ಉಬೆರ್ ಕಪ್: ಕೊರಿಯಾ ವಿರುದ್ಧ ಭಾರತೀಯ ವನಿತಾ ತಂಡಕ್ಕೆ ಸೋಲು
Team Udayavani, May 11, 2022, 10:56 PM IST
ಬ್ಯಾಂಕಾಕ್: ಉಬೆರ್ ಕಪ್ನಲ್ಲಿ ಭಾರತೀಯ ವನಿತಾ ತಂಡವು “ಡಿ’ ಬಣದ ಕೊನೆಯ ಪಂದ್ಯದಲ್ಲಿ ಕೊರಿಯಾ ವಿರುದ್ಧ 0-5 ಅಂತರದಿಂದ ಸೋಲನ್ನು ಕಂಡಿದೆ. ಇದರಿಂದ ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಇದೇ ವೇಳೆ ಥಾಮಸ್ ಕಪ್ಗಾಗಿ ನಡೆಯುತ್ತಿರುವ ಪುರುಷರ ವಿಭಾಗದ ಸ್ಪರ್ಧೆಯ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಭಾರತವು ಚೈನೀಸ್ ತೈಪೆ ವಿರುದ್ಧ 1-4 ಅಂತರದಿಂದ ಸೋಲನ್ನು ಕಂಡಿದೆ.
ಆದರೆ “ಸಿ’ ಬಣದ ಈ ಮೊದಲಿನ ಎರಡು ಪಂದ್ಯಗಳಲ್ಲಿ ಗೆದ್ದಿರುವ ಭಾರತೀಯ ತಂಡವು ಈಗಾಗಲೇ ನಾಕೌಟ್ ಹಂತಕ್ಕೇರಿದೆ.
“ಡಿ’ ಬಣದಲ್ಲಿ ಮೊದಲೆರಡು ಪಂದ್ಯಗಳಲ್ಲಿ ಗೆದ್ದಿರುವ ಭಾರತವು ಈಗಾಗಲೇ ಕ್ವಾರ್ಟರ್ಫೈನಲಿಗೇರಿದೆ.
ಆದರೆ ಕೊರಿಯಾ ವಿರುದ್ಧ ನಡೆದ ಐದು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿಯೂ ಗೆಲ್ಲದಿರುವುದರಿಂದ ಭಾರತೀಯ ತಂಡದ ಸಾಮರ್ಥ್ಯವನ್ನು ಪ್ರಶ್ನಿಸುವಂತಾಗಿದೆ. ಕ್ವಾರ್ಟರ್ಫೈನಲ್ನಲ್ಲಿ ಭಾರತವು ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ