ಪಬ್‌ಜಿ ಸೈಡ್ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ
Team Udayavani, Jan 28, 2022, 9:45 PM IST
ಇಸ್ಲಾಮಾಬಾದ್: ಪಬ್‌ಜಿ ಆಡುವುದನ್ನು ಬಿಟ್ಟು ಓದು ಎಂದು ಬೈದಿದ್ದಕ್ಕೆ, 14 ವರ್ಷದ ಬಾಲಕ ತಾಯಿ ಜೊತೆ ಮೂವರು ಒಡಹುಟ್ಟಿವದರನ್ನೇ ಕೊಂದಿರುವ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ.
ನಹೀದ್ ಮುಬಾರಕ್(45), ಆಕೆಯ ಮಗ ತೈಮುರ್ ಮತ್ತು 17, 11 ವರ್ಷದ ಇಬ್ಬರು ಹೆಣ್ಣು ಮಕ್ಕಳು ಮೃತರು. ನಹೀದ್‌ರ 14 ವರ್ಷದ ಮಗ ಪಬ್‌ಜಿ ಆಟವನ್ನು ಚಟವಾಗಿ ಮಾಡಿಕೊಂಡಿದ್ದನಂತೆ. ಈ ವಿಚಾರವಾಗಿ ಇತ್ತೀಚೆಗೆ ನಹೀದ್, ಮಗನಿಗೆ ಬೈದಿದ್ದಾಳೆ. ಅದೇ ಸಿಟ್ಟಿಟ್ಟುಕೊಂಡಿದ್ದ ಆತ, ರಾತ್ರಿ ವೇಳೆ ಅಮ್ಮ, ಅಣ್ಣ, ಅಕ್ಕ ಮತ್ತು ತಂಗಿಗೆ ಮನೆಯಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ.
ಇದನ್ನೂ ಓದಿ:ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ
ಮಾರನೇ ದಿನ ಬೆಳಗ್ಗೆ ಈ ವಿಚಾರ ಪೊಲೀಸರಿಗೆ ತಲುಪಿದ್ದು, ಬಾಲಕ ತಪ್ಪೊಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬುದ್ಧನ ಜನ್ಮ ಸ್ಥಳದಲ್ಲಿ ಪ್ರಧಾನಿ ಮೋದಿ: ನೇಪಾಳದೊಂದಿದೆ ರಾಜತಾಂತ್ರಿಕ ಮಾತುಕತೆ
ಇಂದು ಪ್ರಧಾನಿ ಮೋದಿ ನೇಪಾಲಕ್ಕೆ; ಬುದ್ಧನ ಜನ್ಮಸ್ಥಳದಲ್ಲೇ ಬುದ್ಧ ಪೂರ್ಣಿಮೆ ಆಚರಣೆ
ಯುಎಇ ತೆರಳಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ನ್ಯೂಯಾರ್ಕ್ ಸೂಪರ್ ಮಾರ್ಕೆಟ್ ನಲ್ಲಿ ಗುಂಡಿನ ದಾಳಿ:ಕನಿಷ್ಠ 10 ಮಂದಿ ಬಲಿ
ಉತ್ತರ ಕೊರಿಯಾದಲ್ಲಿ ಮಿತಿಮೀರಿದ ಕೋವಿಡ್; ಮೂರು ದಿನದಲ್ಲಿ 820,620 ಪ್ರಕರಣಗಳು ಪತ್ತೆ!