ಸಾಲಿಟೇರ್‌ ವಸತಿ ಸಮುಚ್ಚಯ ಉದ್ಘಾಟನೆ ಇಂದು


Team Udayavani, Dec 29, 2019, 3:06 AM IST

sALITER

ಮಂಗಳೂರು: ನಗರದ ಲ್ಯಾಂಡ್‌ಟ್ರೇಡ್ಸ್‌ ಬಿಲ್ಡರ್ ಆ್ಯಂಡ್‌ ಡೆವಲಪರ್ ಸಂಸ್ಥೆಯು ಹ್ಯಾಟ್‌ಹಿಲ್‌ನಲ್ಲಿ ನಿರ್ಮಿಸಿದ ಅತ್ಯಂತ ವಿಶಿಷ್ಟವಾದ “ಸಾಲಿಟೇರ್‌’ ಬಹು ಅಂತಸ್ತುಗಳ ವಸತಿ ಸಮುಚ್ಚಯವು ಡಿ.29ರಂದು ಸಂಜೆ ಉದ್ಘಾಟನೆಗೊಳ್ಳಲಿದೆ ಎಂದು ಲ್ಯಾಂಡ್‌ಟ್ರೇಡ್ಸ್‌ ನ ಮಾಲೀಕ ಕೆ.ಶ್ರೀನಾಥ್‌ ಹೆಬ್ಟಾರ್‌ ತಿಳಿಸಿದ್ದಾರೆ.

ಕ್ರಿಸಿಲ್‌ ಅಂತಾರಾಷ್ಟ್ರೀಯ ಮಾನ್ಯತಾ ಸಂಸ್ಥೆಯ ರಿಯಲ್‌ ಎಸ್ಟೇಟ್‌ ಯೋಜನಾ ಸಂಬಂಧಿತ ಗರಿಷ್ಠವಾದ 7 ಸ್ಟಾರ್ ಪುರಸ್ಕಾರಕ್ಕೆ ಪಾತ್ರವಾಗಿರುವ ಸಾಲಿಟೇರ್‌, ಕ್ರೆಡೈನಿಂದ ಅದರ ಮಂಗಳೂರು ಚಾಪ್ಟರ್‌ನಲ್ಲಿ 50ಕ್ಕಿಂತ ಹೆಚ್ಚು ವಸತಿಗಳ ವಿಭಾಗದಲ್ಲಿ “ಕೇರ್‌ ಅವಾರ್ಡ್‌ 2019′ ಪ್ರಶಸ್ತಿ ಪಡೆದಿದೆ.

ಆರ್ಕಿಟೆಕ್ನಿಕ್ಸ್‌ನ ಆರ್ಕಿಟೆಕ್ಟ್ ಪೀಟರ್‌ ಮಸ್ಕರೇಞ್ಞಸ್‌ ಅವರು ಈ ಯೋಜನೆಯ ಅತ್ಯಾಕರ್ಷಕ ವಿನ್ಯಾಸವನ್ನು ರೂಪಿಸಿದ್ದಾರೆ. ಪ್ರತಿ ಅಪಾರ್ಟ್‌ಮೆಂಟ್‌ ಕೂಡಾ ಅತ್ಯಾಧುನಿಕ ಶೈಲಿಯಲ್ಲಿ ಪೂರ್ಣ ಸ್ಥಳಾವಕಾಶ ಬಳಸಿ ಪರಿಪೂರ್ಣ ನಿರ್ಮಾಣ, ಬ್ರ್ಯಾಂಡೆಡ್‌ ಸಲಕರಣಗಳಿಂದ ಗಮನ ಸೆಳೆಯುತ್ತಿದೆ. ಆರು ಹಂತಗಳ ಪಾರ್ಕಿಂಗ್‌ ವ್ಯವಸ್ಥೆ ಇದ್ದು, ಎಲ್ಲಾ ಸ್ವರೂಪದ ವಾಹನಗಳಿಗೆ ಅವಕಾಶವಿದೆ.

ನಗರ ಪಾಲಿಕೆಯಿಂದ ಕಟ್ಟಡ ಪ್ರವೇಶಪತ್ರ, ಡೋರ್‌ ನಂಬರ್‌, ಅಗ್ನಿಶಾಮಕ ದಳದಿಂದ ಅಂತಿಮ ಅಂಗೀಕೃತ ಪತ್ರ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾಲಿನ್ಯರಹಿತ ಪರಿಸರ ಅಂತಿಮ ಪ್ರಮಾಣಪತ್ರ, ಶಾಶ್ವತವಾದ ವಿದ್ಯುತ್‌ ಮತ್ತು ನೀರಿನ ಸಂಪರ್ಕ ಇತ್ಯಾದಿ ಎಲ್ಲಾ ಅಧಿಕೃತ ಮತ್ತು ಅವಶ್ಯಕ ದಾಖಲೆಗಳನ್ನು ಪಡೆದುಕೊಂಡು, ಗ್ರಾಹಕರಿಗೆ ಸಂಪೂರ್ಣವಾಗಿ ವಿಶ್ವಾಸದಿಂದ ಈ ಯೋಜನೆ ಅರ್ಪಿಸುತ್ತಿದ್ದೇವೆ. ಕರ್ನಾಟಕ ರೆರಾದಿಂದ ಸಂಪೂರ್ಣ ಅಂತಿಮ ಪ್ರಮಾಣಪತ್ರ ಲಭ್ಯವಾಗಿದೆ ಎಂದು ಶ್ರೀನಾಥ್‌ ಹೆಬ್ಟಾರ್‌ ಹೇಳಿದ್ದಾರೆ.

ಲ್ಯಾಂಡ್‌ಟ್ರೇಡ್ಸ್‌ ಪರಂಪರೆ: 1992ರಲ್ಲಿ ಕೆ. ಶ್ರೀನಾಥ್‌ ಹೆಬ್ಟಾರ್‌ ಅವರು ಸ್ಥಾಪಿಸಿದ ಲ್ಯಾಂಡ್‌ಟ್ರೇಡ್ಸ್‌ ಸಂಸ್ಥೆಯು ಈಗಾಗಲೇ ವಸತಿಯುತ ಮತ್ತು ವಾಣಿಜ್ಯ ಸಂಬಂಧಿತ 35 ಯೋಜನೆಗಳನ್ನು ಯಶಸ್ವಿಯಾಗಿ ನಿರ್ಮಿಸಿದೆ. ಶ್ರೇಷ್ಠ ಗುಣಮಟ್ಟ, ಗ್ರಾಹಕರ ಸಂಪೂರ್ಣ ವಿಶ್ವಾಸದಿಂದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ರೂಪುಗೊಂಡಿದೆ.

ಐಎಸ್‌ಒ 9001: 2015 ಮಾನ್ಯತೆಯ ಜತೆಗೆ ಕ್ರಿಸಿಲ್‌ನ ಗರಿಷ್ಠ ರೇಟಿಂಗ್‌ ಸಹಿತ ಅನೇಕ ಪ್ರಥಮಗಳಿಗೆ ಪಾತ್ರವಾಗಿರುವ ನಗರದ ಏಕೈಕ ಬಿಲ್ಡರ್ ಸಂಸ್ಥೆಯಾಗಿದೆ. ನಿರ್ಮಾಣ ಕ್ಷೇತ್ರದ ಅನುಭವಿ ಹಾಗೂ ಕ್ರಿಯಾಶೀಲರ ತಂಡ ಲ್ಯಾಂಡ್‌ಟ್ರೇಡ್ಸ್‌ನಲ್ಲಿದೆ.  ಪ್ರತಿಷ್ಠೆಯ ಎಂಫಾರ್‌ ಕನ್‌ಸ್ಟಕ್ಷನ್ಸ್‌ ಸಂಸ್ಥೆಯು ನಿರ್ಮಾಣದ ಉಸ್ತುವಾರಿ ವಹಿಸಿದೆ. ಪೂರಕ ಮಾಹಿತಿಗೆ: www.landtrades.in <http://www.landtrades.in>

ಟಾಪ್ ನ್ಯೂಸ್

ಮನೆಯ ಪಹಣಿ ಪತ್ರಕ್ಕಾಗಿ 13 ಸಾವಿರ ಲಂಚ ಸ್ವೀಕಾರ : ಪಿಡಿಓ ಎಸಿಬಿ ಬಲೆಗೆ

ಮನೆಯ ಪಹಣಿ ಪತ್ರಕ್ಕಾಗಿ 13 ಸಾವಿರ ಲಂಚ ಸ್ವೀಕಾರ : ಪಿಡಿಓ ಎಸಿಬಿ ಬಲೆಗೆ

covid-1

ರಾಜ್ಯದಲ್ಲಿ ಇಂದು ಕೋವಿಡ್ ಗೆ 52 ಬಲಿ : 41,400 ಹೊಸ ಪ್ರಕರಣಗಳು

araga

ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಚುಟುವಟಿಕೆ: ಶೀಘ್ರ ಕ್ರಮವೆಂದ ಗೃಹ ಸಚಿವರು

ರಮೇಶ ಜಾರಕಿಹೊಳಿ ಸಚಿವಗಿರಿಗೆ ವಿಘ್ನಗಳೇ ಅಡ್ಡಿ; ಬಾಲಚಂದ್ರ ಬದಲಾವಣೆ ಕಷ್ಟ

ರಮೇಶ ಜಾರಕಿಹೊಳಿ ಸಚಿವಗಿರಿಗೆ ವಿಘ್ನಗಳೇ ಅಡ್ಡಿ; ಬಾಲಚಂದ್ರ ಬದಲಾವಣೆ ಕಷ್ಟ

1-erewrwr

ಬಾದಾಮಿಯಲ್ಲಿ ಅಭಿಮಾನಿ ಹಾಕಿದ ಕೇಸರಿ ರುಮಾಲು ಕಿತ್ತೆಸೆದ ಸಿದ್ದರಾಮಯ್ಯ!

1-dqwqe

ಅವರು ಬಿಜೆಪಿಗೆ ಬಂದರೆ ನಾನು ಬೇರೆ ಕಡೆ ಹೋಗುತ್ತೇನೆ : ರಮೇಶ್ ಜಾರಕಿಹೊಳಿ ಬಾಂಬ್

ಮತ್ತೆ ಪುಟಿದೆದ್ದ ಷೇರುಪೇಟೆ ಸೆನ್ಸೆಕ್ಸ್; ಜ.25ರಂದು ಲಾಭಗಳಿಸಿದ ಷೇರು ಯಾವುದು?

ಮತ್ತೆ ಪುಟಿದೆದ್ದ ಷೇರುಪೇಟೆ ಸೆನ್ಸೆಕ್ಸ್; ಜ.25ರಂದು ಲಾಭಗಳಿಸಿದ ಷೇರು ಯಾವುದು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

covid-1

ರಾಜ್ಯದಲ್ಲಿ ಇಂದು ಕೋವಿಡ್ ಗೆ 52 ಬಲಿ : 41,400 ಹೊಸ ಪ್ರಕರಣಗಳು

araga

ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಚುಟುವಟಿಕೆ: ಶೀಘ್ರ ಕ್ರಮವೆಂದ ಗೃಹ ಸಚಿವರು

1-erewrwr

ಬಾದಾಮಿಯಲ್ಲಿ ಅಭಿಮಾನಿ ಹಾಕಿದ ಕೇಸರಿ ರುಮಾಲು ಕಿತ್ತೆಸೆದ ಸಿದ್ದರಾಮಯ್ಯ!

1-sads

ಬಿಜೆಪಿ ನನಗೆ ಎರಡು ಸಲ ಮಂತ್ರಿ ಮಾಡಿದೆ, ಕಾಂಗ್ರೆಸ್ ಗೆ ಹೋಗುವುದಿಲ್ಲ: ಯೋಗೇಶ್ವರ್

1-dqwqe

ಅವರು ಬಿಜೆಪಿಗೆ ಬಂದರೆ ನಾನು ಬೇರೆ ಕಡೆ ಹೋಗುತ್ತೇನೆ : ರಮೇಶ್ ಜಾರಕಿಹೊಳಿ ಬಾಂಬ್

MUST WATCH

udayavani youtube

ಅಭಿಮಾನದಿಂದ ಹಾಕಿದ ಕೇಸರಿ ರುಮಾಲು ಕಿತ್ತೆಸೆದ ಸಿದ್ದರಾಮಯ್ಯ ! ದಂಗಾದ ಅಭಿಮಾನಿ

udayavani youtube

ಮುತ್ತಿನ ಪ್ರಕರಣ : ಶಿಲ್ಪಾ ಶೆಟ್ಟಿಯನ್ನು ’ಸಂತ್ರಸ್ತೆ’ ಎಂದ ಮುಂಬೈ ಕೋರ್ಟ್

udayavani youtube

ವಾಹನ ಸವಾರರ ಗೋಳು ಕೇಳುವವರು ಯಾರು

udayavani youtube

ಕೈ ಕಾಲಿಗೆ ಸರಪಳಿ ಬಿಗಿದು ಕಡಲಲ್ಲಿ ಈಜಿ ದಾಖಲೆ ಬರೆದ ಗಂಗಾಧರ್ ಕಡೆಕಾರ್

udayavani youtube

ಹುಟ್ಟಿದ ನಂತ್ರ ಹೋರಾಟ ಮನೋಭಾವ ಬೇಕು

ಹೊಸ ಸೇರ್ಪಡೆ

ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ: ಗೋವಾದಲ್ಲಿ ಕುಗ್ಗಿದ ಪ್ರವಾಸಿಗರ ಸಂಖ್ಯೆ

ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ: ಗೋವಾದಲ್ಲಿ ಕುಗ್ಗಿದ ಪ್ರವಾಸಿಗರ ಸಂಖ್ಯೆ

ballari news

ಶ್ರೀರಾಮುಲುಗೆ ಉಸುವಾರಿ-ಸಿಂಗ್‌ಗೆ ಕೊಪ್ಪಳ ಜವಾಬ್ದಾರಿ

ಮನೆಯ ಪಹಣಿ ಪತ್ರಕ್ಕಾಗಿ 13 ಸಾವಿರ ಲಂಚ ಸ್ವೀಕಾರ : ಪಿಡಿಓ ಎಸಿಬಿ ಬಲೆಗೆ

ಮನೆಯ ಪಹಣಿ ಪತ್ರಕ್ಕಾಗಿ 13 ಸಾವಿರ ಲಂಚ ಸ್ವೀಕಾರ : ಪಿಡಿಓ ಎಸಿಬಿ ಬಲೆಗೆ

davanagere news

289 ಸೋಂಕಿತರು ಗುಣಮುಖ

davanagere news

ಎಸ್‌ಯುಸಿಐನಿಂದ ಆನ್‌ಲೈನ್‌ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.