನ

ಕಂ ಬ್ಯಾಕ್‌ ಟೈಗರ್‌! ವಿವಿಧ ರಾಜ್ಯಗಳಲ್ಲಿನ ಕರಾವಳಿಯ ಐಟಿ ವೃತ್ತಿಪರರಿಗೆ ಆಹ್ವಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-sirsi

Sirsi:ಖಾನಾಪುರದಲ್ಲಿ ಹುಬ್ಬಳ್ಳಿ-ದಾದರ್ ಎಕ್ಸ್‌ಪ್ರೆಸ್ ನಿಲುಗಡೆ;ಬಹುದಿನಗಳ ಬೇಡಿಕೆ ಈಡೇರಿಕೆ

arrested

ಭಟ್ಕಳ ಠಾಣೆಗೆ ಬಾಂ*ಬ್‌ ಬೆದರಿಕೆ ಸಂದೇಶ : ಪ್ರಮುಖ ಆರೋಪಿ ಖಾಲಿದ್‌ ಪತ್ತೆ

1-aa-aa-crick-ssss

ಯಲ್ಲಾಪುರ: ನಟೋರಿಯಸ್ ಆರೋಪಿ ಕಾಲಿಗೆ ಪೊಲೀಸರ ಗುಂಡು

18

Mundgod: ರಸ್ತೆಗಳು ಹೊಂಡಮಯ-ಸಂಚಾರ ಅಯೋಮಯ

17

Yellapur: ಹದಗೆಟ್ಟಿದೆ ಕೈಗಾ-ಇಳಕಲ್‌ ರಾಜ್ಯ ಹೆದ್ದಾರಿ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

baby 2

Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!

police

Bengaluru;ವಿಮಾನ, ಬಸ್‌ನಲ್ಲಿ ಮಾದಕ ವಸ್ತು ತರಿಸುತ್ತಿದ್ದ 3 ಮಹಿಳೆಯರ ಬಂಧನ

Madhu-Bangarappa

ಶಿಕ್ಷಣ ಇಲಾಖೆ ಸಾಧನೆ ಕೇಳಿ ಸುರ್ಜೇವಾಲ ಖುಷ್‌: ಸಚಿವ ಮಧು ಬಂಗಾರಪ್ಪ

Tax-Collect

ಸಣ್ಣ ಉದ್ದಿಮೆದಾರರಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ ವಿರುದ್ಧ ಜು.23ರಿಂದ 2 ದಿನ ಬಂದ್‌

Rcb-highcourt

ಐಪಿಎಲ್‌ ಕಾಲ್ತುಳಿತ ಪ್ರಕರಣ: ಸ್ಥಿತಿಗತಿ ವರದಿ ಆರ್‌ಸಿಬಿ, ಕೆಎಸ್‌ಸಿಎ ಜತೆ ಹಂಚಲು ನಿರ್ದೇಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.