ಸ್ಪಿನ್‌ ತಂತ್ರವೇ ಗೆಲುವಿನ ಮಂತ್ರ: ಇಂದಿನಿಂದ ಭಾರತ-ಆಸ್ಟ್ರೇಲಿಯ ಟೆಸ್ಟ್‌ ಸರಣಿ

ನಿಂತು ಆಡುವವರಿಗೆ ರಿಯಲ್‌ ಟೆಸ್ಟ್‌

Team Udayavani, Feb 9, 2023, 8:00 AM IST

ಸ್ಪಿನ್‌ ತಂತ್ರವೇ ಗೆಲುವಿನ ಮಂತ್ರ: ಇಂದಿನಿಂದ ಭಾರತ-ಆಸ್ಟ್ರೇಲಿಯ ಟೆಸ್ಟ್‌ ಸರಣಿ

ನಾಗ್ಪುರ: ಇಷ್ಟು ದಿನಗಳ ಕಾಲ ಬರೀ ಟಿ20 ಪಂದ್ಯಗಳನ್ನು, ನಡುವೆ ಬೆರಳೆಣಿಕೆಯಷ್ಟು ಏಕದಿನ ಪಂದ್ಯಗಳನ್ನು ಆಡಿದ ಭಾರತಕ್ಕೆ ಗುರುವಾರದಿಂದ ನಿಜವಾದ ಅಗ್ನಿಪರೀಕ್ಷೆ ಆರಂಭವಾಗಲಿದೆ. ಪ್ರವಾಸಿ ಆಸ್ಟ್ರೇಲಿಯ ಎದುರಿನ 4 ಪಂದ್ಯಗಳ “ಬೋರ್ಡರ್‌-ಗಾವಸ್ಕರ್‌ ಟ್ರೋಫಿ’ ಟೆಸ್ಟ್‌ ಸರಣಿಗೆ ನಾಗ್ಪುರದಲ್ಲಿ ಚಾಲನೆ ಲಭಿಸಲಿದೆ. ಕೆಲವೇ ಗಂಟೆಗಳಲ್ಲಿ ಹೊಡಿಬಡಿ ಕ್ರಿಕೆಟ್‌ ಆಡಿ ರಂಜಿಸಿದ ಮಂದಿ ಬರೋಬ್ಬರಿ 5 ದಿನಗಳ ಕಾಲ ನಿಂತು ಆಡುವ ಸವಾಲಿಗೆ ಸಜ್ಜಾಗಬೇಕಿದೆ.

ಇದು ವಿಶೇಷ ಮಹತ್ವ ಪಡೆದಿರುವ ಸರಣಿ. ಕೆಲವರ ವಿಶ್ಲೇಷಣೆಯಂತೆ ಆ್ಯಶಸ್‌ಗಿಂತಲೂ ಮಿಗಿಲು. ಎರಡೂ ತಂಡಗಳು ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೊದಲೆರಡು ಸ್ಥಾನ ಅಲಂಕರಿಸಿವೆ. ಆಸ್ಟ್ರೇಲಿಯ 126, ಭಾರತ 115 ಅಂಕಗಳನ್ನು ಹೊಂದಿವೆ. ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಈ ಎರಡು ತಂಡಗಳೇ ಎದುರಾಗುವುದು ಬಹುತೇಕ ಖಾತ್ರಿಯಾಗಿದೆ. ಹೀಗಾಗಿ ಕ್ರಿಕೆಟ್‌ ವಿಶ್ವವೇ ಈ ಸರಣಿಯನ್ನು ಕಾತರದ ಕಣ್ಣುಗಳಿಂದ ನೋಡುವುದರಲ್ಲಿ ಅನುಮಾನವಿಲ್ಲ.

ಸ್ಪಿನ್ನಿಗೆ ಸ್ಪಿನ್‌ ರಣತಂತ್ರ
ಮೇಲ್ನೋಟಕ್ಕೆ ಭಾರತ ಈ ಸರಣಿಯ ನೆಚ್ಚಿನ ತಂಡ. ಕಾರಣ, ತವರಿನಲ್ಲಿ ಹಾಗೂ ಸ್ಪಿನ್‌ ಟ್ರ್ಯಾಕ್‌ಗಳಲ್ಲಿ ಈ ಸರಣಿ ನಡೆಯುವುದು. ಆದರೆ ಎಲ್ಲ ತಂಡಗಳಂತೆ ಆಸ್ಟ್ರೇಲಿಯವನ್ನೂ ಸ್ಪಿನ್‌ ಖೆಡ್ಡಕ್ಕೆ ಬೀಳಿಸಲು ಸಾಧ್ಯವೇ ಎಂಬುದೊಂದು ಪ್ರಶ್ನೆ. ಆಸೀಸ್‌ ಕೂಡ ಬಲಿಷ್ಠ ಸ್ಪಿನ್‌ ಪಡೆಯನ್ನು ಹೊಂದಿದ್ದು, ತಿರುಗೇಟಿನ ವಿಶ್ವಾಸದಲ್ಲಿದೆ. ನಮ್ಮಲ್ಲಿ ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ರವೀಂದ್ರ ಜಡೇಜ ಇದ್ದರೆ, ಅವರಲ್ಲಿ ನಥನ್‌ ಲಿಯಾನ್‌, ಆ್ಯಶrನ್‌ ಅಗರ್‌, ಮಿಚೆಲ್‌ ಸ್ವೆಪ್ಸನ್‌, ಟಾಡ್‌ ಮರ್ಫಿ ಇದ್ದಾರೆ. ಸ್ಪಿನ್ನಿಗೆ ಸ್ಪಿನ್‌ ಎಂಬ ರಣತಂತ್ರ ಕಾಂಗರೂಗಳದ್ದು. ಹೀಗಾಗಿ ಇಲ್ಲಿ ಯಾರು ಸ್ಪಿನ್‌ ದಾಳಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲರೋ ಅವರಿಗೆ ಮೇಲುಗೈ ಖಚಿತ ಎಂಬುದೊಂದು ಲೆಕ್ಕಾಚಾರ.

ಭಾರತಕ್ಕೆ ಹೋಲಿಸಿದರೆ ಆಸ್ಟ್ರೇಲಿಯದ ವೇಗದ ಬೌಲಿಂಗ್‌ ಹೆಚ್ಚು ಘಾತಕ. ಆದರೆ ನಾಯಕ ಪ್ಯಾಟ್‌ ಕಮಿನ್ಸ್‌ ಅವರಿಗೆ ಜತೆ ನೀಡಲು ಜೋಶ್‌ ಹೇಝಲ್‌ವುಡ್‌ ಮತ್ತು ಮಿಚೆಲ್‌ ಸ್ಟಾರ್ಕ್‌ ಇಲ್ಲದಿ ರುವುದು ದೊಡ್ಡ ಹಿನ್ನಡೆಯೇ ಆಗಿದೆ. ಗಾಯಾಳಾ ಗಿರುವ ಇವರಿಬ್ಬರೂ ಮೊದಲ ಟೆಸ್ಟ್‌ನಿಂದ ಬೇರ್ಪ ಟ್ಟಿದ್ದಾರೆ. ಭಾರತ ಇದರ ಲಾಭ ಎತ್ತಬೇಕಿದೆ.

ಅನುಭವದ ಲೆಕ್ಕಾಚಾರದಲ್ಲಿ ಎರಡೂ ಸಮ
ಬಲ ತಂಡಗಳೇ ಆಗಿವೆ. ನಮ್ಮಲ್ಲಿ ಕೊಹ್ಲಿ, ಪೂಜಾರ, ರೋಹಿತ್‌, ಅಶ್ವಿ‌ನ್‌, ರಾಹುಲ್‌, ಶಮಿ, ಕುಲದೀಪ್‌, ಜಡೇಜ ಉತ್ತಮ ಟೆಸ್ಟ್‌ ಅನುಭವ ಹೊಂದಿದ್ದಾರೆ. ಕಾಂಗರೂ ಪಡೆಯಲ್ಲಿ ವಾರ್ನರ್‌, ಖ್ವಾಜಾ, ಸ್ಮಿತ್‌, ಲಬುಶೇನ್‌, ಲಿಯಾನ್‌, ಹೆಡ್‌ ಅವರ ಅನುಭವವನ್ನು ಅವಲಂಬಿಸಿದೆ.

ಆಸ್ಟ್ರೇಲಿಯ ಟೆಸ್ಟ್‌ ಕ್ರಿಕೆಟನ್ನು ಹೆಚ್ಚು ಗಂಭೀರ ವಾಗಿ ತೆಗೆದುಕೊಳ್ಳುವ ತಂಡ. ಐಪಿಎಲ್‌ನಂತೆ ಅಲ್ಲಿ ಬಿಗ್‌ ಬಾಶ್‌ ಲೀಗ್‌ ನಡೆದರೂ ಇವರು ಟೆಸ್ಟ್‌ ಕ್ರಿಕೆಟಿಗೆ ಕೊಡುವ ಮಹತ್ವ ಕಡಿಮೆ ಆಗಿಲ್ಲ. ಮಹತ್ವದ ಟೆಸ್ಟ್‌ ಸರಣಿ ಎದುರಿಗಿದ್ದರಂತೂ ಯಾವ ಲೀಗ್‌ಗಳಲ್ಲೂ ಆಸೀಸ್‌ ಕ್ರಿಕೆಟಿಗರು ಪಾಲ್ಗೊಳ್ಳುವುದಿಲ್ಲ. ಆದರೆ ನಮ್ಮಲ್ಲಿ ಟಿ20
ಕ್ರಿಕೆಟಿಗೇ ಅಗ್ರ ಮಣೆ. ಹೀಗಾಗಿ ನಿಂತು ಆಡುವುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ!

ತಂಡದ ಕಾಂಬಿನೇಶನ್‌
ಕುತೂಹಲವಿರುವುದು ತಂಡದ ಕಾಂಬಿನೇಶನ್‌ನಲ್ಲಿ. ನಾಯಕ ರೋಹಿತ್‌ ಶರ್ಮ ಅವರಿಗೆ ಜತೆ ಗಾರನಾಗಿ ಶುಭಮನ್‌ ಗಿಲ್‌ ಬರುವ ಸಾಧ್ಯತೆ ಹೆಚ್ಚು. ಆಗ ಕೆ.ಎಲ್‌. ರಾಹುಲ್‌ ಮಧ್ಯಮ ಕ್ರಮಾಂಕದಲ್ಲಿ ಆಡಲು ಇಳಿಯಬೇಕಾಗುತ್ತದೆ. ಆದರೆ ರಾಹುಲ್‌ ಟೆಸ್ಟ್‌ನಲ್ಲಿ ಕೀಪಿಂಗ್‌ ನಡೆಸಲು ಶಕ್ತರೇ ಎಂಬ ಪ್ರಶ್ನೆ ಇದೆ. ರಿಷಭ್‌ ಪಂತ್‌ ಗೈರಲ್ಲಿ ಕೆ.ಎಸ್‌. ಭರತ್‌ ಕೀಪಿಂಗ್‌ ನಡೆಸುವ ಸಾಧ್ಯತೆ ಹೆಚ್ಚು. ರಣಜಿಯಲ್ಲಿ ತ್ರಿಶತಕ ಬಾರಿಸಿದ ಹೆಗ್ಗಳಿಕೆ ಇವರದಾಗಿದೆ. ಆದರೆ ಇಲ್ಲಿ ಆಸೀಸ್‌ ಬೌಲಿಂಗ್‌ ಸವಾಲನ್ನು ಎದುರಿಸಿ ನಿಲ್ಲುವುದು ಸುಲಭವವಲ್ಲ.

ಮತ್ತೊಂದು ಕೀಪಿಂಗ್‌ ಆಯ್ಕೆ ಇಶಾನ್‌ ಕಿಶನ್‌. ಬ್ಯಾಟಿಂಗ್‌ ಶೈಲಿಯಲ್ಲಿ ಇವರನ್ನು ಪಂತ್‌ಗೆ
ಹೋಲಿಸಬಹುದು. ಆದರೆ ತೀವ್ರ ತಿರುವು ಪಡೆಯುವ ಟ್ರ್ಯಾಕ್‌ಗಳಲ್ಲಿ, 3ನೇ ದಿನದ ಬಳಿಕ ಕೀಪಿಂಗ್‌ ನಡೆಸುವಷ್ಟು ಚಾಕಚಕ್ಯತೆ ಇಶಾನ್‌ ಅವರಲ್ಲಿದೆಯೇ ಎಂಬ ಪ್ರಶ್ನೆ ಸಹಜ.

ಉಳಿದಂತೆ ಪೂಜಾರ, ಕೊಹ್ಲಿ, ಜಡೇಜ, ಅಶ್ವಿ‌ನ್‌, ಶಮಿ, ಸಿರಾಜ್‌ ಖಾಯಂ ಸದಸ್ಯರ ಯಾದಿಯಲ್ಲಿದ್ದಾರೆ. “ಯಾದವ’ತ್ರಯರಾದ ಸೂರ್ಯಕುಮಾರ್‌, ಉಮೇಶ್‌ ಮತ್ತು ಕುಲದೀಪ್‌ ಆಡುವ ಸಾಧ್ಯತೆ ಫಿಫ್ಟಿ-ಫಿಫ್ಟಿ ಎನ್ನಬಹುದು.

ವೇಗದ ಬೌಲಿಂಗ್‌ ವಿಭಾಗದಲ್ಲಿ ಇಬ್ಬರಷ್ಟೇ ಕಾಣಿಸಿಕೊಳ್ಳಬಹುದು. ರಿವರ್ಸ್‌ ಸ್ವಿಂಗ್‌ನಲ್ಲಿ ಮೋಡಿ ಮಾಡಬಲ್ಲ ಶಮಿ, ಸಿರಾಜ್‌ ಮೊದಲ ಆಯ್ಕೆಯಾಗಬಲ್ಲರು.

ಎಡಗೈ ಬ್ಯಾಟರ್‌ಗಳ ಪಡೆ
ಆಸ್ಟ್ರೇಲಿಯ ಎಡಗೈ ಆಟಗಾರರ ದೊಡ್ಡ ಪಡೆಯನ್ನೇ ಹೊಂದಿದೆ. ವಾರ್ನರ್‌, ಖ್ವಾಜಾ, ಹೆಡ್‌ ಮತ್ತು ಕ್ಯಾರಿ ಇವರಲ್ಲಿ ಪ್ರಮುಖರು. ಈ ನಾಲ್ಕೂ ಮಂದಿ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಬಲಗೈ ಬ್ಯಾಟರ್‌ಗಳಾದ ಸ್ಮಿತ್‌, ಲಬುಶೇನ್‌ ಕೂಡ ಅಪಾಯಕಾರಿಗಳು. ಗ್ರೀನ್‌ ಗೈರಲ್ಲಿ ಹ್ಯಾಂಡ್ಸ್‌ ಕಾಂಬ್‌, ರೆನ್‌ಶಾ ನಡುವೆ ಪೈಪೋಟಿ ಇದೆ.ಲಿಯಾನ್‌ಗೆ ಸ್ಪಿನ್‌ ಜೋಡಿಯಾಗಿ ಅಗರ್‌ ಬರಬಹುದು. ನಾಯಕ ಕಮಿನ್ಸ್‌ ಜತೆ ಸ್ಕಾಟ್‌ ಬೋಲ್ಯಾಂಡ್‌ ಬೌಲಿಂಗ್‌ ಆರಂಭಿಸಲು ಸಜ್ಜಾಗಿದ್ದಾರೆ.

ಆಸ್ಟ್ರೇಲಿಯ ವಿರುದ್ಧವೇ ಮೊದಲ ಟೆಸ್ಟ್‌
ನಾಗ್ಪುರದ “ವಿಸಿಎ ಸ್ಟೇಡಿಯಂ’ನಲ್ಲಿ ಭಾರತ ಈವರೆಗೆ 6 ಟೆಸ್ಟ್‌ ಪಂದ್ಯಗಳನ್ನಾಡಿದ್ದು, ನಾಲ್ಕನ್ನು ಗೆದ್ದಿದೆ. ಒಂದರಲ್ಲಿ ಸೋತಿದೆ. ಒಂದು ಪಂದ್ಯ ಡ್ರಾಗೊಂಡಿದೆ.

ಇಲ್ಲಿ ಮೊದಲ ಟೆಸ್ಟ್‌ ನಡೆದದ್ದೇ ಆಸ್ಟ್ರೇಲಿಯ ವಿರುದ್ಧ. ಅದು 2008ರ ಸರಣಿಯ 4ನೇ ಹಾಗೂ ಅಂತಿಮ ಪಂದ್ಯವಾಗಿತ್ತು. ಧೋನಿ ಮತ್ತು ಪಾಂಟಿಂಗ್‌ ನಾಯಕ ರಾಗಿದ್ದರು. ಭಾರತ 172 ರನ್ನುಗಳ ಭಾರೀ ಅಂತರದಿಂದ ಜಯಿಸಿ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತು.

ಭಾರತ ಪರ ಸಚಿನ್‌ ತೆಂಡುಲ್ಕರ್‌ (109), ಆಸ್ಟ್ರೇಲಿಯ ಪರ ಸೈಮನ್‌ ಕ್ಯಾಟಿಚ್‌ (102) ಶತಕ ಬಾರಿಸಿದ್ದರು. ಸೆಹವಾಗ್‌, ಲಕ್ಷ್ಮಣ್‌, ಗಂಗೂಲಿ, ಧೋನಿ, ಹರ್ಭಜನ್‌, ಮೈಕಲ್‌ ಹಸ್ಸಿಅವರಿಂದ ಅರ್ಧ ಶತಕ ದಾಖಲಾಗಿತ್ತು. ಜೇಸನ್‌ ಕ್ರೇಝ 8 ಪ್ಲಸ್‌ 4 ವಿಕೆಟ್‌ ಉಡಾಯಿಸಿ ಬೌಲಿಂಗ್‌ ಹೀರೋ ಆಗಿ ಮೆರೆದುದನ್ನು ಮರೆಯುವಂತಿಲ್ಲ. ಹರ್ಭಜನ್‌, ಅಮಿತ್‌ ಮಿಶ್ರಾ ಭಾರತದ ಯಶಸ್ವಿ ಬೌಲರ್‌ಗಳಾಗಿದ್ದರು. 15 ವರ್ಷಗಳ ಬಳಿಕ ಭಾರತ – ಆಸ್ಟ್ರೇಲಿಯ ನಾಗ್ಪುರದಲ್ಲಿ ಮುಖಾಮುಖೀ ಆಗುತ್ತಿವೆ.

ತಂಡಗಳು
ಭಾರತ: ರೋಹಿತ್‌ ಶರ್ಮ (ನಾಯಕ), ಕೆ.ಎಲ್‌. ರಾಹುಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ಶುಭಮನ್‌ ಗಿಲ್‌, ರವೀಂದ್ರ ಜಡೇಜ, ಕೆ.ಎಸ್‌. ಭರತ್‌, ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌, ಕುಲದೀಪ್‌ ಯಾದವ್‌, ಸೂರ್ಯಕುಮಾರ್‌ ಯಾದವ್‌, ಉಮೇಶ್‌ ಯಾದವ್‌, ಜೈದೇವ್‌ ಉನಾದ್ಕತ್‌, ಇಶಾನ್‌ ಕಿಶನ್‌.

ಆಸ್ಟ್ರೇಲಿಯ: ಪ್ಯಾಟ್‌ ಕಮಿನ್ಸ್‌ (ನಾಯಕ), ಡೇವಿಡ್‌ ವಾರ್ನರ್‌, ಉಸ್ಮಾನ್‌ ಖ್ವಾಜಾ, ಮಾರ್ನಸ್‌ ಲಬುಶೇನ್‌, ಸ್ಟೀವ್‌ ಸ್ಮಿತ್‌, ಟ್ರ್ಯಾವಿಸ್‌ ಹೆಡ್‌, ಅಲೆಕ್ಸ್‌ ಕ್ಯಾರಿ, ಮ್ಯಾಟ್‌ ರೆನ್‌ಶಾ, ಪೀಟರ್‌ ಹ್ಯಾಂಡ್ಸ್‌ಕಾಂಬ್‌, ನಥನ್‌ ಲಿಯಾನ್‌, ಆ್ಯಶrನ್‌ ಅಗರ್‌, ಸ್ಕಾಟ್‌ ಬೋಲ್ಯಾಂಡ್‌, ಲ್ಯಾನ್ಸ್‌ ಮಾರಿಸ್‌, ಮಿಚೆಲ್‌ ಸ್ವೆಪ್ಸನ್‌, ಟಾಡ್‌ ಮರ್ಫಿ.
ಜೋಶ್‌ ಹೇಝಲ್‌ವುಡ್‌ ಮತ್ತು ಕ್ಯಾಮರಾನ್‌ ಗ್ರೀನ್‌ ಗಾಯಾಳಾಗಿದ್ದಾರೆ. ಮಿಚೆಲ್‌ ಸ್ಟಾರ್ಕ್‌ ದ್ವಿತೀಯ ಟೆಸ್ಟ್‌ ಪಂದ್ಯದಿಂದ ಲಭ್ಯರಿರುತ್ತಾರೆ.

ಆರಂಭ: ಬೆಳಗ್ಗೆ 9.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಟಾಪ್ ನ್ಯೂಸ್

1-sadadasdasd

ನೂತನ ಸಂಸತ್ ಭವನಕ್ಕೆ ಪ್ರಧಾನಿ ದಿಢೀರ್ ಭೇಟಿ; ಕಾಮಗಾರಿಗಳ ಪರಿಶೀಲನೆ

ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ 2ನೇ ಬಾರಿ ಅಧಿಕಾರಿಗಳ ದಾಳಿ: ಲಕ್ಷಾಂತರ ಮೌಲ್ಯದ ಸೊತ್ತು ವಶ

ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ 2ನೇ ಬಾರಿ ಅಧಿಕಾರಿಗಳ ದಾಳಿ: ಲಕ್ಷಾಂತರ ಮೌಲ್ಯದ ಸೊತ್ತು ವಶ

ದೆಹಲಿಯಲ್ಲಿ ಗುಡುಗು ಸಹಿತ ಮಳೆ: 17 ವಿಮಾನಗಳ ಮಾರ್ಗ ಬದಲಾವಣೆ

ದೆಹಲಿಯಲ್ಲಿ ಗುಡುಗು ಸಹಿತ ಮಳೆ: 17 ವಿಮಾನಗಳ ಮಾರ್ಗ ಬದಲಾವಣೆ

1-wwqeq3

ಮೇರು ಗಾಯಕ; ಕಿರಾಣಾ ಘರಾಣಾ ಶೈಲಿಯ ಕೊಂಡಿ ಜಯತೀರ್ಥ ಮೇವುಂಡಿ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

shashikala-jolle

ನೀತಿ ಸಂಹಿತೆ ಉಲ್ಲಂಘನೆ: ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಎಫ್ ಐಆರ್

ಉಡುಪಿ: ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ

ಉಡುಪಿ: ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kohli

ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ 10 ನೇ ತರಗತಿ ಅಂಕಪಟ್ಟಿ ಹಂಚಿಕೊಂಡ ಕಿಂಗ್‌ ಕೊಹ್ಲಿ!

Bhuvneshwar Kumar Replaces Adien Markram As Captain Of Sunrisers Hyderabad?

ಹೈದರಾಬಾದ್ ತಂಡದ ನಾಯಕತ್ವ ಬದಲಾವಣೆ? ಮಾಕ್ರಮ್ ಬದಲು ಕಾಣಸಿಕೊಂಡ ಭುವನೇಶ್ವರ್

Arjun Tendulkar To Debut For Mumbai Indians In IPL 2023?

ಈ ಬಾರಿಯಾದರೂ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

josh hazlewood glenn maxwell will not feature opening match of RCB

ಐಪಿಎಲ್ 2023: ಆರ್ ಸಿಬಿಯ ಮೊದಲ ಪಂದ್ಯಕ್ಕೆ ಲಭ್ಯವಿಲ್ಲ ಹೇಜಲ್ವುಡ್, ಮ್ಯಾಕ್ಸವೆಲ್

ODI World Cup 2023: Mumbai, Ahmedabad To Hosts Semis And Final

ಮುಂಬೈನಲ್ಲಿ ವಿಶ್ವಕಪ್ ಸೆಮಿಫೈನಲ್ ಮ್ಯಾಚ್; ಭಾರತ- ಪಾಕ್ ಪಂದ್ಯ ನಡೆಯುವುದು ಎಲ್ಲಿ?

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

1a-wasa

ವಿಜಯಪುರ: ಮಹಾರಾಷ್ಟ್ರ ಮೂಲದ ವ್ಯಕ್ತಿಯಿಂದ 6 ಲಕ್ಷ ರೂ.,480 ಗ್ರಾಂ ಚಿನ್ನ ವಶ

1-sadadasdasd

ನೂತನ ಸಂಸತ್ ಭವನಕ್ಕೆ ಪ್ರಧಾನಿ ದಿಢೀರ್ ಭೇಟಿ; ಕಾಮಗಾರಿಗಳ ಪರಿಶೀಲನೆ

ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ 2ನೇ ಬಾರಿ ಅಧಿಕಾರಿಗಳ ದಾಳಿ: ಲಕ್ಷಾಂತರ ಮೌಲ್ಯದ ಸೊತ್ತು ವಶ

ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ 2ನೇ ಬಾರಿ ಅಧಿಕಾರಿಗಳ ದಾಳಿ: ಲಕ್ಷಾಂತರ ಮೌಲ್ಯದ ಸೊತ್ತು ವಶ

ದೆಹಲಿಯಲ್ಲಿ ಗುಡುಗು ಸಹಿತ ಮಳೆ: 17 ವಿಮಾನಗಳ ಮಾರ್ಗ ಬದಲಾವಣೆ

ದೆಹಲಿಯಲ್ಲಿ ಗುಡುಗು ಸಹಿತ ಮಳೆ: 17 ವಿಮಾನಗಳ ಮಾರ್ಗ ಬದಲಾವಣೆ

1-sadsasd

ಹುಣಸೂರು: ರೌಡಿ ಶೀಟರ್ ತನ್ವೀರ್ ಬೇಗ್ ಗಡಿಪಾರು