ಜಗ್ಗೇಶ್‌ ಹೇಳಿದ ಮೇಕಪ್‌ ಹಿಂದಿನ ಸತ್ಯ

ಇಂದು ಬಿಲ್ಡಪ್‌ ಕೊಟ್ಟವನಿಗೆ ಮಣೆ...

Team Udayavani, Jun 5, 2020, 4:11 AM IST

jaggj-story

ನಟ ಜಗ್ಗೇಶ್‌ ಮೇಕಪ್‌ ಎಂಬ ಸಿನಿಮಾ ಮಾಡಿರೋದು ನಿಮಗೆ ಗೊತ್ತೇ ಇದೆ. ಆ ಸಿನಿಮಾದಲ್ಲಿ ನಟಿಸುವ ಜೊತೆಗೆ ನಿರ್ಮಾಣದ ಜವಾಬ್ದಾರಿ ಕೂಡಾ ವಹಿಸಿ ಕೊಂಡಿ ದ್ದರು ಜಗ್ಗೇಶ್‌. ಆದರೆ, ಆ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಲಿಲ್ಲ. ಆ ಚಿತ್ರವನ್ನು ಜಗ್ಗೇಶ್‌ ಆ ಕಾಲಕ್ಕೆ ಅದ್ಧೂರಿ  ಯಾಗಿಯೇ ನಿರ್ಮಿಸಿದ್ದರು. ಆದರೆ ಚಿತ್ರ ಹಿಟ್‌ ಆಗದ ಪರಿಣಾಮ ಅವತಿಗೆ 75ಲಕ್ಷ ರೂ.ನಷ್ಟವಾಯಿ ತಂತೆ. ಆ ನಷ್ಟ ಭರಿಸಲು ಜಗ್ಗೇಶ್‌ ತಮ್ಮ ಮನೆಯನ್ನು ಮಾರಿದರಂತೆ. ಆ ಮನೆ ಈಗ 35  ಕೋಟಿ ರೂ. ಬೆಲೆ ಬಾಳುತ್ತಂತೆ.

ಆ ಮನೆಯನ್ನುಕೊಂಡ ಅವರ ಸ್ನೇಹಿತನಿಗೆ ಈಗ 16 ಲಕ್ಷ ಬಾಡಿಗೆ ಬರುತ್ತಿದೆಯಂತೆ. ತಮ್ಮ ಪ್ರತಿಭೆಯನ್ನು ಹೊರ ರಾಜ್ಯಗಳಿಗೂ ಪಸರಿಸ ಬೇಕೆಂಬ ಉದ್ದೇಶದಿಂದ ಜಗ್ಗೇಶ್‌ ಈ ಸಿನಿಮಾ ನಿರ್ಮಿಸಿದರಂತೆ.  ಈ ಚಿತ್ರದಲ್ಲಿ ಅವರ ದೊಡ್ಡಮ್ಮನ ಪಾತ್ರ ಸಖತ್‌ ಹಿಟ್‌ ಆಗಿತ್ತು. ಆದರೆ ಚಿತ್ರಮಂದಿರದಲ್ಲಿ ಮಾತ್ರ ಆ ಚಿತ್ರ ಓಡಲಿಲ್ಲ. ಜಗ್ಗೇಶ್‌ ಆ ಚಿತ್ರದಿಂದ ಕಳೆದು  ಕೊಂಡದ್ದನ್ನು ಅದೇ ವರ್ಷ ಪಡೆದರಂತೆ. ಯಾರಧ್ದೋ ದುಡ್ಡು ಯಲ್ಲಮ್ಮನ ಜಾತ್ರೆ,  ಕಾಸಿದ್ದವನೇ ಬಾಸ್‌ ಚಿತ್ರಗಳು ವಾಪಾಸ್‌ ಕೊಟ್ಟವಂತೆ.

ಬಿಲ್ಡಪ್‌ ಬಗ್ಗೆ ಬೇಸರ: ಇನ್ನು ಜಗ್ಗೇಶ್‌ ಬಿಲ್ಡಪ್‌ ಮೂಲಕ ಜನಪ್ರಿಯತೆ ಗಳಿಸಲು ಮುಂದಾಗಿರುವ ಕೆಲವರ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಸರಣಿ ಟ್ವೀಟ್‌ಗಳ ಮೂಲಕ ಬಿಲ್ಡಪ್‌ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ. ಅವರು ಮಾಡಿರುವ ಟ್ವೀಟ್‌ಗಳು ಈ ರೀತಿ ಇವೆ… ಎಂಥ ಬಿಲ್ಡಪ್‌ ಕಾಲವಿದು! ಗನ್‌ ಮ್ಯಾನ್‌, ಬೌನ್ಸರ್ ಇದ್ದವನ ಒಪ್ಪಿ ಯುಗೆ ಯುಗೆ ಅಂತೆ! ಎಲ್ಲಾ ಇದ್ದು ಸಾಮಾನ್ಯನಂತೆ ಬದುಕುವವ  ಎಲ್ಲು ಸಲ್ಲದ ಸಾಮಾನ್ಯನಂತೆ! ವೈ? ವಾಕರಿಕೆ ಬರುತ್ತಿದೆ ಇತ್ತೀಚಿನ ನಡಾವಳಿ ಕಂಡು! ತುಂಬಿದ ಕೊಡ ತುಳು ಕೋಲ್ಲಾ!

ಅರ್ಧ ತುಂಬಿದ ಕೊಡವೆ ಶಬ್ದ ಜಾಸ್ತಿ! ಬಿಲ್ಡಪ್‌ನಿಂದ ಅಳೆಯದಿರಿ ಸಾಧನೆ!ಎಲ್ಲ ಬಿಲ್ಡಪ್‌ ಕೊಟ್ಟು ಬೋರ್‌  ಆಗಿದೆ! ಎಂಥ ಕಾಲಘಟ್ಟ ಇಂದು! ರಾಜ್‌, ವಿಷ್ಣು, ಅಂಬಿ, ಪ್ರಭಾಕರ್‌, ಶಂಕರ್‌ ಜಮಾನ ಕಂಡವರು ನಾವು!ಇಂದು ಜಾಲ ತಾಣ   ಕುಬೇರನ ಬಿಲ್ಡಪ್‌ಗ್ಳಿಗೆ ಜೈ ಅನ್ನಬೇಕೇಕಂತೆ! ಅಂದರೆ ಗ್ರೇಟ್‌ ಇಲ್ಲಾಂದ್ರೆ ಚಿತ್ರಾನ್ನವಂತೆ! ಕರ್ಮವೇ ಇದನ್ನ ಮೀರಿ ಬೆಳೆದ  ಸಂತತಿ ನಾವು!  ಇಂದು ಹುಟ್ಟು ಸಾವು ಬರಿ ಜಾಲತಾಣದಲ್ಲೆ ನಿರ್ಧಾರ ಮಾಡದಿರಿ… ಅದಮೀರಿ ಬೆಳೆದ ಸಂತತಿ ಯವರು ನಾವು! ನಾವು ನೋ ಬಿಲ್ಡಪ್‌!

ಬಿಲ್ಡಪ್‌ ಜಮಾನ ನೋಡಿ ಬೋರ್‌ ಆಗಿದೆ ಸಹೋದರಿ! ಕೊರೋನ ಮನುಜನ್ಮ  ಜಾಲಾಡಿಸಿ ರುಬ್ಬಿದರು ಎಚ್ಚರ ಆಗುತ್ತಿಲ್ಲಾ ಮನುಜನ್ಮ! ಹೇಗೆ ಅರಿವಾಗುವುದೋ ಕ್ಷಣಿಕ ಸುಖಕದ ಮನುಜನಿಗೆ ನಾ ಕಾಣೆ ದೇವರಾಣೆ.. ಎಂದು ಟ್ವೀಟ್‌ ಮಾಡಿದ್ದಾರೆ. ಸದ್ಯ ಜಗ್ಗೇಶ್‌ ಅಭಿನಯದ ತೋತಾಪುರಿ ಚಿತ್ರ ಬಿಡುಗಡೆಯ ಹಂತಕ್ಕೆ  ಬಂದಿದ್ದು, ಎರಡು ಭಾಗಗಳಲ್ಲಿ ಚಿತ್ರ ತೆರೆಕಾಣಲಿದೆ.

ಟಾಪ್ ನ್ಯೂಸ್

ಅಯ್ಯಪ್ಪ ಸ್ವಾಮಿ ದರ್ಶನಕ್ಕೂ ಆನ್‌ಲೈನ್‌ ಬುಕ್ಕಿಂಗ್‌!

ಅಯ್ಯಪ್ಪ ಸ್ವಾಮಿ ದರ್ಶನಕ್ಕೂ ಆನ್‌ಲೈನ್‌ ಬುಕ್ಕಿಂಗ್‌!

ಎಸ್‌-400 ಬೂಸ್ಟರ್‌ ;  ಭಾರತಕ್ಕೆ ಕ್ಷಿಪಣಿ ನಿಗ್ರಹ ವ್ಯವಸ್ಥೆ ಪೂರೈಕೆ ಸರಾಗ

ಎಸ್‌-400 ಬೂಸ್ಟರ್‌ ;  ಭಾರತಕ್ಕೆ ಕ್ಷಿಪಣಿ ನಿಗ್ರಹ ವ್ಯವಸ್ಥೆ ಪೂರೈಕೆ ಸರಾಗ

ಡಿಜಿಟಲ್‌ ವಹಿವಾಟು ಶೇ. 53 ಏರಿಕೆ

ಡಿಜಿಟಲ್‌ ವಹಿವಾಟು ಶೇ. 53 ಏರಿಕೆ

ಕರಾವಳಿಯ ವಾಜಪೇಯಿ ಖ್ಯಾತಿಯ ರಾಮ ಭಟ್‌

ಕರಾವಳಿಯ ವಾಜಪೇಯಿ ಖ್ಯಾತಿಯ ರಾಮ ಭಟ್‌

ಸೋಂಕಿನ ಶಕ್ತಿ 3 ಪಟ್ಟು; ಡಬ್ಲ್ಯುಎಚ್‌ಒ ಪ್ರಧಾನ ವಿಜ್ಞಾನಿಯಾದ ಡಾ| ಸೌಮ್ಯ ಎಚ್ಚರಿಕೆ

ಸೋಂಕಿನ ಶಕ್ತಿ 3 ಪಟ್ಟು; ಡಬ್ಲ್ಯುಎಚ್‌ಒ ಪ್ರಧಾನ ವಿಜ್ಞಾನಿಯಾದ ಡಾ| ಸೌಮ್ಯ ಎಚ್ಚರಿಕೆ

ಪಾಕಿಸ್ಥಾನಗೆ ಸಾಲದ ಶೂಲ! ನಮ್ಮ ಬಳಿ ಹಣವೇ ಇಲ್ಲ..

ಪಾಕಿಸ್ಥಾನಗೆ ಸಾಲದ ಶೂಲ! ನಮ್ಮ ಬಳಿ ಹಣವೇ ಇಲ್ಲ..

ಇನ್ನಷ್ಟು ಗಟ್ಟಿಯಾಗಲಿ ಭಾರತ-ರಷ್ಯಾ ನಡುವಿನ ಸಂಬಂಧ

ಇನ್ನಷ್ಟು ಗಟ್ಟಿಯಾಗಲಿ ಭಾರತ-ರಷ್ಯಾ ನಡುವಿನ ಸಂಬಂಧಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಫಿಯಾ ಅಡ್ಡದಲ್ಲಿ ಖಡಕ್‌ ಪ್ರಜ್ವಲ್‌: ಲೋಹಿತ್‌ ನಿರ್ದೇಶನದ ಚಿತ್ರ

‘ಮಾಫಿಯಾ’ ಅಡ್ಡದಲ್ಲಿ ಖಡಕ್‌ ಪ್ರಜ್ವಲ್‌: ಲೋಹಿತ್‌ ನಿರ್ದೇಶನದ ಚಿತ್ರ

ashika ranganath

ಬ್ಯಾಕ್‌ ಟು ಬ್ಯಾಕ್‌ ಆಶಿಕಾ: ಈ ವಾರ ಒಂದು ಮುಂದಿನ ವಾರ ಮತ್ತೂಂದು ರಿಲೀಸ್‌

“ಮದಗಜ’ ಕ್ಲಾಸ್‌-ಮಾಸ್‌ ಗೆ ಖುಷಿ ಕೊಡೋ ಸಿನಿಮಾ: ಮುರಳಿ

“ಮದಗಜ’ ಕ್ಲಾಸ್‌-ಮಾಸ್‌ ಗೆ ಖುಷಿ ಕೊಡೋ ಸಿನಿಮಾ: ಮುರಳಿ

ombatthane dikku kannada movie

ಡಿ. 31ಕ್ಕೆ ಒಂಬತ್ತನೇ ದಿಕ್ಕು

akshi

ನೇತ್ರದಾನದ ಮಹತ್ವಸಾರುವ ಚಿತ್ರ :  ಡಿ.3ಕ್ಕೆ ಅಕ್ಷಿ ತೆರೆಗೆ

MUST WATCH

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

ಹೊಸ ಸೇರ್ಪಡೆ

ಅಯ್ಯಪ್ಪ ಸ್ವಾಮಿ ದರ್ಶನಕ್ಕೂ ಆನ್‌ಲೈನ್‌ ಬುಕ್ಕಿಂಗ್‌!

ಅಯ್ಯಪ್ಪ ಸ್ವಾಮಿ ದರ್ಶನಕ್ಕೂ ಆನ್‌ಲೈನ್‌ ಬುಕ್ಕಿಂಗ್‌!

ಎಸ್‌-400 ಬೂಸ್ಟರ್‌ ;  ಭಾರತಕ್ಕೆ ಕ್ಷಿಪಣಿ ನಿಗ್ರಹ ವ್ಯವಸ್ಥೆ ಪೂರೈಕೆ ಸರಾಗ

ಎಸ್‌-400 ಬೂಸ್ಟರ್‌ ;  ಭಾರತಕ್ಕೆ ಕ್ಷಿಪಣಿ ನಿಗ್ರಹ ವ್ಯವಸ್ಥೆ ಪೂರೈಕೆ ಸರಾಗ

ಡಿಜಿಟಲ್‌ ವಹಿವಾಟು ಶೇ. 53 ಏರಿಕೆ

ಡಿಜಿಟಲ್‌ ವಹಿವಾಟು ಶೇ. 53 ಏರಿಕೆ

ಕರಾವಳಿಯ ವಾಜಪೇಯಿ ಖ್ಯಾತಿಯ ರಾಮ ಭಟ್‌

ಕರಾವಳಿಯ ವಾಜಪೇಯಿ ಖ್ಯಾತಿಯ ರಾಮ ಭಟ್‌

ಸೋಂಕಿನ ಶಕ್ತಿ 3 ಪಟ್ಟು; ಡಬ್ಲ್ಯುಎಚ್‌ಒ ಪ್ರಧಾನ ವಿಜ್ಞಾನಿಯಾದ ಡಾ| ಸೌಮ್ಯ ಎಚ್ಚರಿಕೆ

ಸೋಂಕಿನ ಶಕ್ತಿ 3 ಪಟ್ಟು; ಡಬ್ಲ್ಯುಎಚ್‌ಒ ಪ್ರಧಾನ ವಿಜ್ಞಾನಿಯಾದ ಡಾ| ಸೌಮ್ಯ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.