ಶ್ರೀರಾಮನ ವನವಾಸದ ಚಿತ್ರಕೂಟ ಭಾರತೀಯರೆಲ್ಲ ವೀಕ್ಷಿಸಬೇಕಾದ ಸ್ಥಳ;ವಿದ್ಯಾಧೀಶ ತೀರ್ಥ ಸ್ವಾಮೀಜಿ

ಶ್ರೀ ರಾಮಾಯಣ ಪ್ರವಚನ ಸಮಾರೋಪ ಸಮಾರಂಭ ಮಾ. 30ರಂದು ಸಂಜೆ 5 ಗಂಟೆಗೆ ನಡೆಯಲಿದೆ.

Team Udayavani, Mar 29, 2023, 5:27 PM IST

ಶ್ರೀರಾಮನ ವನವಾಸದ ಚಿತ್ರಕೂಟ ಭಾರತೀಯರೆಲ್ಲ ವೀಕ್ಷಿಸಬೇಕಾದ ಸ್ಥಳ;ವಿದ್ಯಾಧೀಶ ತೀರ್ಥ ಸ್ವಾಮೀಜಿ

ಹುಬ್ಬಳ್ಳಿ: ಶ್ರೀರಾಮನು ವನವಾಸದ 12 ವರ್ಷಗಳನ್ನು ಕಳೆದ ಚಿತ್ರಕೂಟ ಪರ್ವತ ಪ್ರತಿಯೊಬ್ಬ ಭಾರತೀಯ ಸಂದರ್ಶಿಸಬೇಕಾದ ಸ್ಥಳ ಎಂದು ಉಡುಪಿ ಪಲಿಮಾರು ಮಠದ ಹಿರಿಯ ಯತಿ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಶ್ರೀರಾಮನವಮಿ ಹಬ್ಬ ಹಾಗೂ ಶ್ರೀ ಕೃಷ್ಣ ದೇವರ ಪ್ರತಿಷ್ಠಾ ಸುವರ್ಣ ಮಹೋತ್ಸವ ನಿಮಿತ್ತ ರಾಮಾಯಣ ಪ್ರವಚನ ನೀಡಿದ ಶ್ರೀಗಳು, ಅಲ್ಲಿ ಭರತನು ಅಣ್ಣ ರಾಮನನ್ನು ಭೇಟಿ ಮಾಡಿದ ಭರತ ಮಿಲಾಪ್‌ ಎಂಬ ಪವಿತ್ರ ಸ್ಥಳವಿದ್ದು, ಅದನ್ನು ಸಂದರ್ಶಿಸಿದರೆ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು ಎಂದರು.

ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಗಡಿ ಪ್ರದೇಶದ ಉತ್ತರ ವಿಂಧ್ಯಪರ್ವತ ಶ್ರೇಣಿಯಲ್ಲಿರುವ ಚಿತ್ರಕೂಟದಲ್ಲಿರುವ ಭರತ ಮಿಲಾಪ್‌ ಎಂಬ ಪ್ರದೇಶವು ಪಾವಿತ್ರ್ಯತೆ ಹೊಂದಿದೆ. ಅಲ್ಲಿ ವಿಶ್ವಾತ್ಮಕ ಶಕ್ತಿಗಳ ಕಂಪನಗಳಿವೆ. ಆ ಸ್ಥಳವನ್ನು ಸ್ಪರ್ಶಿಸಿ, ಅದಕ್ಕೆ ನಮಸ್ಕಾರ ಮಾಡಿದರೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇಡೀ ಪರ್ವತವನ್ನೇ ಒಂದೆರಡು ಗಂಟೆಗಳಲ್ಲಿ ಪ್ರದಕ್ಷಿಣೆ ಮಾಡಬಹುದು. ಒಡೆದು ಹೋದ ಕುಟುಂಬವನ್ನು ಒಟ್ಟು ಸೇರಿಸುವ ಶಕ್ತಿ ಅದಕ್ಕಿದೆ ಎಂದು ಹೇಳಿದರು.

ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮಿಜಿ ಮಾತನಾಡಿ, ರಾಮನ ಅಶ್ವಮೇಧ ಯಾಗ ಕುರಿತ ಸಿದ್ಧತೆಗಳ ಕುರಿತು ವಿವರಣೆ ನೀಡಿದರು. ಉದ್ಯಮಿ ಗೋಪಾಲಕೃಷ್ಣ ನಾಯಕ ಮುಖ್ಯ ಅತಿಥಿಯಾಗಿದ್ದರು. ಪಂಡಿತ ವೆಂಕಟೇಶಾಚಾರ್ಯ ಕೊರ್ಲಹಳ್ಳಿ, ಗಿರೀಶ ಆಚಾರ್ಯ ಪ್ರವಚನ ನೀಡಿದರು. ಶ್ರೀ ಮಹಾಲಕ್ಷ್ಮೀ ಮಹಿಳಾ ಮಂಡಳ ಸದಸ್ಯರು ಭಜನೆ ಮಾಡಿದರು. ದಯಾನಂದ ರಾವ್‌ ನಿರೂಪಿಸಿದರು.

ಮಾ. 30ರಂದು ಪ್ರವಚನ ಸಮಾರೋಪ
ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಶ್ರೀ ಕೃಷ್ಣ ದೇವರ ಪ್ರತಿಷ್ಠಾ ಸುವರ್ಣ ಮಹೋತ್ಸವ ಮತ್ತು ಶ್ರೀರಾಮ ನವಮಿ ಉತ್ಸವದ ನಿಮಿತ್ತ ನಡೆದ ಶ್ರೀ ರಾಮಾಯಣ ಪ್ರವಚನ ಸಮಾರೋಪ ಸಮಾರಂಭ ಮಾ. 30ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಉಡುಪಿ ಪಲಿಮಾರು ಮಠದ ಹಿರಿಯ ಯತಿ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಶ್ರೀರಾಮ ಜನ್ಮೋತ್ಸವ, ತೊಟ್ಟಿಲೋತ್ಸವ, ಶ್ರೀಗಳವರಿಂದ ಸಂಸ್ಥಾನ ಪೂಜೆ, ಶ್ರೀಗಳವರಿಗೆ ಭಿಕ್ಷೆ, ಭಕ್ತಾದಿಗಳಿಗೆ ಮಹಾಪ್ರಸಾದ ಕಾರ್ಯಕ್ರಮ ನಡೆಯಲಿದೆ.

ಟಾಪ್ ನ್ಯೂಸ್

ಉದ್ಯೋಗಿಗಳನ್ನು ಪೀಡಿಸಿಲ್ಲ: ಟಿಸಿಎಸ್‌ ಸ್ಪಷ್ಟನೆ!

TCS;ಉದ್ಯೋಗಿಗಳನ್ನು ಪೀಡಿಸಿಲ್ಲ: ಟಿಸಿಎಸ್‌ ಸ್ಪಷ್ಟನೆ!

ಅಮೆರಿಕ-ತೈವಾನ್‌ ಒಪ್ಪಂದಕ್ಕೆ ಚೀನಾ ಖ್ಯಾತೆ

ಅಮೆರಿಕ-ತೈವಾನ್‌ ಒಪ್ಪಂದಕ್ಕೆ ಚೀನಾ ಖ್ಯಾತೆ

Western Ghats;ನೀರೇ ಇಲ್ಲದಿದ್ದರೂ ಬದುಕುವ 62 ಸಸ್ಯಗಳು!

Western Ghats;ನೀರೇ ಇಲ್ಲದಿದ್ದರೂ ಬದುಕುವ 62 ಸಸ್ಯಗಳು!

ಹಳ್ಳಿಗಳಲ್ಲಿ ಏರುತ್ತಿದೆ ಪಂಚಾಯ್ತಿ ರಾಜಕಾರಣದ ಬಿಸಿ

ಹಳ್ಳಿಗಳಲ್ಲಿ ನಿಧಾನವಾಗಿ ಏರುತ್ತಿದೆ ಪಂಚಾಯತ್‌ ಚುನಾವಣೆ ಬಿಸಿ

New Parliament; ನೂತನ ಸಂಸತ್ತಿನಲ್ಲಿದೆ ವಿಶೇಷ ಪೆಂಡ್ಯುಲಮ್‌

New Parliament; ನೂತನ ಸಂಸತ್ತಿನಲ್ಲಿದೆ ವಿಶೇಷ ಪೆಂಡ್ಯುಲಮ್‌

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

British ಉದ್ಯಮಿ ಬಳಿ 15 ರೋಲ್ಸ್‌ ರಾಯ್ಸ ಕಾರುಗಳು!

British ಉದ್ಯಮಿ ಬಳಿ 15 ರೋಲ್ಸ್‌ ರಾಯ್ಸ ಕಾರುಗಳು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapur: ಮಲೀನವಾಗುತ್ತಿರುವ ಕೃಷ್ಣೆ ಕಾಪಾಡಿ; ತ್ಯಾಜ್ಯ ವಸ್ತು ಎಸೆಯಬೇಡಿ

Vijayapur: ಮಲೀನವಾಗುತ್ತಿರುವ ಕೃಷ್ಣೆ ಕಾಪಾಡಿ; ತ್ಯಾಜ್ಯ ವಸ್ತು ಎಸೆಯಬೇಡಿ

ಜಗದೀಶ್ ಶೆಟ್ಟರ್ ಅವರ ಆಗಮನ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ತಂದಿದೆ: ಡಿ.ಕೆ.ಶಿವಕುಮಾರ್

ಜಗದೀಶ್ ಶೆಟ್ಟರ್ ಅವರ ಆಗಮನ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ತಂದಿದೆ: ಡಿ.ಕೆ.ಶಿವಕುಮಾರ್

jagadish shettar

ನನಗೂ ಸವದಿಗೂ ಸಚಿವ ಸ್ಥಾನ ಸಿಗಬೇಕಿತ್ತು, ಆದರೆ ಸಿಕ್ಕಿಲ್ಲ..: Jagadish Shettar

Santosh Lad

Santosh Lad: ಮರಾಠ ದೊರೆ ‘ಕೈ’ಗೆ ಏಳು ಸುತ್ತಿನ ಕೋಟೆ

Dharwad: ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರ ಬರ್ಬರ ಹತ್ಯೆ

Dharwad: ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರ ಬರ್ಬರ ಹತ್ಯೆ

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ