World Cup: ಕಾಂಗರೂ ನಾಡಿನಲ್ಲಿ ಸಾಗಿತು ಕಲರ್‌ಫುಲ್‌ ವಿಶ್ವಕಪ್‌


Team Udayavani, Sep 26, 2023, 11:22 PM IST

1992

1992ರ ವಿಶ್ವಕಪ್‌ ಮೇಲೆ ಕೆರ್ರಿ ಪ್ಯಾಕರ್‌ ಪ್ರಭಾವ ಬೀರಿದ್ದು ಸ್ಪಷ್ಟವಾಗಿತ್ತು. ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ಜಂಟಿಯಾಗಿ ಆಯೋಜಿಸಿದ ಈ ಕೂಟದಲ್ಲಿ ಆಟಗಾರರು ಮೊದಲ ಬಾರಿಗೆ ಬಿಳಿ ಸಮವಸ್ತ್ರವನ್ನು ಕಳಚಿಟ್ಟು ಬಣ್ಣದ ಜೆರ್ಸಿ ತೊಟ್ಟಿದ್ದರು. ಡೇ-ನೈಟ್‌ ಪಂದ್ಯಗಳು ಹೊಸ ಅನುಭವವನ್ನು ಮೂಡಿಸಿದವು.

ಈ ವಿಶ್ವಕಪ್‌ ತಂಡಗಳ ಸಂಖ್ಯೆ 9ಕ್ಕೆ ಏರಿತ್ತು. ಅಂದರೆ ಹಿಂದಿನ 3 ಪಂದ್ಯಾವಳಿಗಿಂತ ಒಂದು ತಂಡ ಹೆಚ್ಚು. ಕ್ರಿಕೆಟ್‌ ಬಹಿಷ್ಕಾರದಿಂದ ಮುಕ್ತಗೊಂಡ ದಕ್ಷಿಣ ಆಫ್ರಿಕಾ ಮೊದಲ ಸಲ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಆಡಲಿಳಿಯಿತು. ಮತ್ತೆ ನೆದರ್ಲೆಂಡ್ಸ್‌ಗೆ ಸೋಲುಣಿಸಿ 1990ರ ಐಸಿಸಿ ಟ್ರೋಫಿ ಗೆದ್ದ ಜಿಂಬಾಬ್ವೆ 9ನೇ ತಂಡವಾಗಿತ್ತು. ಈ ಕೂಟದ ಪ್ರಾಯೋಜಕತ್ವ ವಹಿಸಿದ್ದು ಬೆನ್ಸನ್‌ ಆ್ಯಂಡ್‌ ಹೆಜಸ್‌ ಕಂಪೆನಿ.

ರೌಂಡ್‌ ರಾಬಿನ್‌ ಲೀಗ್‌
ಪಂದ್ಯಾವಳಿಯ ಮಾದರಿಯಲ್ಲೂ ದೊಡ್ಡ ಬದಲಾವಣೆ ಆಗಿತ್ತು. ಹಿಂದಿನ 3 ಕೂಟಗಳು ಲೀಗ್‌ ಮಾದರಿಯಲ್ಲಿ ನಡೆದರೆ, ಇಲ್ಲಿ ಮೊದಲ ಸಲ ರೌಂಡ್‌ ರಾಬಿನ್‌ ಲೀಗ್‌ ಮಾದರಿಯನ್ನು ಅಳವಡಿಸಲಾಯಿತು. ಅಂದರೆ, ತಂಡವೊಂದು ಉಳಿದೆಲ್ಲ ತಂಡಗಳ ವಿರುದ್ಧ ಆಡುವ ವಿಧಾನವಿದು. ಅಗ್ರ 4 ಸ್ಥಾನ ಪಡೆದ ತಂಡಗಳಿಗೆ ಸೆಮಿಫೈನಲ್‌ ಅವಕಾಶ.

ಇಲ್ಲಿಯೂ ಅಷ್ಟೇ, ಕಳೆದ ಸಲದಂತೆ ಆತಿಥೇಯ ತಂಡಗಳಿಗೆ ಅದೃಷ್ಟ ಕೈಕೊಟ್ಟಿತು. ಆಸೀಸ್‌ ಲೀಗ್‌ ಗಡಿ ದಾಟಲಿಲ್ಲ, ಕಿವೀಸ್‌ ಫೈನಲ್‌ ತಲುಪಲಿಲ್ಲ. ಉಪಾಂತ್ಯ ತಲುಪಿದ ಉಳಿದ 3 ತಂಡಗಳೆಂದರೆ ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ಥಾನ.

ವಿಚಿತ್ರ ಮಳೆ ನಿಯಮ
ಹಾಂ… ವಿಚಿತ್ರ ಮಳೆ ನಿಯಮವೊಂದನ್ನು ಈ ವಿಶ್ವಕಪ್‌ ಮೂಲಕ ಅಳವಡಿಸಲಾಯಿತು. ಇದಕ್ಕೆ ಬಲಿಯಾದ ಮೊದಲ ತಂಡ ದಕ್ಷಿಣ ಆಫ್ರಿಕಾ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸುಸ್ಥಿತಿಯಲ್ಲಿದ್ದ ದಕ್ಷಿಣ ಆಫ್ರಿಕಾಕ್ಕೆ ಈ ಡಕ್‌ವರ್ತ್‌ -ಲೂಯಿಸ್‌ ನಿಯಮ ವಿಲನ್‌ ಆಗಿ ಪರಿಣಮಿಸಿತು. ಮಳೆ ನಿಂತು ಪಂದ್ಯ ಮೊದಲ್ಗೊಂಡಾಗ ಒಂದು ಎಸೆತಕ್ಕೆ 22 ರನ್‌ ಗಳಿಸಬೇಕಾದ ಸವಾಲು ದಕ್ಷಿಣ ಆಫ್ರಿಕಾಕ್ಕೆ ಎದುರಾಗಿತ್ತು. ಮೊದಲ ವಿಶ್ವಕಪ್‌ ಪ್ರವೇಶದಲ್ಲೇ ಅಮೋಘ ಪ್ರದರ್ಶನ ನೀಡಿ, ಇಂಗ್ಲೆಂಡನ್ನು ಸೋಲಿಸುವ ಹಂತಕ್ಕೆ ಬಂದಿದ್ದ ಹರಿಣಗಳ ಪಡೆ ಮಳೆ ನಿಯಮಕ್ಕೆ ಸಿಲುಕಿ ನಿರ್ಗಮಿಸುವಾಗ ಕ್ರಿಕೆಟ್‌ ಪ್ರೇಮಿಗಳ ಕಣ್ಣಾಲಿ ತೇವಗೊಂಡದ್ದು ಸುಳ್ಳಲ್ಲ.

ಪಾಕಿಸ್ಥಾನ ಚಾಂಪಿಯನ್‌
ಇನ್ನೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ಥಾನ ಆತಿಥೇಯ ನ್ಯೂಜಿಲ್ಯಾಂಡ್‌ಗೆ 4 ವಿಕೆಟ್‌ಗಳ ಸೋಲುಣಿಸಿತು. ಮೆಲ್ಬರ್ನ್ ಫೈನಲ್‌ನಲ್ಲೂ ಇಮ್ರಾನ್‌ ಖಾನ್‌ ಪಡೆಗೆ ಅದೃಷ್ಟ ಒಲಿಯಿತು. ಅದು ಇಂಗ್ಲೆಂಡನ್ನು 22 ರನ್ನುಗಳ ಕೆಡವಿ ಮೊದಲ ಸಲ ಕ್ರಿಕೆಟ್‌ ಸಾರ್ವಭೌಮನೆನಿಸಿತು.

ಇದೇ ಪಾಕ್‌ ಪಡೆ ಲೀಗ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 74 ರನ್ನಿಗೆ ಆಲೌಟ್‌ ಆಗಿ ಸೋಲಿನ ಭೀತಿಯಲ್ಲಿತ್ತು. ಆದರೆ ಇಂಗ್ಲೆಂಡ್‌ ಚೇಸಿಂಗ್‌ ವೇಳೆ ಅಡಿಲೇಡ್‌ನ‌ಲ್ಲಿ ಮಳೆ ಸುರಿಯಿತು. ಪಂದ್ಯ ರದ್ದುಗೊಂಡಿತು. ಅಂಕವನ್ನು ಹಂಚಲಾಯಿತು. ಈ ಅಂಕದ ಲಾಭದಿಂದ ಪಾಕ್‌ ನಾಕೌಟ್‌ ಪ್ರವೇಶ ಪಡೆಯಿತೆಂಬುದನ್ನು ಮರೆಯುವಂತಿಲ್ಲ.
ನ್ಯೂಜಿಲ್ಯಾಂಡ್‌ ಸ್ಪಿನ್ನರ್‌ ದೀಪಕ್‌ ಪಟೇಲ್‌ ಬೌಲಿಂಗ್‌ ಆರಂಭಿಸಿದ್ದು, ಆರಂಭಕಾರ ಮಾರ್ಕ್‌ ಗ್ರೇಟ್‌ಬ್ಯಾಚ್‌ ಮೊದಲ 15 ಓವರ್‌ಗಳ ಫೀಲ್ಡಿಂಗ್‌ ಲಾಭವೆತ್ತಿ ದೊಡ್ಡ ಹೊಡೆತಗಳಿಗೆ ಮುಂದಾದದ್ದು ಕೂಡ ಈ ಪಂದ್ಯಾವಳಿಯ ವಿಶೇಷವಾಗಿತ್ತು.

ಇನ್ನು ಭಾರತದ ಕತೆ. ಅಜರು ದ್ದೀನ್‌ ಬಳಗ ಪಾಕಿಸ್ಥಾನ ಮತ್ತು ಜಿಂಬಾಬ್ವೆಯನ್ನಷ್ಟೇ ಮಣಿಸಲು ಯಶಸ್ವಿಯಾಗಿತ್ತು. ವಿಶ್ವಕಪ್‌ನಲ್ಲಿ ಭಾರತ-ಪಾಕ್‌ ನಡುವಿನ ಮೊದಲ ಮುಖಾಮುಖೀ ಇದಾಗಿತ್ತು. ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಯಿಂದ ರದ್ದುಗೊಂಡಿತು.

ಟಾಪ್ ನ್ಯೂಸ್

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆಡಳಿತ ವ್ಯವಸ್ಥೆ,ರಾಜಕೀಯ ಪದ್ದತಿ ಅರ್ಥೈಸಿಕೊಳ್ಳಬೇಕು: ಲಾಡ್

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆಡಳಿತ ವ್ಯವಸ್ಥೆ,ರಾಜಕೀಯ ಪದ್ದತಿ ಅರ್ಥೈಸಿಕೊಳ್ಳಬೇಕು: ಲಾಡ್

ಜಾತಿ ಸಮೀಕ್ಷೆ ವರದಿ ಜಾರಿಗೆ ಮಠಾಧೀಶರು ಅಡ್ಡಿಪಡಿಸಬಾರದು: ಎಂ.ಸಿ. ವೇಣುಗೋಪಾಲ

Belagavi; ಜಾತಿ ಸಮೀಕ್ಷೆ ವರದಿ ಜಾರಿಗೆ ಮಠಾಧೀಶರು ಅಡ್ಡಿಪಡಿಸಬಾರದು: ಎಂ.ಸಿ. ವೇಣುಗೋಪಾಲ

VIDEO; 43 ಎಸೆತದಲ್ಲಿ 193 ರನ್ ಚಚ್ಚಿದ ಬ್ಯಾಟರ್; ಸ್ಟ್ರೈಕ್ ರೇಟ್ ಬರೋಬ್ಬರಿ 449!

VIDEO; 43 ಎಸೆತದಲ್ಲಿ 193 ರನ್ ಚಚ್ಚಿದ ಬ್ಯಾಟರ್; ಸ್ಟ್ರೈಕ್ ರೇಟ್ ಬರೋಬ್ಬರಿ 449!

Electric Car: ಬ್ಯಾಟರಿ ಚಾಲಿತ ಕಾರು ನಿರ್ಮಿಸಿದ ವಿದ್ಯಾರ್ಥಿಗಳು…

Electric Car: ಬ್ಯಾಟರಿ ಚಾಲಿತ ಕಾರು ನಿರ್ಮಿಸಿದ ವಿದ್ಯಾರ್ಥಿಗಳು…

TDY-11

Fighter Teaser ಔಟ್: ಇಂಟರ್‌ನೆಟ್‌ ನಲ್ಲಿ ಬೆಂಕಿ ಹಚ್ಚಿದ ಹೃತಿಕ್‌ – ದೀಪಿಕಾ ಕೆಮೆಸ್ಟ್ರಿ

Vijayapura; ಮಾನಸಿಕ ಹಿಂಸೆಯಿಂದ ವ್ಯಕ್ತಿ ಆತ್ಮಹತ್ಯೆ; ಮೂವರು ಆರೋಪಿಗಳಿಗೆ ಮೂರು ವರ್ಷ ಜೈಲು

Vijayapura; ಮಾನಸಿಕ ಹಿಂಸೆಯಿಂದ ವ್ಯಕ್ತಿ ಆತ್ಮಹತ್ಯೆ; ಮೂವರು ಆರೋಪಿಗಳಿಗೆ ಮೂರು ವರ್ಷ ಜೈಲು

4-panaji

Panaji: ಶಾಲಾ ಬಸ್ ಅಪಘಾತದ ಕುರಿತು ವಿಸ್ತೃತ ತನಿಖೆ ನಡೆಸಲು ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

VIDEO; 43 ಎಸೆತದಲ್ಲಿ 193 ರನ್ ಚಚ್ಚಿದ ಬ್ಯಾಟರ್; ಸ್ಟ್ರೈಕ್ ರೇಟ್ ಬರೋಬ್ಬರಿ 449!

VIDEO; 43 ಎಸೆತದಲ್ಲಿ 193 ರನ್ ಚಚ್ಚಿದ ಬ್ಯಾಟರ್; ಸ್ಟ್ರೈಕ್ ರೇಟ್ ಬರೋಬ್ಬರಿ 449!

gambhir sreesanth

Cricket; ಗಂಭೀರ್ ವಿರುದ್ಧ ಆರೋಪ ಮಾಡಿದ ಶ್ರೀಶಾಂತ್ ಗೆ ಲೀಗಲ್ ನೋಟಿಸ್ ನೀಡಿದ ಎಲ್‌ಎಲ್‌ಸಿ

1-sadasds

Retirement; ಮೌನ ಮುರಿದ ಸ್ಟೀವನ್‌ ಸ್ಮಿತ್‌

1-wewewqe

South Africa Tour; ಭಾರತೀಯ ತಂಡ ಡರ್ಬಾನ್‌ಗೆ ಆಗಮನ

1-weqwwqewq

West Indies ವಿರುದ್ಧ ನಡೆದ ದ್ವಿತೀಯ ಏಕದಿನ : ಇಂಗ್ಲೆಂಡಿಗೆ 6 ವಿಕೆಟ್‌ ಗೆಲುವು

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

tdy-12

Superstitious Belief: ಜಿಲ್ಲೆಯಲ್ಲಿ ಮುಂದುವರಿದ ಮೌಢ್ಯಾಚರಣೆ

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆಡಳಿತ ವ್ಯವಸ್ಥೆ,ರಾಜಕೀಯ ಪದ್ದತಿ ಅರ್ಥೈಸಿಕೊಳ್ಳಬೇಕು: ಲಾಡ್

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆಡಳಿತ ವ್ಯವಸ್ಥೆ,ರಾಜಕೀಯ ಪದ್ದತಿ ಅರ್ಥೈಸಿಕೊಳ್ಳಬೇಕು: ಲಾಡ್

6-panaji

Panaji: ನಮ್ಮ ಸಂಸ್ಕೃತಿ ಪರಂಪರೆಯನ್ನು ಸಾಹಿತ್ಯದ ಮೂಲಕ ಪುನರುಜ್ಜೀವನಗೊಳ್ಳಲು ಸಾಧ್ಯ

I Love You Kane Lyrical; Bheema song out

Kannada Cinema: ‘ಐ ಲವ್ ಯೂ ಕಣೇ.. ‘; ಭೀಮನ ಸೈಕ್ ಡ್ಯುಯೆಟ್ ಬಂತು

ಜಾತಿ ಸಮೀಕ್ಷೆ ವರದಿ ಜಾರಿಗೆ ಮಠಾಧೀಶರು ಅಡ್ಡಿಪಡಿಸಬಾರದು: ಎಂ.ಸಿ. ವೇಣುಗೋಪಾಲ

Belagavi; ಜಾತಿ ಸಮೀಕ್ಷೆ ವರದಿ ಜಾರಿಗೆ ಮಠಾಧೀಶರು ಅಡ್ಡಿಪಡಿಸಬಾರದು: ಎಂ.ಸಿ. ವೇಣುಗೋಪಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.