ಸಹಾಯಾರ್ಥ ಕೂಟದಲ್ಲಿ ಖ್ಯಾತ ಟೆನಿಸ್ ತಾರೆಯರು
Team Udayavani, May 2, 2020, 5:48 AM IST
ಸಾಂದರ್ಭಿಕ ಚಿತ್ರ.
ನ್ಯೂಯಾರ್ಕ್: ಟೆನಿಸ್ ತಾರೆಯರಾದ ಸೆರೆನಾ ವಿಲಿಯಮ್ಸ್, ವೀನಸ್ ವಿಲಿಯಮ್ಸ್ ಮತ್ತು ನವೋಮಿ ಒಸಾಕಾ ಸಹಿತ ಎನ್ಎಫ್ಎಲ್ ಆಟಗಾರರಾದ ಡಿ’ಆಂಡ್ರೆ ಹಾಪ್ಕಿನ್ಸ್ ಮತ್ತು ರಿಯಾನ್ ಟೆನ್ನೆಹಿಲ್ ಅವರು ಸಹಾಯಾರ್ಥ ಟೆನಿಸ್ ಕೂಟದಲ್ಲಿ ಭಾಗವಹಿಸಲಿದ್ದಾರೆ.
“ಸ್ಟೇ ಎಟ್ ಹೋಮ್ ಸ್ಲಾಮ್’ ಎಂದು ಕರೆಯಲ್ಪಡುವ ಈ ಕೂಟದ ಪಂದ್ಯಗಳನ್ನು ರವಿವಾರ ಸಂಜೆ 4 ಗಂಟೆಗೆ ಫೇಸ್ಬುಕ್ ಗೇಮಿಂಗ್ ಮತ್ತು ಈ ಕೂಟದ ಸಂಘಟಕ ಕಂಪೆನಿ ಐಎಂಜಿಯ ಟೆನಿಸ್ ಫೇಸ್ಬುಕ್ ಪುಟದಲ್ಲಿ ಪ್ರಸಾರ ಮಾಡಲಾಗುತ್ತದೆ.
ಇಬ್ಬರು ಆಟಗಾರರಿರುವ ತಂಡ, ನಿಟೆಂಡೊ ಸ್ವಿಚ್ನಲ್ಲಿ ಮರಿಯೊ ಟೆನಿಸ್ ಏಸಸ್ ಆಟ ಬಳಸಿಕೊಂಡು ಪಂದ್ಯದಲ್ಲಿ ಸ್ಪರ್ಧಿಸಲಿದೆ. ಪ್ರತಿಯೊಂದು ತಂಡವು ತಮ್ಮ ಆಯ್ಕೆಯ ಸೇವಾ ಸಂಸ್ಥೆಗೆ 25 ಸಾವಿರ ಡಾಲರ್ ದೇಣಿಗೆ ನೀಡುವ ಅವಕಾಶವಿದ್ದು ಪ್ರಶಸ್ತಿ ವಿಜೇತ ತಂಡ ಹೆಚ್ಚುವರಿಯಾಗಿ ಒಂದು ಮಿಲಿಯ ಡಾಲರ್ ಸೇವಾ ಸಂಸ್ಥೆಗೆ ನೀಡಲಿದೆ.
ಟೆನಿಸ್ ಜೋಡಿ
ಸೆರೆನಾ ವಿಲಿಯಮ್ಸ್ ಮತ್ತು ಮಾಡೆಲ್ ಗಿಗಿ ಹಾಡಿಡ್, ನವೋಮಿ ಒಸಾಕಾ ಮತ್ತು ಮಾಡೆಲ್ ಹೈಲಿ ಬೀಬರ್, ವೀನಸ್ ವಿಲಿಯಮ್ಸ್ ಮತ್ತು ಡಿ’ಆಂಡ್ರೆ ಹಾಪ್ಕಿನ್ಸ್, ಮರಿಯಾ ಶರಪೋವಾ ಮತ್ತು ಮಾಡೆಲ್ ಕಾಲೀ ಕ್ಲೋಸ್, ಕೀ ನಿಶಿಕೊರಿ ಮತ್ತು ಡಿಜೆ ಸ್ಟೀವ್ ಒಕಿ, ಮ್ಯಾಡಿಸನ್ ಕೀಸ್ ಮತ್ತು ಸಂಗೀತಗಾರ ಸೀಲ್ ತಂಡವಾಗಿ ಸ್ಪರ್ಧಿಸಲಿದ್ದಾರೆ.ಟೆನಿಸ್ ಹಾಲ್ ಆಫ್ ಫೇಮ್ ಖ್ಯಾತಿಯ ಜಾನ್ ಮೆಕೆನ್ರೊ ಮತ್ತು ಯೂಟ್ಯೂಬ್ನ ಜಸ್ಟಿನ್ ಇಝರಿಕ್ ಅವರು ವೀಕ್ಷಕ ವಿವರಣೆ ನೀಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ