Theft ಬೆಳಪು: ಮನೆಗೆ ನುಗ್ಗಿ ನಗದು,ಚಿನ್ನಾಭರಣ ಕಳವು
Team Udayavani, Aug 21, 2023, 7:41 PM IST
ಶಿರ್ವ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಪು ಜವಣೆರೆಕಟ್ಟೆಯ ಮುಬಾಶಿರ ಅವರ ಮನೆಯಲ್ಲಿ ಆ.20ರ ರಾತ್ರಿ ಯಾರೂ ಇಲ್ಲದ ವೇಳೆ ಕಳ್ಳರು ಮನೆ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳಪ್ರವೇಶಿಸಿ ಕಪಾಟಿನಲ್ಲಿದ್ದ 4 ಗ್ರಾಂ. ತೂಕದ ಚಿನ್ನದ ಸರ ಮತ್ತು 10000/-ರೂ. ನಗದು ಹಣವನ್ನು ಕಳವುಗೈದಿದ್ದಾರೆ.
ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.