
THE ರ್‍ಯಾಂಕಿಂಗ್: IISC ದೇಶಕ್ಕೆ ಫಸ್ಟ್
ದೇಶದಿಂದ ಈ ಬಾರಿ 91 ವಿವಿಗಳು ಭಾಗಿ-ಕಳೆದ ವರ್ಷಕ್ಕಿಂತ 16 ಸಂಸ್ಥೆಗಳು ಹೆಚ್ಚು
Team Udayavani, Sep 27, 2023, 10:29 PM IST

ನವದೆಹಲಿ: ಟೈಮ್ಸ್ ಹೈಯರ್ ಎಜುಕೇಶನ್ (ಟಿಎಚ್‌ಇ) ನಿಯತಕಾಲಿಕ ಪ್ರಕಟಿಸುವ ವಿವಿಗಳ ಶ್ರೇಯಾಂಕದಲ್ಲಿ ಈ ಬಾರಿ ದೇಶದಿಂದ ದಾಖಲೆಯ 91 ವಿವಿಗಳು, ಶಿಕ್ಷಣ ಸಂಸ್ಥೆಗಳು ಪ್ರವೇಶ ಪಡೆದಿವೆ. ಭಾರತಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಪ್ ಸೈನ್ಸ್ (ಐಐಎಸ್‌ಸಿ) 251ರಿಂದ 300ನೇ ರ್‍ಯಾಂಕ್ ವ್ಯಾಪ್ತಿಯಲ್ಲಿದೆ. ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ 351ರಿಂದ 400ನೇ ರ್‍ಯಾಂಕ್‌ನಲ್ಲಿವೆ.
ಅಣ್ಣಾ ವಿವಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಮಹಾತ್ಮಾ ಗಾಂಧಿ ವಿವಿ, ಶೂಲಿನಿ ಯುನಿವರ್ಸಿಟಿ ಆಫ್ ಬಯೋಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ ಸೈನ್ಸಸ್ ವಿವಿಗಳು 501ರಿಂದ 600 ಶ್ರೇಯಾಂಕ ವ್ಯಾಪ್ತಿಯಲ್ಲಿವೆ. ದೇಶದ ಒಟ್ಟು 22 ವಿವಿಗಳು ಪ್ರಸಕ್ತ ಸಾಲಿನಲ್ಲಿ ಹೆಚ್ಚು ಶ್ರೇಯಾಂಕದ ವ್ಯಾಪ್ತಿಗೆ ಬಂದಿವೆ. ಕಳೆದ ವರ್ಷ ಒಟ್ಟು 75 ವಿವಿಗಳು ಟಿಎಚ್‌ಇಗೆ ಪ್ರವೇಶ ಪಡೆದಿದ್ದವು. ಗುವಾಹಟಿ ಮತ್ತು ಧನ್‌ಬಾದ್ ಐಐಟಿಗಳು 1001-1,200 ರ್‍ಯಾಂಕ್‌ನಿಂದ 601-800ನೇ ರ್‍ಯಾಂಕ್‌ಗೆ ಪದೋನ್ನತಿ ಪಡೆದಿವೆ.
ಇನ್ನು ಜಗತ್ತಿನ ಪಟ್ಟಿಯನ್ನು ನೋಡುವುದಿದ್ದರೆ ಆಕ್ಸ್‌ಫರ್ಡ್ ವಿವಿ ಮೊದಲ ಸ್ಥಾನದಲ್ಲಿದೆ. ಸತತ 7ನೇ ಬಾರಿಗೆ ಇಂಥ ಸಾಧನೆ ಆ ವಿವಿ ಮಾಡಿದೆ. ಕೇಂಬ್ರಿಡ್ಜ್ ವಿವಿ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿಕೆಯಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Forbes List: ನಿರ್ಮಲಾ ಸೀತಾರಾಮನ್ ಸೇರಿ ಭಾರತದ ನಾಲ್ವರು ಜಗತ್ತಿನ ಪ್ರಭಾವಶಾಲಿ ಮಹಿಳೆಯರು

POK ನಮ್ಮದು..ನೆಹರು ಕಾಲದಲ್ಲಿ ಮಾಡಿದ ದೊಡ್ಡ ತಪ್ಪಿನಿಂದ… ; ಸಂಸತ್ತಿನಲ್ಲಿ ಶಾ ಗುಡುಗು

Resign from Lok Sabha: ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಹತ್ತು ಮಂದಿ ಬಿಜೆಪಿ ಸಂಸದರು

Shocking: ಹೆಂಡತಿ, ಇಬ್ಬರು ಮಕ್ಕಳನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡ ವೈದ್ಯ

Rajasthan: ಕರ್ಣಿ ಸೇನಾ ಮುಖ್ಯಸ್ಥನ ಹಂತಕರನ್ನು ಎನ್ಕೌಂಟರ್ ಮಾಡಿ… ಕಾಂಗ್ರೆಸ್ ನಾಯಕ