Mumbai: ಮುಂಬೈ ಹೋಟೆಲ್ನಲ್ಲಿ ಲೈಂಗಿಕ ದಂಧೆ?
ಜಮ್ಮು- ಕಾಶ್ಮೀರದ 500 ವಿದ್ಯಾರ್ಥಿನಿಯರಿಗೆ ಆಘಾತಕಾರಿ ಅನುಭವ
Team Udayavani, Nov 30, 2023, 10:13 PM IST
ನವದೆಹಲಿ: ಐಆರ್ಸಿಟಿಸಿ ಮತ್ತು ಜಮ್ಮುಕಾಶ್ಮೀರ ಸರ್ಕಾರದ ಸಹಯೋಗದಲ್ಲಿ ರಾಷ್ಟ್ರಪ್ರವಾಸಕ್ಕೆ ಹೊರಟಿರುವ ಜಮ್ಮುಕಾಶ್ಮೀರದ 500 ವಿದ್ಯಾರ್ಥಿನಿಯರಿಗೆ ಆಘಾತಕಾರಿ ಅನುಭವವಾಗಿದೆ. ಮುಂಬೈನ ಗೋರೆಗಾಂವ್ನ ರಾಯಲ್ ಪಾಮ್ ಹೋಟೆಲ್ನಲ್ಲಿ ಅವರಿಗೆ ಅಶ್ಲೀಲ ಸಂಗತಿಗಳು ಗೊತ್ತಾಗಿವೆ. ಹೋಟೆಲ್ ಬಗ್ಗೆ ಕಂಡುಬಂದ ರಿವ್ಯೂಗಳಲ್ಲೂ ಅಲ್ಲಿ ಲೈಂಗಿಕ ದಂಧೆ ನಡೆಯುತ್ತಿದೆ ಎಂದು ಹೇಳಲಾಗಿದೆ!
ಅದಕ್ಕೆ ಸರಿಯಾಗಿ ಹೋಟೆಲ್ ಸಿಬ್ಬಂದಿಯೊಬ್ಬರ ಮೊಬೈಲ್ ಫೋನ್ನಲ್ಲಿ ಮಹಿಳೆಯರ ನಗ್ನ ಚಿತ್ರಗಳು ಕಂಡುಬಂದಿವೆ. ಜತೆಗೆ ಊಟದ ಸಮಯದಲ್ಲಿ 20ರಿಂದ 25 ನಿಮಿಷ ಲೈಟ್ ಬೇರೆ ಹೋಗುತ್ತಿತ್ತು. ಕಡೆಗೆ ಗೊತ್ತಾಗಿದ್ದೇನೆಂದರೆ ತಮಗೆ ಅಗತ್ಯವಿದ್ದವರನ್ನು ಒಳಗೆ ಕಳುಹಿಸಲು ಉದ್ದೇಶಪೂರ್ವಕವಾಗಿ ಹೀಗೆ ವಿದ್ಯುತ್ ಸಂಪರ್ಕ ತೆಗೆಯಲಾಗುತ್ತಿದೆ ಎನ್ನುವ ಸಂಗತಿ! ಹೋಟೆಲ್ನ ಕೊಠಡಿಗಳು ಗಲೀಜಾಗಿದ್ದವು, ಬೆಡ್ಶೀಟ್ನಲ್ಲಿ ಕಲೆಗಳಿದ್ದವು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.