
ಎರಡು ದಿನಗಳ ಹಿಂದೆ ಉದ್ಘಾಟನೆಗೊಂಡಿದ್ದ ದೇವಾಲಯದಲ್ಲಿ ಕಳ್ಳತನ
Team Udayavani, Mar 12, 2023, 11:24 AM IST

ಹುಣಸೂರು: ಎರಡು ದಿನಗಳ ಹಿಂದಷ್ಟೆ ಉದ್ಘಾಟನೆಗೊಂಡಿದ್ದ ದೇವಾಲಯದಲ್ಲಿ ಕಳ್ಳತನ ನಡೆದಿರುವ ಘಟನೆ ನಗರಕ್ಕೆ ಸಮೀಪದ ಚಿಕ್ಕ ಹುಣಸೂರು ಹಳೆಯೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ.
ಚಿಕ್ಕಹುಣಸೂರು ಹಳೆಯೂರಿನ ಕೆರೆ ದಡದಲ್ಲಿ ನಿರ್ಮಿಸಿದ್ದ ಬನ್ನಂತಮ್ಮ ದೇವಾಲಯ ಶುಕ್ರವಾರ ಉಧ್ಘಾಟನೆಗೊಂಡಿತ್ತು. ದೇವಾಲಯದ ಬಾಗಿಲಿನ ಬೀಗ ಮುರಿದು ಹಾಕಿರುವ ಕಳ್ಳರು ಗೋಲಕ ಒಡೆದು ಹುಂಡಿ ಹಣ, ದೇವರ ಮೇಲಿನ ತಾಳಿ ಹಾಗೂ ದೇವಸ್ಥಾನದ ಆವರಣದಲ್ಲಿ ಅಳವಡಿಸಿದ್ದ ಎರಡು ಲೈಟ್ ಗಳನ್ನು ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಭಾನುವಾರ ಬೆಳಗ್ಗೆ ಪೂಜೆ ಮಾಡಲು ಅರ್ಚಕರು ಬಂದ ವೇಳೆ ಆವರಣದಲ್ಲಿ ಅಳವಡಿಸಿದ್ದ ಮಕ್ಯೂ೯ರಿ ಲೈಟ್ ಉರಿದಿರುವುದು ಕಂಡು ಅನುಮಾನದಿಂದ ದೇವಾಲಯದ ಬಳಿ ಹೋಗಿ ನೋಡಿದಾಗ ಬಾಗಿಲು ಒಡೆದಿರುವುದು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಗರ ಠಾಣೆ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ದೇವಾಲಯಕ್ಕೆ ಭೇಟಿ ನೀಡಿ ಪರಿಶಿಲಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Karwar Tunnel ; ಸತಾಯಿಸುವುದು ಒಳ್ಳೆಯದಲ್ಲ: ವಿಧಾನ ಪರಿಷತ್ ಸದಸ್ಯ ಉಳ್ವೇಕರ್

Gaurav Gogoi ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಹಿಮಂತ ಶರ್ಮಾ ಪತ್ನಿ

Cow: ಬಣಕಲ್ ಪೇಟೆಯಲ್ಲಿ ಬೀಡಾಡಿ ದನಗಳ ಕಾಟ… ರಸ್ತೆಯಲ್ಲೇ ಕರು ಹಾಕಿದ ಬಿಡಾಡಿ ಹಸು

Asian Games ಅತ್ಯಾಕರ್ಷಕ ಉದ್ಘಾಟನೆ: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

Tollywood: 16 ವರ್ಷದ ಬಳಿಕ ಒಂದೇ ಚಿತ್ರದಲ್ಲಿ ಪ್ರಭಾಸ್ – ನಯನತಾರಾ ನಟನೆ; ಯಾವ ಸಿನಿಮಾ?