
Cauvery: ನಾಳೆ ಕರ್ನಾಟಕ ಬಂದ್- ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲವೂ ಸ್ಥಗಿತ ಸಾಧ್ಯತೆ
ಪರೀಕ್ಷೆ ಮುಂದೂಡಿಕೆ - ಕೆಎಸ್‌ಆರ್‌ಟಿಸಿ ಇಂದು ನಿರ್ಧಾರ
Team Udayavani, Sep 28, 2023, 12:26 AM IST

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ನಡೆದ ಬೆಂಗಳೂರು ಬಂದ್ ಯಶಸ್ವಿಯಾದ ಬೆನ್ನಲ್ಲೇ ಕನ್ನಡಪರ ಸಂಘಟನೆಗಳ ಒಕ್ಕೂಟದ ಕರೆ ಮೇರೆಗೆ ಸೆ. 29ರ ಶುಕ್ರ ವಾರ ಕರ್ನಾಟಕ ಬಂದ್ ನಡೆಯಲಿದ್ದು, ಅಂದು ಇಡೀ ರಾಜ್ಯವ್ಯಾಪಿ ತುರ್ತು/ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಬಹುತೇಕ ಎಲ್ಲ ಸೇವೆಗಳು ಸ್ಥಗಿತಗೊಳ್ಳಲಿವೆ.
ಬಂದ್ ಹಿನ್ನೆಲೆಯಲ್ಲಿ ಅಂದು ನಡೆಯಬೇಕಾಗಿದ್ದ ಹಲವು ಪರೀಕ್ಷೆಗಳನ್ನು ಕಾಲೇಜುಗಳು ಹಾಗೂ ವಿವಿಗಳು ಮುಂದೂಡಿವೆ. ಖಾಸಗಿ ಕಾಲೇಜುಗಳು ರಜೆ ಘೋಷಿಸುವ ಸಾಧ್ಯತೆಗಳಿವೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರದ ಬಗ್ಗೆ ಗುರುವಾರ ನಿರ್ಧಾರವಾಗಲಿದೆ. ಅಂದು ಆಟೋ, ಊಬರ್, ಟ್ಯಾಕ್ಸಿ, ಖಾಸಗಿ ವಾಹನಗಳು ರಸ್ತೆಗಿಳಿಯುವುದಿಲ್ಲ. ಹೀಗಾಗಿ ಸಂಚಾರ ಸಂಪೂರ್ಣ ಸ್ತಬ್ಧವಾಗಲಿದೆ. ಹೋರಾಟಗಾರರು ಹೆದ್ದಾರಿ ಬಂದ್ ಹಾಗೂ ರೈಲು ಸಂಚಾರಕ್ಕೆ ತಡೆ ಉಂಟುಮಾಡುವ ಸಾಧ್ಯತೆಗಳಿವೆ.
ಮಂಗಳವಾರ ಕಾವೇರಿ ನೀರು ನಿಯಂತ್ರಣ ಸಮಿತಿ 18 ದಿನಗಳ ಕಾಲ ಪ್ರತಿನಿತ್ಯ 3 ಸಾವಿರ ಕ್ಯುಸೆಕ್ ನೀರು ಹರಿಸಲು ಆದೇಶಿಸಿರುವುದು ಕನ್ನಡಿಗರನ್ನು ಕೆರಳಿಸಿದ್ದು, ಹೋರಾಟದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ 200ಕ್ಕೂ ಹೆಚ್ಚು ಸಂಘಟನೆಗಳು ಕರ್ನಾಟಕ ಬಂದ್‌ಗೆ ಬೆಂಬಲ ನೀಡಿವೆ. ಅಲ್ಲದೆ ಜೆಡಿಎಸ್, ಬಿಜೆಪಿ ಕೂಡ ಬೆಂಬಲ ವ್ಯಕ್ತಪಡಿಸಿವೆ. ಮತ್ತೂಂದೆಡೆ 3 ದಿನಗಳ ಅಂತರದಲ್ಲಿ ಎರಡು ಬಂದ್ ಸಾಧ್ಯವಿಲ್ಲ ಎಂದು ಬೆಂಗಳೂರು ಬಂದ್‌ಗೆ ಸಹಕಾರ ನೀಡದ ಹೊಟೇಲ್ ಮಾಲಕರ ಸಂಘ, ಓಲಾ, ಊಬರ್ ಚಾಲಕರು ಮತ್ತು ಮಾಲಕರ ಸಂಘ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಹಿತ ಕೆಲವು ಸಂಘಟನೆಗಳು ಶುಕ್ರವಾರದ ಬಂದ್‌ಗೆ ಸಹಕಾರ ನೀಡಿವೆ.
ಸುಪ್ರೀಂನಲ್ಲಿ ಪ್ರಶ್ನೆ
ಕಾವೇರಿ ನೀರು ನಿರ್ವಹಣ ಸಮಿತಿ ನಿರ್ದೇಶನವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ತಮಿಳುನಾಡಿಗೆ ಬಿಡಲು ನಮ್ಮಲ್ಲಿ ನೀರಿಲ್ಲ. ಈ ಸಂಬಂಧ ಕಾನೂನು ತಜ್ಞರ ಜತೆ ಚರ್ಚಿಸಿದ್ದೇವೆ. ನೀರು ಹಂಚಿಕೆ ವಿಷಯದಲ್ಲಿ ಯಾವುದೇ ರಾಜಿಯಿಲ್ಲ ಎಂದು ಅವರು ಮಲೆ ಮಹದೇಶ್ವರ ಬೆಟ್ಟದಲ್ಲಿ ಹೇಳಿದರು.
ಬಿಜೆಪಿ-ಜೆಡಿಎಸ್ ಜಂಟಿ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಬುಧವಾರ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಧರಣಿ ನಡೆಸಿತು. ಬಿ.ಎಸ್. ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ಎರಡೂ ಪಕ್ಷಗಳ ಮಾಜಿ ಸಚಿವರು, ಶಾಸಕರು, ಪರಿಷತ್ ಸದಸ್ಯರು, ಸಂಸದರು ಭಾಗಿಯಾಗಿದ್ದರು.
ರಾಜ್ಯ ಸರಕಾರ ತಮಿಳುನಾಡಿನ ಏಜೆಂಟರಂತೆ ವರ್ತಿಸುತ್ತಿದೆ. ನಾಡಿನ ಜನರ ಹಿತದೃಷ್ಟಿಯಿಂದ ಜೆಡಿಎಸ್-ಬಿಜೆಪಿ ಹೋರಾಟ ನಡೆಸುತ್ತದೆ.
-ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ
ಕಾವೇರಿ ವಿಷಯವನ್ನು ಮುಖ್ಯ ಮಂತ್ರಿಗಳು ರಾಜಕೀಯಕ್ಕೆ ಬಳಸಿಕೊಳ್ಳು ತ್ತಿದ್ದಾರೆ. ಸರ್ವಪಕ್ಷ ಸಭೆಯಲ್ಲಿ ನಾವು ಹೇಳಿದ್ದನ್ನು ಇವರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿವೃತ್ತ ಮೆಸ್ಕಾಂ ಇಂಜಿನಿಯರ್ ಮನೆಗೆ ಕನ್ನ… 9ಲಕ್ಷ ರೂ. ಮೌಲ್ಯದ ನಗನಗದು ದೋಚಿದ ಕಳ್ಳರು

ಸೋಲದೇವನಹಳ್ಳಿ: ಲೀಲಾವತಿ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟಿಸಿದ ಡಿಕೆ ಶಿವಕುಮಾರ್

M.C Ashwath: ಚನ್ನಪಟ್ಟಣದ ಮಾಜಿ ಶಾಸಕ ಎಂ.ಸಿ.ಅಶ್ವಥ್ ಗೆ ಮಾತೃ ವಿಯೋಗ

KHB ನಿವೇಶನ ಖಾಲಿ ಬಿಟ್ಟರೆ “ದಂಡ’ ಪ್ರಯೋಗ

Abortions ಮಾಡಿಸಿಕೊಂಡವರಿಗೂ ಕಂಟಕ; ಭ್ರೂಣ ಹತ್ಯೆ ಮಾಡಿಸಿಕೊಂಡವರ ಮಾಹಿತಿ ಸಂಗ್ರಹ
MUST WATCH
ಹೊಸ ಸೇರ್ಪಡೆ

Kannada Cinema; ಹೊಸ ಸಿನಿಮಾದಲ್ಲಿ ಮಾನ್ವಿತಾ

Tamil Nadu ವಿ ಸೆಂಥಿಲ್ ಬಾಲಾಜಿಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

30 ರ ವಯಸ್ಸಿನಲ್ಲಿ ಮಾರಿ ಸೆಲ್ವರಾಜ್ ಸಹಾಯಕ ನಿರ್ದೇಶಕ ನಿಧನ: ಅತಿಯಾದ ಧೂಮಪಾನವೇ ಕಾರಣ?

T20 World Cup; ಸತತ ಮೂರನೇ ಬಾರಿಗೆ ಅರ್ಹತೆ ಪಡೆದ ನಮೀಬಿಯಾ

Gangavati: ಕಾಂತರಾಜ್ ವರದಿ ಅನುಷ್ಠಾನ,ಮುಸ್ಲಿಮರಿಗೆ ಶೇ.8 ರಷ್ಟು ಮೀಸಲಾತಿ ಕಲ್ಪಿಸಲು ಮನವಿ