ನ್ಯೂ ಬ್ಯಾಲೆನ್ಸ್ ಒಳಾಂಗಣ ಗ್ರ್ಯಾನ್ ಪ್ರಿ: ಚಿನ್ನ ಗೆದ್ದ ತೇಜಸ್ವಿನ್ ಶಂಕರ್
Team Udayavani, Feb 6, 2023, 11:55 PM IST
ಹೊಸದಿಲ್ಲಿ: ಬಹಮಾಸ್‌ನ ಡೋನಲ್ಡ್ ಥಾಮಸ್ ಅವರು ತೀವ್ರ ಸ್ಪರ್ಧೆ ನೀಡಿದ್ದರೂ ಭಾರತದ ಹೈಜಂಪರ್ ತೇಜಸ್ವಿನ್ ಶಂಕರ್ ಅವರು ಬೋಸ್ಟನ್‌ನಲ್ಲಿ ನಡೆದ ನ್ಯೂ ಬ್ಯಾಲೆನ್ಸ್ ಒಳಾಂಗಣ ಗ್ರ್ಯಾನ್ ಪ್ರಿ ಕೂಟದ ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲಲು ಯಶಸ್ವಿಯಾಗಿದ್ದಾರೆ.
24ರ ಹರೆಯದ ದಿಲ್ಲಿ ಮೂಲದ ಆ್ಯತ್ಲೀಟ್ ತೇಜಸ್ವಿನ್ 2.26 ಮೀ. ಹಾರುವ ಮೂಲಕ ಚಿನ್ನ ಗೆದ್ದರು. 2007ರ ವಿಶ್ವ ಚಾಂಪಿಯನ್‌ಶಿಪ್ ಮತ್ತು 2010ರ ಕಾಮನ್ವೆಲ್ತ್ ಗೇಮ್ಸ್ ಚಿನ್ನ ವಿಜೇತ 38ರ ಹರೆಯದ ಥಾಮಸ್ 2.23 ಮೀ. ಹಾರಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. 2.19 ಮೀ. ಹಾರಿ ತನ್ನ ಶ್ರೇಷ್ಠ ನಿರ್ವಹಣೆ ನೀಡಿದ ಅಮೆರಿಕದ ಡ್ಯಾರಿಲ್ ಸಲ್ಲಿ ವಾನ್ ಕಂಜಚಿನ ಪದಕ ಪಡೆದರು.
ಕಣದಲ್ಲಿ ನಾಲ್ವರು ಸ್ಪರ್ಧಿಗಳಿದ್ದರು.ಪ್ರೇಕ್ಷಕರ ಬೆಂಬಲ ಮತ್ತು ಪ್ರೋತ್ಸಾ ಹದಿಂದ ಬಹಳಷ್ಟು ಉತ್ಸಾಹ ದಿಂದ ಸ್ಪರ್ಧಿಸಿದ ತೇಜಸ್ವಿನ್ ತನ್ನ ಮೊದಲ ನಾಲ್ಕು ಪ್ರಯತ್ನಗಳಲ್ಲಿ 2.14, 2.19, 2.23 ಮತ್ತು 2.26 ಮೀ. ಹಾರಿದ ಸಾಧನೆ ಮಾಡಿದರು. ಕಾಲೇಜ್ ವ್ಯಾಸಂಗ ಮುಗಿದ ಬಳಿಕ ಇದು ಅವರು ಸ್ಪರ್ಧಿಸಿದ ಮೊದಲ ಕೂಟವಾಗಿದೆ.
ಹೊರಾಂಗಣದಲ್ಲಿ 2.29 ಮೀ. ಹಾರಿರುವುದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಇದು ರಾಷ್ಟ್ರೀಯ ದಾಖಲೆಯೂ ಆಗಿದೆ. ಒಳಾಂಗಣದಲ್ಲಿ 2.28 ಮೀ. ಸಾಧನೆ ಅವರ ಶ್ರೇಷ್ಠ ನಿರ್ವಹಣೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ
ಭಾರತೀಯನೊಬ್ಬ ಪಾಕಿಸ್ಥಾನ ತಂಡಕ್ಕೆ ಬೆದರಿಕೆ ಹಾಕಿದ್ದ, ಆದರೆ…; ಬಾಂಬ್ ಸಿಡಿಸಿದ ಅಫ್ರಿದಿ
ವನಿತಾ ಪ್ರೀಮಿಯರ್ ಲೀಗ್ :ಡೆಲ್ಲಿ ಕ್ಯಾಪಿಟಲ್ಸ್ ಫೈನಲಿಗೆ
ಏಕದಿನ ಸರಣಿ ಗೆದ್ದರಷ್ಟೇ ಭಾರತ ನಂ. 1
ಪ್ಲೇ ಆಫ್ ಪ್ರವೇಶಿಸಿದ ಯುಪಿ ; ಗ್ರೇಸ್ ಹ್ಯಾರಿಸ್, ಮೆಕ್‌ಗ್ರಾತ್ ಗ್ರೇಟ್ ಬ್ಯಾಟಿಂಗ್