ಅವಕಾಶ ತೆರೆಯಲಿದೆ ಲಂಕಾ ಪ್ರವಾಸ: ನಾಯಕ ಶಿಖರ್‌ ಧವನ್‌ ಅಭಿಪ್ರಾಯ

Team Udayavani, Jun 28, 2021, 7:43 AM IST

ಅವಕಾಶ ತೆರೆಯಲಿದೆ ಲಂಕಾ ಪ್ರವಾಸ: ನಾಯಕ ಶಿಖರ್‌ ಧವನ್‌ ಅಭಿಪ್ರಾಯ

ಮುಂಬಯಿ : ಶ್ರೀಲಂಕಾ ಪ್ರವಾಸ ನಮ್ಮೆಲ್ಲರ ಪಾಲಿಗೆ ಅತ್ಯುತ್ತಮ ಅವಕಾಶವೊಂದನ್ನು ತೆರೆದಿಡಲಿದೆ ಎಂಬುದಾಗಿ ನಾಯಕ ಶಿಖರ್‌ ಧವನ್‌ ಅಭಿಪ್ರಾಯಪಟ್ಟಿದ್ದಾರೆ.

“ಇದೊಂದು ಅತ್ಯುತ್ತಮ ತಂಡ. ಸಕಾರಾತ್ಮಕ ಮನೋಭಾವ, ಆತ್ಮವಿಶ್ವಾಸವೆಲ್ಲ ಈ ತಂಡದಲ್ಲಿ ತುಂಬಿಕೊಂಡಿದೆ. ಇದು ಉತ್ತಮ ಪ್ರದರ್ಶನಕ್ಕೆ ಕಾರಣವಾಗಲಿದೆ ಎಂಬ ವಿಶ್ವಾಸ ನಮ್ಮದು’ ಎಂಬುದಾಗಿ ಧವನ್‌ ಅಭಿಪ್ರಾಯಪಟ್ಟರು. ತಂಡ ಶ್ರೀಲಂಕಾಕ್ಕೆ ತೆರಳುವ ಮುನ್ನ ನಡೆದ ವರ್ಚುವಲ್‌ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತಾಡುತ್ತಿದ್ದರು.
“ಇದೊಂದು ಹೊಸ ಸವಾಲು. ನಮ್ಮೆಲ್ಲರ ಪಾಲಿಗೆ ಲಭಿಸಿದ ಅತ್ಯುತ್ತಮ ಅವಕಾಶ. ಎಲ್ಲರೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಕಾಯುತ್ತಿದ್ದಾರೆ. ಕಳೆದ 13-14 ದಿನಗಳನ್ನು ಕ್ವಾರಂಟೈನ್‌ನಲ್ಲೇ ಕಳೆದೆವು. ಎಲ್ಲರೂ ಅಂಗಳಕ್ಕಿಳಿದು ಅಭ್ಯಾಸ ನಡೆಸಲು ಕಾತರರಾಗಿದ್ದಾರೆ. ಸಿದ್ಧತೆಗೆ 10-12 ದಿನಗಳಿವೆ’ ಎಂದು ಧವನ್‌ ಹೇಳಿದರು.

ಕಲಿಕೆಯ ಅನುಭವ: ದ್ರಾವಿಡ್‌
“ಇದೊಂದು ಕಿರು ಪ್ರವಾಸ. 3 ಪ್ಲಸ್‌ 3 ಪಂದ್ಯಗಳಿವೆ. ಅವಕಾಶಕ್ಕಾಗಿ ಬಹಳಷ್ಟು ಮಂದಿ ಯುವ ಆಟಗಾರರು ಕಾದು ಕುಳಿತಿದ್ದಾರೆ. ಆದರೆ ಇವರೆಲ್ಲರಿಗೂ ಆಡುವ ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ಬಹುಶಃ ಅವಾಸ್ತವಿಕವೆನಿಸಲಿದೆ. ಅಕಸ್ಮಾತ್‌ ಆಡುವ ಚಾನ್ಸ್‌ ಸಿಗದೇ ಹೋದರೂ ಈ ಸರಣಿಯಿಂದ ಕಲಿಕೆಯ ಸಾಕಷ್ಟು ಅನುಭವವಂತೂ ಸಿಗಲಿದೆ’ ಎಂಬುದು ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಹೇಳಿಕೆ. ಆಯ್ಕೆಗಾರರೂ ಜತೆಯಲ್ಲಿರುವುದರಿಂದ ಆಡುವ ಬಳಗದ ಆಯ್ಕೆ ಸುಗಮಗೊಳ್ಳಲಿದೆ ಎಂದು ಅವರು ಆಶಿಸಿದರು.

ಇದನ್ನೂ ಓದಿ :ಪ್ಯಾರಿಸ್‌ ಆರ್ಚರಿ ವರ್ಲ್ಡ್ ಕಪ್‌ : ಮಿನುಗಿದ ದೀಪಿಕಾ; ಭಾರತಕ್ಕೆ ಹ್ಯಾಟ್ರಿಕ್‌ ಬಂಗಾರ

ಟಿ20 ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ಭಾರತಕ್ಕೆ ಲಭಿಸಲಿರುವ ಕೊನೆಯ ಅವಕಾಶ ಇದಾಗಿದೆ. ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌ ಟಿ20 ತಂಡದ ರೇಸ್‌ನಲ್ಲಿರುವ ಪ್ರಮುಖರು.

“ತಂಡದಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿಯನ್ನು ಎದುರು ನೋಡುತ್ತಿರುವ ಸಾಕಷ್ಟು ಮಂದಿ ಆಟಗಾರರಿದ್ದಾರೆ. ಆದರೆ ಖಾಲಿ ಉಳಿದಿರುವುದು ಒಂದೆರಡು ಸ್ಥಾನ ಮಾತ್ರ. ಹೀಗಾಗಿ ಸರಣಿ ಗೆಲುವೇ ಮೊದಲ ಹಾಗೂ ಎಲ್ಲರ ಗುರಿ’ ಎಂಬುದಾಗಿ ದ್ರಾವಿಡ್‌ ಹೇಳಿದರು.

ಪ್ರತಿಭಾನ್ವಿತ ಆಟಗಾರರಾದ ಪಡಿಕ್ಕಲ್‌, ಸೂರ್ಯಕುಮಾರ್‌ ಯಾದವ್‌ ಅವರಿಗೆ, ಹಾಗೆಯೇ ಪುನರಾಗಮನದ ನಿರೀಕ್ಷೆಯಲ್ಲಿರುವ ಪೃಥ್ವಿ ಶಾ ಮೊದಲಾದವರಿಗೆ ಇದು ಅತ್ಯಂತ ಮಹತ್ವದ ಸರಣಿ ಎಂಬುದು ದ್ರಾವಿಡ್‌ ಅಭಿಪ್ರಾಯ.

ಟಾಪ್ ನ್ಯೂಸ್

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ; ಜೂನ್‌ನಿಂದಲೇ ಸ್ಪೋಕನ್‌ ಇಂಗ್ಲಿಷ್‌ ತರಬೇತಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ; ಜೂನ್‌ನಿಂದಲೇ ಸ್ಪೋಕನ್‌ ಇಂಗ್ಲಿಷ್‌ ತರಬೇತಿ

ಜೋತಿಷ ಶಾಸ್ತ್ರದಲ್ಲಿ ಶೀಘ್ರ ಫ‌ಲಾಫ‌ಲ ನಿರ್ದೇಶಿಸುವ ತಾಂಬೂಲ ಪ್ರಶ್ನೆ

ಜೋತಿಷ ಶಾಸ್ತ್ರದಲ್ಲಿ ಶೀಘ್ರ ಫ‌ಲಾಫ‌ಲ ನಿರ್ದೇಶಿಸುವ ತಾಂಬೂಲ ಪ್ರಶ್ನೆ

ಪಠ್ಯ ಪುಸ್ತಕದ ಮೇಲೆ ಎಡ-ಬಲ ಸಿದ್ಧಾಂತ ಸಂಘರ್ಷ

ಪಠ್ಯ ಪುಸ್ತಕದ ಮೇಲೆ ಎಡ-ಬಲ ಸಿದ್ಧಾಂತ ಸಂಘರ್ಷ

ದಾವೋಸ್‌ ಒಪ್ಪಂದಗಳು ಕಾಗದದ ಮೇಲಷ್ಟೇ ಉಳಿಯುವುದು ಬೇಡ

ದಾವೋಸ್‌ ಒಪ್ಪಂದಗಳು ಕಾಗದದ ಮೇಲಷ್ಟೇ ಉಳಿಯುವುದು ಬೇಡ

ಕಂಬಳ ಕರಡು ಬೈಲಾ, ಮಾರ್ಗಸೂಚಿ: ಸಚಿವ ಸುನಿಲ್‌ಗೆ ಭಂಡಾರಿ ಮನವಿ

ಕಂಬಳ ಕರಡು ಬೈಲಾ, ಮಾರ್ಗಸೂಚಿ: ಸಚಿವ ಸುನಿಲ್‌ಗೆ ಭಂಡಾರಿ ಮನವಿ

ಸಮುದ್ರ ಮಾಲಿನ್ಯ ತನಿಖೆಗೆ ಸಮಿತಿ ನೇಮಿಸಿದ ಎನ್‌ಜಿಟಿ

ಸಮುದ್ರ ಮಾಲಿನ್ಯ ತನಿಖೆಗೆ ಸಮಿತಿ ನೇಮಿಸಿದ ಎನ್‌ಜಿಟಿ

ಶಸ್ತ್ರಾಸ್ತ್ರ ಕಾಯ್ದೆ ಮತ್ತೆ ಚರ್ಚೆಗೆ

ಪ್ರಸಕ್ತ ವರ್ಷ ಅಮೆರಿಕದಲ್ಲಿ 10 ಶೂಟೌಟ್‌! ಶಸ್ತ್ರಾಸ್ತ್ರ ಕಾಯ್ದೆ ಮತ್ತೆ ಚರ್ಚೆಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈಡನ್‌ನಲ್ಲಿ ಆರ್‌ಸಿಬಿ ರಜತ ವೈಭವ; ಹೊರಬಿದ್ದ ಲಕ್ನೋ

ಈಡನ್‌ನಲ್ಲಿ ಆರ್‌ಸಿಬಿ ರಜತ ವೈಭವ; ಹೊರಬಿದ್ದ ಲಕ್ನೋ ಸೂಪರ್‌ ಜೈಂಟ್ಸ್‌

ಢಾಕಾ ಟೆಸ್ಟ್‌: ಶ್ರೀಲಂಕಾ ಬ್ಯಾಟಿಂಗ್‌ ಹೋರಾಟ

ಢಾಕಾ ಟೆಸ್ಟ್‌: ಶ್ರೀಲಂಕಾ ಬ್ಯಾಟಿಂಗ್‌ ಹೋರಾಟ

ಮೆಲ್ಟ್ ವಾಟರ್‌ ಚಾಂಪಿಯನ್ಸ್‌ ಚೆಸ್‌: ಪ್ರಶಸ್ತಿ ಸುತ್ತಿಗೆ ಪ್ರಗ್ನಾನಂದ

ಮೆಲ್ಟ್ ವಾಟರ್‌ ಚಾಂಪಿಯನ್ಸ್‌ ಚೆಸ್‌: ಪ್ರಶಸ್ತಿ ಸುತ್ತಿಗೆ ಪ್ರಗ್ನಾನಂದ

ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌: ಟಾಪ್‌-10 ಸ್ಥಾನದಲ್ಲಿ ಭಾರತೀಯರು

ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌: ಟಾಪ್‌-10 ಸ್ಥಾನದಲ್ಲಿ ಭಾರತೀಯರು

ಫಿನ್ಲಂಡ್‌ನ‌ಲ್ಲಿ ನೀರಜ್‌ ಚೋಪ್ರಾ ತರಬೇತಿ

ಫಿನ್ಲಂಡ್‌ನ‌ಲ್ಲಿ ನೀರಜ್‌ ಚೋಪ್ರಾ ತರಬೇತಿ

MUST WATCH

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

udayavani youtube

Wheel Chair Romeo actor exclusive interview | RELEASING ON MAY 27TH

udayavani youtube

ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

udayavani youtube

ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?

ಹೊಸ ಸೇರ್ಪಡೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ; ಜೂನ್‌ನಿಂದಲೇ ಸ್ಪೋಕನ್‌ ಇಂಗ್ಲಿಷ್‌ ತರಬೇತಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ; ಜೂನ್‌ನಿಂದಲೇ ಸ್ಪೋಕನ್‌ ಇಂಗ್ಲಿಷ್‌ ತರಬೇತಿ

ಜೋತಿಷ ಶಾಸ್ತ್ರದಲ್ಲಿ ಶೀಘ್ರ ಫ‌ಲಾಫ‌ಲ ನಿರ್ದೇಶಿಸುವ ತಾಂಬೂಲ ಪ್ರಶ್ನೆ

ಜೋತಿಷ ಶಾಸ್ತ್ರದಲ್ಲಿ ಶೀಘ್ರ ಫ‌ಲಾಫ‌ಲ ನಿರ್ದೇಶಿಸುವ ತಾಂಬೂಲ ಪ್ರಶ್ನೆ

ಪಠ್ಯ ಪುಸ್ತಕದ ಮೇಲೆ ಎಡ-ಬಲ ಸಿದ್ಧಾಂತ ಸಂಘರ್ಷ

ಪಠ್ಯ ಪುಸ್ತಕದ ಮೇಲೆ ಎಡ-ಬಲ ಸಿದ್ಧಾಂತ ಸಂಘರ್ಷ

ದಾವೋಸ್‌ ಒಪ್ಪಂದಗಳು ಕಾಗದದ ಮೇಲಷ್ಟೇ ಉಳಿಯುವುದು ಬೇಡ

ದಾವೋಸ್‌ ಒಪ್ಪಂದಗಳು ಕಾಗದದ ಮೇಲಷ್ಟೇ ಉಳಿಯುವುದು ಬೇಡ

ಕಂಬಳ ಕರಡು ಬೈಲಾ, ಮಾರ್ಗಸೂಚಿ: ಸಚಿವ ಸುನಿಲ್‌ಗೆ ಭಂಡಾರಿ ಮನವಿ

ಕಂಬಳ ಕರಡು ಬೈಲಾ, ಮಾರ್ಗಸೂಚಿ: ಸಚಿವ ಸುನಿಲ್‌ಗೆ ಭಂಡಾರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.