Pakistan: ಪಾಕ್ನ 2 ಮಸೀದಿಗಳಲ್ಲಿ ಆತ್ಮಾಹುತಿ ದಾಳಿ: 56 ಸಾವು
Team Udayavani, Sep 29, 2023, 11:31 PM IST
ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಹಾಗೂ ಖೈಬರ್ ಪಖುಂಖ್ವಾ ಪ್ರಾಂತ್ಯದ 2 ಮಸೀದಿಗಳಲ್ಲಿ ಶುಕ್ರವಾರ ನಡೆದ ಆತ್ಮಾಹುತಿ ದಾಳಿಯಲ್ಲಿ 56 ಮಂದಿ ಬಲಿಯಾಗಿದ್ದಾರೆ.
ಈದ್ ಮಿಲಾದ್ ಹಬ್ಬದ ಆಚರಣೆಗೆ ಸಜ್ಜುಗೊಂಡಿದ್ದ ಬಲೂಚಿಸ್ತಾನ ಪ್ರಾಂತ್ಯದ ಮಸ್ತುಂಗ್ ನಗರದ ಮದೀನಾ ಮಸೀದಿಯಲ್ಲಿ ಮೊದಲಿಗೆ ಆತ್ಮಾಹುತಿ ದಾಳಿ ನಡೆದಿದೆ. ಮಸೀದಿಗೆ ತೆರಳಿದ್ದ ಡಿಎಸ್ಪಿ ನವಾಜ್ ಗಿಶ್ಕೋರಿ ಅವರ ಕಾರಿನ ಬಳಿಯಲ್ಲೇ ಸ್ಫೋಟ ಸಂಭವಿಸಿದ್ದು, ಮೃತರ ಪೈಕಿ ನವಾಜ್ ಕೂಡ ಸೇರಿದ್ದಾರೆ. ಸ್ಫೋಟದ ತೀವ್ರತೆಗೆ 50 ಮಂದಿ ಗಾಯಗೊಂಡು, 52 ಮಂದಿ ಮೃತರಾಗಿದ್ದಾರೆ.
ಇದಾದ ಬೆನ್ನಲ್ಲೇ ಜುಮಾ ಪ್ರಾರ್ಥನೆಗಾಗಿ ಜನರು ಸೇರಿದ್ದ ಖೈಬರ್ಪಖುಂಖ್ವಾದಲ್ಲಿನ ಮಸೀದಿಯ ಒಳಗೆ ಆತ್ಮಾಹುತಿ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, ಘಟನೆಯಲ್ಲಿ 4 ಮಂದಿ ಮೃತಪಟ್ಟು 12 ಮಂದಿ ಗಾಯಗೊಂಡಿದ್ದಾರೆ. ದಾಳಿ ನಡೆಸಿದವರ ಪೈಕಿ ಒಬ್ಬ ಉಗ್ರನನ್ನು ಪೊಲೀಸರು ಗುರುತಿಸಿ ಹೊಡೆದುರುಳಿಸಿದ್ದಾರೆ. ಇನ್ನೊಬ್ಬ ಪೊಲೀಸರ ಕೈನಿಂದ ತಪ್ಪಿಸಿಕೊಂಡು ಮಸೀದಿಗೆ ತೆರಳಿ ಸ್ಫೋಟ ನಡೆಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ