ಇಂದು ಮೊಹರಂ: ಸ್ವಾಭಿಮಾನ ಪ್ರತಿಷ್ಠೆಗೆ ಸ್ಫೂರ್ತಿ ಮೊಹರಂ


Team Udayavani, Jul 28, 2023, 12:39 AM IST

muslim

ಮೊಹರಂ ಸತ್ಯಕ್ಕಾಗಿ, ನ್ಯಾಯಕ್ಕಾಗಿ ನಿರಂಕುಶ ದಬ್ಟಾಳಿಕೆಯ ವಿರುದ್ಧ ವೀರಾವೇಶದಿಂದ ಹೋರಾಡಿ, ಆತ್ಮಾರ್ಪಣೆಗೈದ ಹಝರತ್‌ ಇಮಾಂ ಹುಸೇನರನ್ನು ಸ್ಮರಿಸತಕ್ಕ ಜಾಗೃತಿಯ ದಿನವೂ, ಆ ಮಹಾನ್‌ ಚೇತನಕ್ಕೆ ಶ್ರದ್ಧಾಂಜಲಿ ಯನ್ನು ಅರ್ಪಿಸತಕ್ಕ ಪುಣ್ಯದ ದಿನವೂ ಆಗಿದೆ.

ಇಸ್ಲಾಮಿನ ನಾಲ್ಕನೇ ಖಲೀಫ‌ರಾಗಿದ್ದ ಹಝರತ್‌ ಅಲಿಯವರು ಖೀಲಾಫ‌ತನ್ನು ನಿರ್ವಹಿಸಿದ ಅನಂತರ, ಐದನೇ ಖಲೀಫ‌ರಾಗಿ ಆಮೀರ್‌ ಮುಅವಿಯಾರವರು ಆಯ್ಕೆ ಯಾದರು. ಅಮೀರ್‌ ಮುಅವಿಯಾರವರು ಮರಣಿಸಲು, ನಾಯಕತ್ವದ ಯಾವ ಅರ್ಹತೆಯೂ ಇಲ್ಲದ ಅವರ ಪುತ್ರ ಯಝೀದನು ಸರ್ವಾಧಿಕಾರಿಯಾ ದನು. ಆದರೆ ಹಝರತ್‌ ಅಲಿಯವರ ಸುಪುತ್ರ, ಇಮಾಂ ಹುಸೇನರಿಗೆ ಕೂಫಾದ ನಾಯಕತ್ವ ನ್ಯಾಯಯುತವಾಗಿ ದೊರೆ ಯಬೇಕಿತ್ತು. ಹಝರತ್‌ ಇಮಾಂ ಹುಸೇನ್‌ ಮತ್ತು ಆಧ್ಯಾತ್ಮಿಕ ವಿಚಾರಗಳಲ್ಲಿಯೇ ಸದಾ ತಲ್ಲೀನರಾಗಿ, ಕಾಲ ಕಳೆಯುತ್ತಿದ್ದರು. ಅಧಿಕಾರದ ಲಾಲಸೆ ಅವರಿಗೆ ಎಳ್ಳಷ್ಟೂ ಇರಲಿಲ್ಲ. ಇಸಾಲಮೀ ದೇಶದ ಆಡಳಿತ ಸೂತ್ರವನ್ನು ಕೈಗೆತ್ತಿಕೊಂಡ ಯಝೀದನು ಅಧಿಕಾರ ದಾಹ ದಿಂದ, ಧರ್ಮ, ನ್ಯಾಯ, ನೀತಿ- ಇವುಗಳನ್ನೆಲ್ಲ ಸಂಪೂರ್ಣ ಮರೆತು, ತನ್ನ ಇಚ್ಛಾನು ಸಾರ ವಾಗಿ, ಇಸ್ಲಾಮಿನ ಉನ್ನತ ಮೌಲ್ಯ ಗಳ ವಿರುದ್ಧವಾಗಿಯೇ ರಾಜ್ಯ ಭಾರವನ್ನು ನಿರ್ವಹಿಸುತ್ತಿದ್ದನು.

ಅಧಿಕಾರ ಗದ್ದುಗೆಯನ್ನೇರಿದ ದುಷ್ಟ ಯಝೀದನ ದುರಾಡಳಿತದಿಂದ ಪ್ರಜೆಗಳು ಕಂಗೆಟ್ಟರು. ಕೂಫಾದ ಜನರ ಒತ್ತಾಯಕ್ಕೆ ಮಣಿ ದು, ಹಝರತ್‌ ಇಮಾಂ ಹುಸೇನರು ತನ್ನ ತಾ ತರು ರೂಪಿಸಿದ ರಾಜಕೀಯ ಸ್ಥಿರತೆಯ ಪುನರುತ್ಥಾನಕ್ಕಾಗಿ ದುಷ್ಟ ಯಝೀದನ ವಿರುದ್ಧ ಹೋರಾಡಬೇಕಾದುದು ಅಂದು ಅನಿ ವಾರ್ಯವಾಗಿತ್ತು.

ಹಿಜರೀ ಶಕ ಅರ್ವತ್ತೂಂದರ ಮೊಹರಂ ತಿಂಗಳ ಹತ್ತರಂದು ಇರಾಕ್‌ ದೇಶದ ಯು ಪ್ರಟಿಸ್‌ ನದಿ ತೀರದ ಕರ್ಬಲಾ ಮೈದಾನದಲ್ಲಿ ಯಝೀದನ ಅಸಂಖ್ಯಾಕ ಸೈನಿಕರನ್ನು ಹಝರತ್‌ ಇಮಾಂ ಹುಸೇನರು ಕೇವಲ ತನ್ನ ಎಪ್ಪತ್ತೆರಡು ಮಂದಿ ಅನುಯಾಯಿಗಳಿಂದ ಎದುರಿಸಿದರು. ಈ ಕದನದಲ್ಲಿ ಸೋಲು ತನ್ನ ಪಾಲಿಗೆ ಖಚಿತವೆಂದು ಇಮಾಂ ಹುಸೇನರು ಭಾವಿಸಿದ್ದರೂ ಅದು ಸತ್ಯ, ನ್ಯಾಯ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆಸಿದ ಅಭೂತ ಪೂರ್ವ ಕದನ ವಾಗಿತ್ತು. ಹಝರತ್‌ ಇಮಾಂ ಹುಸೇನರು ಕರ್ಬಲಾ ರಣಾಂಗಣದಲ್ಲಿ ವೀರಾ ವೇಶದಿಂದ ಹೋರಾಡಿ ಮೊಹರ್ರಂ ಹತ್ತರಂದು ಹುತಾತ್ಮರಾದರು. ಹಝರತ್‌ ಇಮಾಂ ಹುಸೇ ನರು, ಇಸ್ಲಾಮಿನ ಉನ್ನತ ಮೌಲ್ಯಗಳ ಸಂಸ್ಥಾ ಪನೆಗಾಗಿ ವೀರಾವೇಶದ ಹೋರಾಟದ ಮೂಲಕ ಅಮರ ಜ್ಯೋತಿ ಯೊಂದನ್ನು ಹೊತ್ತಿಸಿ ಹೋದರು. ಅವರು ಹುತಾತ್ಮರಾಗಿ ಇಂದು ಸಾವಿರದ ನಾಲ್ಕೂರು ವರ್ಷಗಳು ಸಂ ದರೂ ಆ ಜ್ಯೋತಿಯು ಇನ್ನೂ ನಂದದೇ ಅಮ ರವಾಗಿಯೇ ಉಳಿದಿದೆ.

ಪ್ರವಾದಿ ಇಬ್ರಾಹಿಮರು ಇರಾಕ್‌ ದೇಶದ ಆಗಿನ ರಾಜನಾಗಿದ್ದ ದುಷ್ಟ ನಮೂದನ ನಿರಂಕುಶ ಪ್ರಭುತ್ವಕ್ಕೆ ಮಣಿಯದಿರಲು ಅವರನ್ನು ಉರಿಯುವ ಅಗ್ನಿಕುಂಡಕ್ಕೆ ದೂಡಿ ಕೊಲ್ಲಲು ಯತ್ನಿಸಿದಾಗ ಪ್ರವಾದಿ ಇಬ್ರಾಹಿ ಮರು ಪವಾಡಸದೃಶರಾಗಿ ಈ ಅನಾ ಹುತದಿಂದ ಪಾರಾಗಿ, ಮನುಕುಲಕ್ಕೆ ಸತ್ಯ ಮತ್ತು ನ್ಯಾಯವನ್ನು ಲೀಲಾಜಾಲವಾಗಿ ತೋರಿಸಿ ಕೊಟ್ಟದ್ದು ಮೊಹರಂ ಹತ್ತರಂದು. ಪ್ರವಾದಿ ಮೂಸಾರವರ ಬೋಧನೆಗಳನ್ನು ಧಿಕ್ಕರಿಸಿ ನಡೆದ, ಸರ್ವಾಧಿಕಾರಿ ಫಿರ್‌ಔನನು, ನೈಲ್‌ ನದಿಯಲ್ಲಿ ನಾಶವಾದ ದಿನವೂ ಮೊಹರಂ ಹತ್ತರಂದು. ಒಟ್ಟಿನಲ್ಲಿ ಇತಿಹಾಸದುದ್ದಕ್ಕೂ ವಿಪತ್ತುಗಳು, ವಿನಾಶಗಳು ಮತ್ತು ಅನುಗ್ರಹಗಳು ಘಟಿಸಿ ಹೋದ ದಿನ ಮೊಹರಂ ಹತ್ತು. ಮೊಹರಂ ಹತ್ತು ನಿರಂಕುಶ ಪ್ರಭುತ್ವಕ್ಕೆ ಕೊಡಲಿ ಏಟನ್ನಿತ್ತ ಚಾರಿತ್ರಿಕ ದಿನವೂ, ಪ್ರಜಾಸತ್ತೆಯ ಅಭೂತಪೂರ್ವ ವಿಜ ಯದ ದಿನವೂ ಆಗಿದೆ. ಹಝರತ್‌ ಇಮಾಂ ಹುಸೇನರ ಆದರ್ಶ ಜೀವನ ಮತ್ತು ಸ್ವಾಭಿ ಮಾನದ ಪ್ರತಿಷ್ಠೆಯು ಮಾನವ ಬದುಕಿಗೆ ಸದಾ ಮಾರ್ಗದರ್ಶನ ನೀಡಬಲ್ಲದು.

 ಕೆ.ಪಿ. ಅಬ್ದುಲ್‌ ಖಾದರ್‌ , ಕುತ್ತೆತ್ತೂರು

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.