Udayavni Special

ಮನೆ-ಮನೆಗೆ ಮಳೆಕೊಯ್ಲು ಅಳವಡಿಕೆಗೆ ಸಕಾಲ

ಮಳೆಗಾಲಕ್ಕೆ ಮುನ್ನುಡಿ

Team Udayavani, May 22, 2020, 5:57 AM IST

ಮನೆ-ಮನೆಗೆ ಮಳೆಕೊಯ್ಲು ಅಳವಡಿಕೆಗೆ ಸಕಾಲ

ವಿಶೇಷ ವರದಿ- ಮಂಗಳೂರು: ಮಂಗಳೂರು ನಗರ ಸಹಿತ ಕರಾವಳಿಯಲ್ಲಿ ಒಂದು ವಾರದಿಂದ ಆಗಾಗ ಮಳೆ ಸುರಿಯುತ್ತಿದ್ದು, ವಾಡಿಕೆಯಂತೆ ಮಳೆಗಾಲ ಆರಂಭಕ್ಕೂ ಎರಡು ವಾರಗಳಷ್ಟೇ ಬಾಕಿಯಿದೆ. ಬೇಸಗೆಯಲ್ಲಿ ಉಲ½ಣಿಸುವ ಕುಡಿಯುವ ನೀರಿನ ಸಮಸ್ಯೆ ನೀಗಿಸುವುದಕ್ಕೆ ನಮ್ಮ ಮುಂದಿರುವ ಸುಲಭ ಯೋಚನೆ-ಯೋಜನೆಯೇ ಮಳೆಕೊಯ್ಲು. ಇದನ್ನು ಅಳವಡಿಸಿಕೊಳ್ಳಲು ಇದು ಸಕಾಲವಾಗಿದೆ.

ಮಂಗಳೂರಿನಲ್ಲಿ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ವಿಪರೀತವಾದರೆ, ದ.ಕ. ಮತ್ತು ಉಡುಪಿ ಜಿಲ್ಲಾದ್ಯಂತ ಕಳೆದ ವರ್ಷದ ಬೇಸಗೆ ಯಲ್ಲಿ ನೀರಿಗಾಗಿ ಪರಿತಪಿಸಿದ್ದೇ ಜಾಸ್ತಿ. ಈ ವರ್ಷದ ಮಟ್ಟಿಗೆ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ಇದೇ ರೀತಿ ಬೇಸಗೆಯಲ್ಲಿನ ಜಲಕ್ಷಾಮ ದೂರಗೊಳಿಸಬೇಕಾದರೆ ಎಲ್ಲರ ಮನೆ-ಕಟ್ಟಡಗಳಲ್ಲಿಯೂ ಮಳೆಕೊಯ್ಲು ಅಳವಡಿಕೆಯಾಗಬೇಕು.

ಕಳೆದ ಬಾರಿ ಮಳೆಗಾಲ ಪ್ರಾರಂಭಕ್ಕೆ ಮುನ್ನುಡಿಯಾಗಿ “ಉದಯವಾಣಿ’ಯು “ಮನೆ-ಮನೆಗೆ ಮಳೆಕೊಯ್ಲು’ ಎನ್ನುವ ಜಲ ಸಾಕ್ಷರತಾ ಅಭಿಯಾನವನ್ನು ಸುಮಾರು 100 ದಿನಗಳ ಕಾಲ ಹಮ್ಮಿಕೊಂಡಿತ್ತು. ಜನಸಾಮಾನ್ಯರಲ್ಲಿ ನೀರು ಉಳಿತಾಯದ ಜಾಗೃತಿಗೆ ಎಲ್ಲೆಡೆಯಿಂದ ಅಭೂತಪೂರ್ವ ಬೆಂಬಲ-ಉತ್ತೇಜನ ವ್ಯಕ್ತವಾಗಿತ್ತು. ಪರಿಣಾಮವಾಗಿ ದ.ಕ. ಜಿಲ್ಲೆ ಮಾತ್ರವಲ್ಲದೆ, ನೆರೆಯ ಉಡುಪಿ, ಕಾಸರಗೋಡು, ಉತ್ತರ ಕನ್ನಡ ಜಿಲ್ಲೆ ಸಹಿತ ಸುಮಾರು 400ಕ್ಕೂ ಹೆಚ್ಚು ಮನೆಗಳಲ್ಲಿ, ಸಂಘ ಸಂಸ್ಥೆ, ಧಾರ್ಮಿಕ ಕ್ಷೇತ್ರ, ಶಾಲಾ ಕಾಲೇಜುಗಳಲ್ಲಿ ಮಳೆಕೊಯ್ಲು ಅಳವಡಿಸುವುದಕ್ಕೆ ಪ್ರೇರಣೆಯಾಗಿತ್ತು. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲಾºವಿ ಮಾರ್ಗದರ್ಶನದಲ್ಲಿ ಹಲವಾರು ಮನೆಗಳಲ್ಲಿ ಮಳೆಕೊಯ್ಲು ಅಳವಡಿಕೆಯಾಗಿದೆ.

ನಳನಳಿಸುತ್ತಿದೆ ನೀರು
ಮಳೆಕೊಯ್ಲು ಅಳವಡಿಸಿಕೊಂಡವರೆಲ್ಲ ಈ ಬಾರಿ ತಮ್ಮ ಮನೆಯ ಬಾವಿ, ಬೋರ್‌ವೆಲ್‌ಗ‌ಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿರುವುದಕ್ಕೆ ಖುಷಿಯಾಗಿದ್ದಾರೆ. ಈ ಬೇಸಗೆಯಲ್ಲಿ ನೀರಿನ ಅಭಾವ ಎದುರಾದರೂ ತಮ್ಮ ಮನೆಯ ಬಾವಿಯಲ್ಲಿ ಕಡಿಮೆಯಾಗದು ಎಂಬ ವಿಶ್ವಾಸವನ್ನು ಮೊದಲೇ ಹೊಂದಿದ್ದರು.

ಈಗ ಮತ್ತೂಂದು ಮಳೆಗಾಲಕ್ಕೆ ನಾವೆಲ್ಲ ಅಣಿಯಾಗುತ್ತಿದ್ದೇವೆ. ಮಳೆಕೊಯ್ಲು ಅಳವಡಿಸಿಕೊಳ್ಳಲು ಇದು ಪ್ರಶಸ್ತ ಸಮಯ. ಒಂದೆರಡು ಮಳೆ ಬಿದ್ದಾಗಲೇ ಮಳೆ ಕೊಯ್ಲು ಅಳವಡಿಸಿಕೊಂಡರೆ ಬಹುಶಃ ಮಳೆಗಾಲ ಕಳೆಯುವ ಹೊತ್ತಿಗೆ ಮಳೆ ನೀರು ಇಂಗಿ ಮುಂದಿನ ಬೇಸಗೆಯನ್ನು ನೀರಿನ ಬವಣೆಯಿಲ್ಲದೆ ಕಳೆಯಬಹುದು. ಸದ್ಯ ಭವಿಷ್ಯದಲ್ಲಿ ನೀರಿನ ಹಾಹಾಕಾರ ತಪ್ಪಿಸಲು ಜನ ಜಾಗ್ರತರಾಗಬೇಕೆಂಬುದೇ ಉದಯವಾಣಿಯ ಕಳಕಳಿಯಾಗಿದೆ.

ಈ ಬಾರಿಯೂ
ನಿರಂತರ ಜಾಗೃತಿ
ನಿರ್ಮಿತಿ ಕೇಂದ್ರದ ಮುಖಾಂತರ ಒಂದು ವರ್ಷದಿಂದ ನಿರಂತರವಾಗಿ ಮಳೆಕೊಯ್ಲು ಜಾಗೃತಿ ನಡೆಯುತ್ತಿದೆ. ಉದಯವಾಣಿಯ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ಪೂರಕವಾಗಿ ಮಳೆಕೊಯ್ಲು ಅಳವಡಿಸುವುದರ ಬಗ್ಗೆ ಉಚಿತವಾಗಿಯೇ ಪ್ರಾತ್ಯಕ್ಷಿಕೆ ನೀಡಲಾಗಿದೆ. ಯಾರೇ ಮಾಹಿತಿಗಾಗಿ ಕರೆದರೂ ನಿರ್ಮಿತಿ ಕೇಂದ್ರ ಉಚಿತವಾಗಿ ಮಾಹಿತಿ ಒದಗಿಸಲಿದೆ.
-ರಾಜೇಂದ್ರ ಕಲ್ಬಾವಿ, ಯೋಜನಾ ನಿರ್ದೇಶಕರು ನಿರ್ಮಿತಿ ಕೇಂದ್ರ ಸುರತ್ಕಲ್‌

ಮಳೆಕೊಯ್ಲು ಅಳವಡಿಸಿ
ಕಳೆದ ಬೇಸಗೆಯಲ್ಲಿ ನೀರಿಗಾಗಿ ಪರಿತಪಿಸುವ ಹಾಗಾಗಿತ್ತು. ಈ ವರ್ಷ ನೀರಿನ ಸಮಸ್ಯೆ ಉಂಟಾಗಿಲ್ಲ. ಆದಾಗ್ಯೂ ಮುಂದೆ ಹೇಗೆಂದು ಹೇಳಲಾಗುವುದಿಲ್ಲ. ಜನ ಈಗಿಂದಲೇ ನೀರು ಉಳಿತಾಯದ ದಾರಿಗಳನ್ನು ಕಂಡುಕೊಳ್ಳಬೇಕು. “ಉದಯವಾಣಿ’ ಕಳೆದ ವರ್ಷ ಆರಂಭಿಸಿದ್ದ ಮನೆ-ಮನೆಗೆ ಮಳೆಕೊಯ್ಲು ಅಭಿಯಾನಕ್ಕೆ ಜನ ಸ್ಪಂದನೆ ನೀಡಿದ ರೀತಿ ಉತ್ತಮವಾಗಿತ್ತು. ಈ ಬಾರಿಯೂ ಮಳೆ ನೀರಿಂಗಿಸಲು ಇದು ಪ್ರಶಸ್ತವಾದ ಸಮಯ. ಜನರು ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ನೀರಿಂಗಿಸುವುದು, ಮಳೆಕೊಯ್ಲು ಅಳವಡಿಸುವುದಕ್ಕೆ ಮುಂದಾಗಬೇಕು.
-ಡಾ| ಆರ್‌. ಸೆಲ್ವಮಣಿ,
ದ.ಕ. ಜಿಲ್ಲಾ ಪಂಚಾಯತ್‌ ಸಿಇಒ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

MEDICAL

ಮೆಡಿಕಲ್ ಶಾಪ್ ಎದುರೇ ಕುಸಿದುಬಿದ್ದು ಮೃತಪಟ್ಟ ವ್ಯಕ್ತಿ: 6ಗಂಟೆ ಕಳೆದರೂ ಬಾರದ ಅಧಿಕಾರಿಗಳು !

ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ನಿಧನ

ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ನಿಧನ

twitter

ಬರಾಕ್ ಒಬಾಮ ಸೇರಿದಂತೆ ಹಲವರ ಟ್ವಿಟ್ಟರ್ ಅಕೌಂಟ್ ಹ್ಯಾಕ್: ಹ್ಯಾಕರ್ ಬೇಡಿಕೆಯೇನು ಗೊತ್ತಾ ?

ರಾಜಸ್ಥಾನ ಬಿಕ್ಕಟ್ಟು: ಬದಲಾಗಲಿ ಮನಸ್ಥಿತಿ

ರಾಜಸ್ಥಾನ ಬಿಕ್ಕಟ್ಟು: ಬದಲಾಗಲಿ ಮನಸ್ಥಿತಿ

ಗೆಲುವಿನ ಮಾರ್ಗ ತೋರಿಸುವರೇ ರೂಟ್‌?

ಗೆಲುವಿನ ಮಾರ್ಗ ತೋರಿಸುವರೇ ರೂಟ್‌?

ಎಲ್ಲ ತರಗತಿಗಳ ಶೇ.30ರಷ್ಟು ಪಠ್ಯಕ್ರಮ ಕಡಿತ!: ಈ ತಿಂಗಳ ಅಂತ್ಯಕ್ಕೆ ಆದೇಶ ಸಾಧ್ಯತೆ

ಎಲ್ಲ ತರಗತಿಗಳ ಶೇ.30ರಷ್ಟು ಪಠ್ಯಕ್ರಮ ಕಡಿತ!: ಈ ತಿಂಗಳ ಅಂತ್ಯಕ್ಕೆ ಆದೇಶ ಸಾಧ್ಯತೆ

ಕಸ್ತೂರ್ಬಾ ಆಸ್ಪತ್ರೆ: ವಿದೇಶ ಯಾನಿಗಳಿಗೆ ಕೋವಿಡ್‌ ಪರೀಕ್ಷೆ

ಕಸ್ತೂರ್ಬಾ ಆಸ್ಪತ್ರೆ: ವಿದೇಶ ಯಾನಿಗಳಿಗೆ ಕೋವಿಡ್‌ ಪರೀಕ್ಷೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫಲಿತಾಂಶದ ಗುಣಮಟ್ಟದಲ್ಲಿ ಗಮನಾರ್ಹ ಏರಿಕೆ: ಡಾ| ಆಳ್ವ

ಫಲಿತಾಂಶದ ಗುಣಮಟ್ಟದಲ್ಲಿ ಗಮನಾರ್ಹ ಏರಿಕೆ: ಡಾ| ಆಳ್ವ

ದ.ಕ.: ಲಾಕ್‌ಡೌನ್‌ ಆರಂಭ : ಸಾರಿಗೆ, ವಾಣಿಜ್ಯ ಚಟುವಟಿಕೆ ಸ್ಥಗಿತ

ದ.ಕ.: ಲಾಕ್‌ಡೌನ್‌ ಆರಂಭ : ಸಾರಿಗೆ, ವಾಣಿಜ್ಯ ಚಟುವಟಿಕೆ ಸ್ಥಗಿತ

ದ.ಕ ಜಿಲ್ಲೆ : 73 ಪಾಸಿಟಿವ್‌; ನಾಲ್ವರ ಸಾವು : ಆ್ಯಂಟಿಜೆನ್‌ ಟೆಸ್ಟ್‌  ಆರಂಭ

ದ.ಕ ಜಿಲ್ಲೆ : 73 ಪಾಸಿಟಿವ್‌; ನಾಲ್ವರ ಸಾವು : ಆ್ಯಂಟಿಜೆನ್‌ ಟೆಸ್ಟ್‌  ಆರಂಭ

ಮನೋಹರ ಪ್ರಸಾದ್‌ಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಮನೋಹರ ಪ್ರಸಾದ್‌ಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

apmc

ಎಪಿಎಂಪಿಸಿ ಅಧ್ಯಕ್ಷರಾಗಿ ಕೃಷ್ಣರಾಜ ಹೆಗ್ಡೆ, ಉಪಾಧ್ಯಕ್ಷರಾಗಿ ರಜನಿ ದುಗ್ಗಣ್ಣ ಆಯ್ಕೆ

MUST WATCH

udayavani youtube

ಮರದ ಮೇಲೆಯೇ ಪ್ರಜ್ಞೆ ತಪ್ಪಿದ ಮೂರ್ತೆದಾರ – ಆ ಎರಡು ಗಂಟೆಗಳು!

udayavani youtube

ಆಧಾರ್ ಕಾರ್ಡ್ ತೋರಿಸಿ COVID ಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani


ಹೊಸ ಸೇರ್ಪಡೆ

MEDICAL

ಮೆಡಿಕಲ್ ಶಾಪ್ ಎದುರೇ ಕುಸಿದುಬಿದ್ದು ಮೃತಪಟ್ಟ ವ್ಯಕ್ತಿ: 6ಗಂಟೆ ಕಳೆದರೂ ಬಾರದ ಅಧಿಕಾರಿಗಳು !

ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ನಿಧನ

ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ನಿಧನ

ಅಮೆರಿಕ ವಿವಿಯಲ್ಲಿ ರೈತನ ಮಗನಿಗೆ ಪ್ರವೇಶ

ಅಮೆರಿಕ ವಿವಿಯಲ್ಲಿ ರೈತನ ಮಗನಿಗೆ ಪ್ರವೇಶ

twitter

ಬರಾಕ್ ಒಬಾಮ ಸೇರಿದಂತೆ ಹಲವರ ಟ್ವಿಟ್ಟರ್ ಅಕೌಂಟ್ ಹ್ಯಾಕ್: ಹ್ಯಾಕರ್ ಬೇಡಿಕೆಯೇನು ಗೊತ್ತಾ ?

ಸಂದೀಪ್‌ ಬ್ಯಾಗ್‌ನಲ್ಲಿ ಹ್ಯಾಂಡ್ಲರ್‌ಗಳ ಸುಳಿವು?

ಸಂದೀಪ್‌ ಬ್ಯಾಗ್‌ನಲ್ಲಿ ಹ್ಯಾಂಡ್ಲರ್‌ಗಳ ಸುಳಿವು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.