
ಶಿವಸೇನೆ ಕೋಮುವಾದಿ ಪಕ್ಷ ಅಲ್ಲವೇ: ಡಾ.ಸುಧಾಕರ್ ಪ್ರಶ್ನೆ
Team Udayavani, Feb 4, 2023, 8:40 PM IST

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ನವರು ಬಿಜೆಪಿಯನ್ನು ಕೋಮುವಾದಿ ಎಂದು ಆರೋಪಿಸುತ್ತಾರೆ. ಹಾಗಾದರೆ ಶಿವಸೇನೆ ಕೋಮುವಾದಿ ಪಕ್ಷವಲ್ಲವೇ? ಇವರ ಜತೆ ಸೇರಿಕೊಂಡು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹೇಗೆ ಸರಕಾರ ರಚಿಸಿತು? ಜತೆಗೆ, ಬಿಜೆಪಿಯೊಂದಿಗೆ ಸೇರಿ ಸರಕಾರ ರಚಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜತೆ ಬಿಹಾರದಲ್ಲಿ ಹೇಗೆ ಹೊಂದಾಣಿಕೆ ಮಾಡಿಕೊಂಡು ಸರಕಾರ ರಚಿಸಿದಿರಿ ಎಂದು ಆರೋಗ್ಯ ಸಚಿವ ಡಾ| ಕೆ.ಸುಧಾಕರ್ ಅವರು ಕಾಂಗ್ರೆಸ್ಸನ್ನು ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಬೇಕಾದಾಗ ಕೋಮುವಾದಿ ಅಲ್ಲ, ಉಳಿದ ಸಮಯದಲ್ಲಿ ಕೋಮುವಾದಿ. ಇವರ ದ್ವಿಮುಖ ನೀತಿ ರಾಜಕಾರಣ ಇದರಿಂದ ಬಹಿರಂಗವಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಶೇ.30ಕ್ಕೂ ಹೆಚ್ಚು ಮುಸ್ಲಿಮರಿದ್ದಾರೆ. ಅಲ್ಲಿ ಮುಸಲ್ಮಾನರು ಬಿಜೆಪಿಗೆ ಮತ ಹಾಕದೇ ಅ ಧಿಕಾರಕ್ಕೆ ಬರಲು ಸಾಧ್ಯವೇ? ಬಿಜೆಪಿ ತಮ್ಮ ಶ್ರೇಯಸ್ಸು ಕೋರುವ ಪಕ್ಷ ಎಂಬುದು ಅಲ್ಪಸಂಖ್ಯಾಕರಿಗೆ ಅರ್ಥವಾಗಿದೆ. ಕಾಂಗ್ರೆಸ್‌ನವರ ಢೋಂಗಿತನವನ್ನು ಅರ್ಥ ಮಾಡಿಕೊಂಡಿರುವ ಅಲ್ಪಸಂಖ್ಯಾಕರು ಬಿಜೆಪಿ ಪರವಾಗಿದ್ದಾರೆ ಎಂದು ಹೇಳಿದರು.
ಮುನಿಯಪ್ಪರನ್ನು ರಾಜಕೀಯವಾಗಿ ಮುಗಿಸಿದರು.ಕೆ.ಎಚ್. ಮುನಿಯಪ್ಪ ಅವರನ್ನು ರಾಜಕೀಯವಾಗಿ ಎಂದೋ ಕೊಂದಿದ್ದಾರೆ. ಅವರು ರಾಜಕೀಯವಾಗಿ ಎಷ್ಟು ಬಳಲಿದ್ದಾರೆ ಎಂಬುದು ಗೊತ್ತಿದೆ. ಆದರೆ ಅವರು ಸ್ವಾಭಿಮಾನ ಬಿಟ್ಟು ಇನ್ನೂ ಆ ಪಕ್ಷದಲ್ಲಿದ್ದಾರೆ.
ನಮ್ಮಂಥವರಾಗಿದ್ದರೆ ಒಂದು ದಿನವೂ ಇರುತ್ತಿರಲಿಲ್ಲ ಎಂದು ಸುಧಾಕರ್ ಟಾಂಗ್ ನೀಡಿದರು.
ಟಾಪ್ ನ್ಯೂಸ್
