
ಶಿರಸಿ: ಕಾಡುಕೋಣದ ಮೃತದೇಹ ಪತ್ತೆ, ಅಧಿಕಾರಿಗಳಿಂದ ಪರಿಶೀಲನೆ
Team Udayavani, Feb 9, 2023, 7:08 PM IST

ಶಿರಸಿ: ತಾಲೂಕಿನ ಉಂಚಳ್ಳಿ ಸಮೀಪದ ಗಡಿಹಳ್ಳಿಯ ಅರಣ್ಯ ಸರ್ವೆ ನಂಬರ್ 76 ರಲ್ಲಿ ಕಾಡುಕೋಣವೊಂದು ಅಸಹಜವಾಗಿ ಮೃತಪಟ್ಟ ಘಟನೆ ನಡೆದಿದೆ.
ಅರಣ್ಯ ಭೂಮಿಯ ಏರು ಭಾಗದಲ್ಲಿ ಐದಾರು ವರ್ಷದ ಅಂದಾಜಿನ ಕಾಡುಕೋಣ ಸಾವನ್ನಪ್ಪಿದ್ದು ಪಶುಸಂಗೋಪನಾ ಇಲಾಖೆ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಸಾವಿನ ಕಾರಣ ಪರೀಕ್ಷಾ ವರದಿ ಬಂದ ಬಳಿಕವಷ್ಟೇ ತಿಳಿಯಬೇಕಿದೆ ಎಂದು ಉದಯವಾಣಿಗೆ ಪ್ರಕರಣ ದಾಖಲಿಸಿಕೊಂಡ ವಲಯಾರಣ್ಯ ಅಧಿಕಾರಿ ಶಿವಾನಂದ ತಿಳಿಸಿದ್ದಾರೆ.
ಇದನ್ನೂ ಓದಿ: ಮೊದಲ ರಾತ್ರಿಯ ಫೋಟೋ, ವಿಡಿಯೋ ಅಪ್ ಲೋಡ್ ಮಾಡಿದ ಜೋಡಿಗೆ ನೆಟ್ಟಿಗರ ಶಾಸ್ತಿ
ಟಾಪ್ ನ್ಯೂಸ್
