ಯಡಿಯೂರಪ್ಪರನ್ನೆ ಪಂಚರ್ ಮಾಡಿರುವ ಬಿಜೆಪಿ: ಸಿದ್ದರಾಮಯ್ಯ
Team Udayavani, Feb 5, 2023, 1:22 PM IST
ಕಲಬುರಗಿ: ಮಾಜಿ ಸಿಎಂ ಯಡಿಯೂರಪ್ಪ ರನ್ನೇ ಅವರದ್ದೇ ಬಿಜೆಪಿಯವರು ಪಂಚರ್ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಪಂಚರ್ ಗೊಳಿಸಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಪ್ರಜಾಧ್ವನಿ ಬಸ್ ಪಂಚರ್ ಗೊಳಿಸಿದ್ದಾರೆಂಬ ಬಿಜೆಪಿ ಟೀಕೆಗೆ ಮಾಜಿ ಸಿಎಂ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ತಿರುಗೇಟು ನೀಡಿದರು.
ಮಾಜಿ ಸಿಎಂ ಬಿಎಸ್‌ವೈ ಬಗ್ಗೆ ನನಗೆ ಅಪಾರವಾದ ಗೌರರವಿದೆ. ಅನುಕಂಪವಿದೆ. ಪಂಚರ್ ಮಾಡಿರುವ ಕುರಿತಾಗಿ ಸ್ವತ: ಅವರಿಗೆ ಗೊತ್ತಿದೆ ಎಂದರು.
ಕಾಂಗ್ರೆಸ್‌ನಲ್ಲಿ ಹಲವರು ಸಿಎಂ ಸ್ಥಾನದ ತಿರುಕನ ಕನಸು ಕಾಣ್ತಿದಾರೆ ಎಂಬುದಿಲ್ಲ. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಯಾರು ಸಹ ಕನಸು ಕಾಣುತ್ತಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದು ವಾಸ್ತವ ಸತ್ಯಾಂಶ ಹೇಳಿದ್ದೇನೆ.
ಕಾಂಗ್ರೆಸ್ ನೂರಕ್ಕೆ ನೂರರಷ್ಟು ಈ ಬಾರಿ ಅಧಿಕಾರಕ್ಕೆ ಬರುತ್ತದೆ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ವಿರುದ್ಧ 40% ಗಂಭೀರ ಆರೋಪವಿದೆ. ಬಿಜೆಪಿಯ ವಚನಭ್ರಷ್ಟ, ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಹೋಗಿದ್ದರಿಂದ ಜನಸಾಮಾನ್ಯರು ತತ್ತರಿಸಿದ್ದಾರೆ ಎಂದು ಆರೋಪಿಸಿದರು.
ಚಾಮುಂಡೇಶ್ವರಿಯಲ್ಲಿ ತಮ್ಮನ್ನು ಸೋಲಿಸಲು ಬಹಳ ಪ್ರಯತ್ನ ಮಾಡಿದರು. ಆದರೆ ಬಾದಾಮಿಯಲ್ಲಿ ಜನ ನನ್ನನ್ನ ಬಹಳ ಪ್ರೀತಿಯಿಂದ ಸ್ವೀಕರಿಸದರು. ಕ್ಷೇತ್ರ ಬಿಡಬೇಡಿ, ನಿಮಗೆ ಓಡಾಡೊಕೆ ಕಷ್ಟವಾದ್ರೆ ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡುವುದಾಗಿ ಬದಾಮಿ ಜನ ಹೇಳಿದ್ದರು. ಇಂತಹ ಪ್ರೀತಿ ಯಾರಾದರೂ ಕೊಡ್ತಾರೆನ್ರಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕೋಲಾರದಲ್ಲಿ ಸ್ಪರ್ಧಿಸಿದ್ರೆ ಸಿದ್ದುಗೆ ಸೋಲು ಖಚಿತ ಎಂಬುದನ್ನು ಅಲ್ಲಗಳೆದ ಸಿದ್ದರಾಮಯ್ಯ, ಅಂತಹ ಯಾವುದೇ ಸರ್ವೆ ನಡೆದಿಲ್ಲ, ಅಂತೆಕಂತೆಗಳಿಗೆ ಉತ್ತರಿಸಲ್ಲ ಎಂದರು.
ತಾವು ಕೋಲಾರದಲ್ಲಿ ಸ್ಪರ್ಧಿಸಿದರೆ 200% ಗೆಲ್ಲುತ್ತೇನೆ. ಆದರೆ ಅಂತಿಮವಾಗಿ ಎಲ್ಲಿ ಸ್ಪರ್ಧಿಸಬೇಕು ಎನ್ನುವುದು ಹೈಕಮಾಂಡ್ ನಿರ್ಧರಿಸುತ್ತೆ ಎಂದು ಮಾಜಿ ಸಿಎಂ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಜಯಪುರ: ಪರವಾನಿಗೆ ಇಲ್ಲದೆ ವಾಹನದಲ್ಲಿ ಸಾಗಿಸುತ್ತಿದ್ದ 47 ಲಕ್ಷ ರೂ. ಮೌಲ್ಯದ ಮದ್ಯ ವಶ
ಯಾವುದೇ ಪಕ್ಷದ ಬಗ್ಗೆ ಸಹಾನುಭೂತಿ ಹೊಂದುವುದು ಮುಖ್ಯ ಅಲ್ಲ: ಅಖಿಲೇಶ್
ವನಿತಾ ಪ್ರೀಮಿಯರ್ ಲೀಗ್ : ಚೊಚ್ಚಲ ಪ್ರಶಸ್ತಿ ಮುಂಬೈ ಇಂಡಿಯನ್ಸ್ ಪಾಲು
ಜೆಡಿಎಸ್ 25 ಸ್ಥಾನ ಗೆಲ್ಲಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ: ಡಾ.ಯತೀಂದ್ರ
ವಿಶ್ವ ಚಾಂಪಿಯನ್‌ಶಿಪ್: ಪ್ರಶಸ್ತಿ ಮುಡಿಗೇರಿಸಿಕೊಂಡ ಬಾಕ್ಸರ್ ನಿಖತ್ ಜರೀನ್