
3 ತಿಂಗಳ ಬಳಿಕ ಶ್ರದ್ಧಾಳ ತಲೆ ಎಸೆದಿದ್ದ ಆರೋಪಿ ಅಫ್ತಾಬ್
ಚಾರ್ಜ್‌ಶೀಟ್‌ನಲ್ಲಿ ಭಯಾನಕ ಮಾಹಿತಿ
Team Udayavani, Feb 7, 2023, 8:00 PM IST

ಹೊಸದಿಲ್ಲಿ: ದೇಶವನ್ನೇ ಬೆಚ್ಚಿಬೀಳಿಸಿದ್ದ ದಿಲ್ಲಿಯ ಶ್ರದ್ಧಾ ಫ್ರಿಡ್ಜ್ ಮರ್ಡರ್ ಕೇಸ್‌ನ ಆರೋಪಿ ಅಫ್ತಾಬ್ ಪೂನಾವಾಲ ವಿರುದ್ಧ ಪೊಲೀಸರು 6,600 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ. ಶ್ರದ್ಧಾಳ ದೇಹದ ಮೂಳೆಗಳನ್ನು ಅಫ್ತಾಬ್ ಮಿಕ್ಸಿಯಲ್ಲಿ ಪುಡಿಗಟ್ಟಿದ್ದ ಎನ್ನುವುದೂ ಸೇರಿ ಹಲವು ಆಘಾತಕಾರಿ ಅಂಶಗಳು ಬಹಿರಂಗಗೊಂಡಿವೆ. ಪ್ರೇಯಸಿಯ ದೇಹವನ್ನು 35 ತುಂಡುಗಳನ್ನಾಗಿಸಿದ್ದ ರಕ್ಕಸ ಕೃತ್ಯದ ಮತ್ತಷ್ಟು ಕರಾಳ ವಿವರಗಳನ್ನು ಚಾರ್ಜ್‌ಶೀಟ್ ತೆರೆದಿಟ್ಟಿದೆ.
ಬೈಯುತ್ತಿದ್ದಳು ಎನ್ನುವುದೇ ಕಾರಣ!: ಶ್ರದ್ಧಾ ಯಾವಾಗ್ಲೂ ನನ್ನನ್ನು ನಿಂದಿಸುವುದು ಜಗಳವಾಡುವುದು ಮಾಡುತ್ತಿದ್ದಳು. ಹಾಗಾಗಿಯೇ ಅವಳನ್ನು ಕೊಂದೆ! ಅವಳನ್ನು ಎಳೆದು ತಂದು ನೆಲದ ಮೇಲೆ ಹಾಕಿ, ಎದೆಯ ಮೇಲೆ ಕುಳಿತು ಕುತ್ತಿಗೆ ಹಿಸುಕಿ ಕೊಂದೆ. ಅನಂತರ ಶವವನ್ನು ಸ್ನಾನದ ಗೃಹದಲ್ಲಿ ಮರೆಮಾಡಿದೆ ಎಂದು ಅಫ್ತಾಬ್ ಹೇಳಿಕೆ ನೀಡಿದ್ದಾನೆ.
ಒಂದು ಚಿಕನ್ ರೋಲ್, ಸಾಕಷ್ಟು ವಾಟರ್‌ಬಾಟಲ್ ಆರ್ಡರ್
ಮೇ 18ರಂದು ಶ್ರದ್ಧಾಳನ್ನು ಕೊಂದ ಬಳಿಕ ಫುಡ್ ಆ್ಯಪ್ ಮೂಲಕ 1 ಚಿಕನ್ ರೋಲ್ ಹಾಗೂ ಸಾಕಷ್ಟು ವಾಟರ್ ಬಾಟಲ್‌ಗಳನ್ನು ಅಫ್ತಾಬ್ ಆರ್ಡರ್ ಮಾಡಿದ್ದ. ಸತತ 3 ದಿನ ನೀರಿನ ಬಾಟಲ್ ಖರೀದಿ ಮಾಡಿದ್ದು, ಕೊಲೆಯ ಬಗ್ಗೆ ಸುಳಿವು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಅಡುಗೆ ಮನೆಗೆ ಹೆಣ ಶಿಫ್ಟ್, ಹುಡುಗಿ ಜತೆಗೆ ಡೇಟಿಂಗ್ ಮಾಡಿದ್ದ ಅಫ್ತಾಬ್
ದಿಲ್ಲಿಯಿಂದ ದುಬಾೖವರೆಗೆ ಹುಡುಗಿಯರ ಜತೆಗೆ ಅಫ್ತಾಬ್ ಸಂಬಂಧ ಹೊಂದಿದ್ದ. ಶ್ರದ್ಧಾಳ ಕೊಲೆಯಾದ ಬಳಿಕವೂ ಹುಡುಗಿಯೊಬ್ಬಳನ್ನು ಡೇಟಿಂಗ್ ಮಾಡುತ್ತಿದ್ದ, ಮನೆಗೂ ಕರೆಸಿಕೊಂಡಿದ್ದ. ಈ ವೇಳೆ ತುಂಡರಿಸಿದ್ದ ಶ್ರದ್ಧಾಳ ದೇಹವನ್ನು ಅಡುಗೆ ಮನೆಗೆ ಶಿಫ್ಟ್ ಮಾಡಿ, ಗೆಳತಿ ಹೋದ ಬಳಿಕ ಫ್ರಿಡ್ಜ್ನಲ್ಲಿಡುತ್ತಿದ್ದ. ಕೊಲೆಯ ಬಳಿಕ ಶ್ರದ್ಧಾಳ ತುಟಿಯಲ್ಲಿದ್ದ ಸ್ಟಡ್ ಮತ್ತು ಮೊಬೈಲ್ ಅನ್ನು ಚಲಿಸುವ ರೈಲಿನಿಂದ ಬಿಸಾಡಿದ್ದ.
ಆರೋಪ ಪಟ್ಟಿಯಲ್ಲಿರುವ ಅಂಶಗಳು
-ಶ್ರದ್ಧಾ ಮೂಳೆಗಳನ್ನು ಮಿಕ್ಸಿಯಲ್ಲಿ ಪುಡಿ, ತಲೆ 3 ತಿಂಗಳ ಬಳಿಕ ವಿಲೇವಾರಿ
-ಮೃತದೇಹ ತುಂಡರಿಸಲು 1 ಗರಗಸ, ಸುತ್ತಿಗೆ,3 ಚಾಕು ಬಳಕೆ ಮಾಡಿದ್ದ
-ದೇಹ ಕತ್ತರಿಸಿ, ತೊಳೆಯಲು ಬೇಕಾದ ವಸ್ತುಗಳು ಆನ್‌ಲೈನ್‌ನಿಂದ ಆರ್ಡರ್ ಮಾಡಿದ್ದ ಆರೋಪಿ ಅಫ್ತಾಬ್ ಪೂನಾವಾಲ
-ದೇಹ ತುಂಡರಿಸುವಾಗ ಅಫ್ತಾಬ್ ಕೈಗೆ ಗಾಯ, ವೈದ್ಯರಿಂದ ಐದು ಹೊಲಿಗೆ
-ಮೇ 18ರಿಂದ ಅಫ್ತಾಬ್ ಮೊಬೈಲ್‌ನಿಂದ ಶ್ರದ್ಧಾ ಅಕೌಂಟ್ ಬಳಕೆ ಆರಂಭ
-500 ಎಂಎಲ್ ಹಾರ್ಪಿಕ್, 750 ಎಂಎಲ್ ಹ್ಯಾಂಡ್‌ವಾಶ್ ಖರೀದಿಸಿದ್ದ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಮನವಮಿ: ದೇವಾಲಯದ ಬಾವಿಯ ಸಿಮೆಂಟ್ ಹಾಸು ಕುಸಿದು 13 ಭಕ್ತರ ಮೃತ್ಯು

ಹೆತ್ತವರನ್ನೇ ಹತ್ಯೆಗೈದಿದ್ದ 15ರ ಬಾಲಕಿ ಖಾಕಿ ಬಲೆಗೆ

ರಾಜಕೀಯ ವಿವಾದ; ಮೊಸರು ಪ್ಯಾಕೆಟ್‌ಗಳ ಮೇಲೆ ಪ್ರಾದೇಶಿಕ ಹೆಸರು!

ಜೋಸ್ ಆಲುಕ್ಕಾಸ್‌ನ ಪ್ಯಾನ್ ಇಂಡಿಯಾ ಬ್ರಾಂಡ್ ಅಂಬಾಸಿಡರ್ ಆಗಿ ಆರ್. ಮಾಧವನ್ ಆಯ್ಕೆ

ರಾಮನವಮಿ 2023: ಬಾವಿ ಮೇಲಿನ ಸಿಮೆಂಟ್ ಹಾಸು ಕುಸಿತ; ಬಾವಿಯೊಳಗೆ ಬಿದ್ದ 25 ಭಕ್ತರು…
MUST WATCH
ಹೊಸ ಸೇರ್ಪಡೆ

ದೊಡ್ಡಣಗುಡ್ಡೆ ‘ಭವಾನಿ ರೆಸಿಡೆನ್ಸಿ’ ವಸತಿ ಸಮುಚ್ಚಯ ಮಾ. 31ರಂದು ಉದ್ಘಾಟನೆ

ಉಡುಪಿ: ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ

ರಾಮನವಮಿ: ದೇವಾಲಯದ ಬಾವಿಯ ಸಿಮೆಂಟ್ ಹಾಸು ಕುಸಿದು 13 ಭಕ್ತರ ಮೃತ್ಯು

ಸ್ವಿಗ್ಗಿ ಸಮೀಕ್ಷೆಯಲ್ಲಿ ಏನಿದೆ…ಇಡ್ಲಿ ಇಂದಿಗೂ ಜನಪ್ರಿಯ ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ!

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸಂಕಷ್ಟ; ಬಂಧಿಸುವಂತೆ ಕೋರ್ಟ್ ಆದೇಶ