
ರಾಜ್ಯದಲ್ಲಿ ಈಗ ಯಡಿಯೂರಪ್ಪನವರ ಬಿಜೆಪಿ ಇಲ್ಲ:ಎಚ್.ಡಿ.ಕುಮಾರಸ್ವಾಮಿ
Team Udayavani, Feb 3, 2023, 9:23 PM IST

ತಿಪಟೂರು: ರಾಜ್ಯದಲ್ಲಿ ಮೋದಿ ಹಾಗೂ ಅಮಿತ್ ಶಾ ಅವರ ಬಿಜೆಪಿ ಇದೆಯೇ ಹೊರತು ಬಿ.ಎಸ್.ಯಡಿಯೂರಪ್ಪನವರ ಬಿಜೆಪಿ ಇಲ್ಲ. ಮೋದಿ ಮತ್ತು ಶಾ ಅವರು ತೆರಿಗೆ ವಿಧಿಸುವ ಮೂಲಕ ರೈತರು, ಮಹಿಳೆಯರು ಹಾಗೂ ಬಡವರ ರಕ್ತ ಹೀರುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಶುಕ್ರವಾರ ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್ ಅವರನ್ನು ಜೆಡಿಎಸ್‌ಗೆ ಸೇರಿಸಿಕೊಂಡ ಬಳಿಕ ಮಾತನಾಡಿದ ಅವರು, ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ಬಿಜೆಪಿ ರಾಜ್ಯದಲ್ಲಿ ಕಳೆದು ಹೋಗಿದೆ. ಜನಪರ ನಿಲುವು ತಾಳಿರುವ ಜೆಡಿಎಸ್ ಅನ್ನು ಲಿಂಗಾಯತ ಸಮಾಜ ಬಂಧುಗಳು ಬೆಂಬಲಿಸುವಂತೆ ಮನವಿ ಮಾಡಿಕೊಂಡರು.
ಲಿಂಗಾಯತ ಸಮಾಜದ ಮತದಾರರು ಯಡಿಯೂರಪ್ಪನವರ ಮನವಿಗೆ ಸ್ಪಂದಿಸಿ, ಶಾಸಕ ಬಿ.ಸಿ.ನಾಗೇಶ್‌ಗೆ ಮತ ನೀಡಿ ಸಂಕಟಪಡುವಂತಾಗಿದೆ. ಆದರೆ ಈಗ ಯಡಿಯೂರಪ್ಪನವರ ಮಾತು ಕೇಳಬೇಡಿ ಎಂದು ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ಸಚಿವ ಬಿ.ಸಿ.ನಾಗೇಶ್‌ಗೆ ಮೋದಿ ಚಿಂತೆ, ಸಿದ್ದರಾಮಯ್ಯಗೆ ಸೋನಿಯಾ ಚಿಂತೆ. ಆದರೆ ನಮ್ಮ ಕುಮಾರಣ್ಣನಿಗೆ ರೈತರ ಚಿಂತೆ. ಎರಡೂ ಪಕ್ಷಗಳ ನಾಯಕರು ಮಹಾ ಭ್ರಷ್ಟರಾಗಿ, ಸಿ.ಡಿ. ಹಗರಣಗಳಲ್ಲಿ ಸಿಲುಕಿ ರಾಜ್ಯದ ಜನರನ್ನು ಅವಮಾನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರಟಗೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ 40 ಮನೆಗಳು ರಾತ್ರೋರಾತ್ರಿ ನೆಲಸಮ

ಸಾರ್ವಜನಿಕ ಕುಂದು-ಕೊರತೆ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನೆ

ಉಚಿತ ಸಾಮೂಹಿಕ ವಿವಾಹಕ್ಕೆ ಸಿದ್ದರಬೆಟ್ಟ ಶ್ರೀಗಳಿಂದ ಅರ್ಜಿ ಆಹ್ವಾನ

ರೈತರಿಗೆ ಸಾಗುವಳಿ ಚೀಟಿ ನೀಡಲು ಮೀನಾಮೇಷ: ಕಂದಾಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಕಾಮುಕ ಶಿಕ್ಷಕ ಕರ್ತವ್ಯದಿಂದ ಅಮಾನತು