
ಶಾರದಾ ಚಿಟ್ ಫಂಡ್ ಹಗರಣ: 6 ಕೋ. ರೂ ಮೌಲ್ಯದ ಆಸ್ತಿ ಮುಟ್ಟುಗೋಲು
Team Udayavani, Feb 4, 2023, 12:33 AM IST

ಹೊಸದಿಲ್ಲಿ: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ, ಸಿಪಿಎಂ ಮಾಜಿ ಶಾಸಕ ದೇವೇಂದ್ರನಾಥ್ ಬಿಸ್ವಾಸ್ ಮತ್ತು ಅಸ್ಸಾಂನ ಮಾಜಿ ಸಚಿವ ದಿ| ಅಂಜನ್ ದತ್ತಾ ಒಡೆತನದ ಕಂಪೆನಿಗೆ ಸೇರಿದ 6 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಶುಕ್ರವಾರ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ 3.30 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 3 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳ ಜಪ್ತಿ ಆದೇಶ ಹೊರಡಿ ಸಲಾಗಿದೆ ಎಂದು ಹೇಳಿದೆ.
ನಳಿನಿ ಚಿದಂಬರಂ, ಈಸ್ಟ್ ಬೆಂಗಾಲ್ ಕ್ಲಬ್ ಅಧಿಕಾರಿ ದೇವವ್ರತ ಸರ್ಕಾರ್, ದೇವೇಂದ್ರನಾಥ್ ಬಿಸ್ವಾಸ್ ಮತ್ತು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ದತ್ತಾ ಒಡೆತನದ ಅನುಭೂತಿ ಪ್ರಿಂಟರ್ಸ್ ಆ್ಯಂಡ್ ಪಬ್ಲಿಕೇಶನ್ಸ್ ಹಗರಣದ ಫಲಾನುಭವಿಗಳು ಎಂದಿದೆ ಇ.ಡಿ .
ಟಾಪ್ ನ್ಯೂಸ್
