
Tata Nexon EV: ಫೇಸ್‌ಲಿಫ್ಟ್ – ಒಮ್ಮೆ ಚಾರ್ಚ್ ಮಾಡಿದರೆ 455 ಕಿ.ಮೀ. ಸಂಚಾರ
ಕಾರಿನ ಬೆಲೆ 14.74 ಲಕ್ಷ ರೂ.ಗಳಿಂದ ಆರಂಭ
Team Udayavani, Sep 15, 2023, 9:13 PM IST

ಟಾಟಾ ಮೋಟಾರ್ ಕಂಪನಿಯು ತನ್ನ ಟಾಟಾ ನೆಕ್ಸಾನ್ ಇವಿ ಫೇಸ್‌ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಿದೆ. ಕಾರಿನ ಬೆಲೆ 14.74 ಲಕ್ಷ ರೂ.ಗಳಿಂದ 19.94 ಲಕ್ಷ ರೂ.ಗಳವರೆಗೆ(ಎಕ್ಸ್‌ಶೋರೂಮ್) ಇದೆ. ಕ್ರಿಯೇಟಿವ್, ಫಿಯರ್‌ಲೆಸ್ ಮತ್ತು ಎಂಪವರ್ ಎಂಬ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದೆ.
ಮಿಡ್ ರೇಂಜ್ ವಾಹನವು 30 ಕೆಡಬ್ಲೂಎಚ್ ಬ್ಯಾಟರಿ ಹೊಂದಿದ್ದು, ಒಮ್ಮೆ ಚಾರ್ಚ್ ಮಾಡಿದರೆ 325 ಕಿ.ಮೀ. ಚಲಿಸಲಿದೆ. ಲಾಂಗ್ ರೇಂಜ್ ವಾಹನವು 40.5 ಕೆಡಬ್ಲೂಎಚ್ ಬ್ಯಾಟರಿ ಹೊಂದಿದ್ದು, ಒಮ್ಮೆ ಚಾರ್ಚ್ ಮಾಡಿದರೆ 455 ಕಿ.ಮೀ. ಚಲಿಸಲಿದೆ. ಆರು ಏರ್‌ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಿಕ್ ಸನ್‌ರೂಫ್ ಸೇರಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.
ಟಾಪ್ ನ್ಯೂಸ್
