ಸಿದ್ದು-ಡಿಕೆಶಿಗೆ ನಿದ್ದೆಯಲ್ಲೂ ಸೋಲಿನ ಭೀತಿ: ಸಚಿವ ಆರ್.ಅಶೋಕ್
Team Udayavani, Feb 6, 2023, 6:35 AM IST
ಚಿಕ್ಕಮಗಳೂರು: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ಗೆ ಸೋಲಿನ ಭಯ ಕಾಡುತ್ತಿದೆ. ಅವರು ನಿದ್ದೆಯಲ್ಲಿಯೂ ಮೋದಿ, ಬಿಜೆಪಿ ಕನಸು ಕಾಣುತ್ತಿದ್ದಾರೆ. ನಿದ್ದೆಯಿಂದ ಎದ್ದು ಏನೇನೋ ಮಾತನಾಡುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದರು.
ಕಡೂರು ತಾಲೂಕು ಹುಲಿಕೆರೆ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಬ್ಬರ ಮನಸ್ಸಿನಲ್ಲಿ ಕಾಂಗ್ರೆಸ್ ಸೋಲಿನ ಭಯ ಕಾಡುತ್ತಿದೆ. ಯಾರಿಗೆ ಭಯ ಶುರುವಾಗುತ್ತೋ ಅವರಿಗೆ ಮಾತಿನ ಮೇಲೆ ಹಿಡಿತವಿರಲ್ಲ. ಹಾಗಾಗಿ ಮಾತನಾಡುತ್ತಿದ್ದಾರೆ. ಅವರು ಏನು ಮಾತನಾಡುತ್ತಿದ್ದಾರೆಂಬುದು ಜನಕ್ಕೆ ಗೊತ್ತಾಗಿದೆ. ಸಿದ್ದರಾಮಯ್ಯ ಕಂಡರೆ ಡಿ.ಕೆ.ಶಿವಕುಮಾರ್‌ಗೆ ಆಗಲ್ಲ. ಅವರ ಮನೆಯ ಜಗಳ ಸರಿಮಾಡಿಕೊಳ್ಳಲಿ. ಇಬ್ಬರು ಒಂದೇ ಕಾರ್ಯಕ್ರಮದಲ್ಲಿ ಇದ್ದಾಗ ಒಬ್ಬರದ್ದು ಆ ಕಡೆ ಮುಖ ಇನ್ನೊಬ್ಬರ ಮುಖ ಈ ಕಡೆ. ಇನ್ನೂ ಇಬ್ಬರು ಬೇರೆ ಬೇರೆ ಯಾತ್ರೆ ಮಾಡಿದರೆ ಉತ್ತರ-ದಕ್ಷಿಣ ಆಗುತ್ತಾರೆ ಎಂದರು.
ಈ ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಗಂಟು ಮೂಟೆ ಕಟ್ಟಿಕೊಂಡು ಯಾತ್ರೆ ಹೊರಡಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಇದು ಕೊನೆಯ ಚುನಾವಣೆ ಎಂದರು. ನಮ್ಮ ಪಕ್ಷಕ್ಕೆ ಇಬ್ಬರೂ ಬೇಡವೇ ಬೇಡ. ಇಬ್ಬರ ಅಗತ್ಯವೂ ಪಕ್ಷಕಿಲ್ಲ. ಸರಕಾರ ರಚನೆಗೆ ಬೇಕಾದ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲುತ್ತೇವೆ. ರಾಜ್ಯ ಉಸ್ತುವಾರಿಯಾಗಿ ಕೆ.ಅಣ್ಣಾಮಲೈ, ಅರುಣ್ ಸಿಂಗ್ ಮತ್ತು ಧರ್ಮೇಂದ್ರ ಪ್ರಸಾದ್ ಅವರನ್ನು ನೇಮಿಸಿರುವುದನ್ನು ಸ್ವಾಗತಿಸುತ್ತೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಿಕ್ಕಮಗಳೂರು: ಮತದಾರರಿಗೆ ಹಂಚಲು ತಂದಿದ್ದ 150 ಕ್ವಿಂಟಾಲ್ ಅಕ್ಕಿ ವಶ
ಚಿಕ್ಕಮಗಳೂರು: ಸರಕಾರಿ ಬಸ್ ಢಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರ ಮೃತ್ಯು
ಚಿಕ್ಕಮಗಳೂರು: ಕೋಟ್ಯಂತರ ರೂ. ಮೌಲ್ಯದ ಚಿನ್ನ,ಸಾವಿರಾರು ಸೀರೆಗಳು ವಶ
ಟಿಪ್ಪುವಿನ ಕಾಲದಲ್ಲಿ ಇದ್ದಿದ್ರೆ ನಾನೇ ಉರಿಗೌಡ…; ಕಾಂಗ್ರೆಸ್ ಗೆ ಸಿ.ಟಿ.ರವಿ ತಿರುಗೇಟು
ಬೆಳ್ಳಿಪ್ರಕಾಶ ಪರ 10 ಕೋ. ರೂ. ಮೌಲ್ಯದ ಆಸ್ತಿ ಪಣ ಇಟ್ಟ ಬೆಂಬಲಿಗ
MUST WATCH
ಹೊಸ ಸೇರ್ಪಡೆ
ಹೆಚ್ಚಿನ ಮಾದಕ ದ್ರವ್ಯಗಳು ಪಾಕ್ ನಿಂದ ರವಾನೆ; ಸಾಗರದಲ್ಲಿ ಭದ್ರತೆ ಬಲಪಡಿಸಬೇಕು: ಶಾ
ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ
ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ
ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಬಾಲಕ ಮೃತ್ಯು
ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ