
ಅಮೆರಿಕದ ಈಶಾನ್ಯ ಭಾಗಕ್ಕೆ ಶೀತ ಮಾರುತ ಪ್ರಕೋಪ: – 46 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ತಾಪಮಾನ
Team Udayavani, Feb 4, 2023, 8:19 PM IST

ಮಸ್ಯಾಚ್ಯುಸೆಟ್ಸ್: ಅಮೆರಿಕದ ಈಶಾನ್ಯ ಭಾಗದಲ್ಲಿ ಭಾರೀ ಶೀತ ಮಾರುತ ಕಾಣಿಸಿಕೊಂಡಿದೆ. ಶುಕ್ರವಾರ ನಡೆದ ಈ ಬೆಳವಣಿಗೆಯಿಂದಾಗಿ ತಾಪಮಾನ ಮೈನಸ್ 46 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.
ನ್ಯೂಯಾರ್ಕ್, ಮಸ್ಯಾಚ್ಯುಸೆಟ್ಸ್, ಕೆನೆಕ್ಟಿಕಟ್, ರೋಹೆxà ಐಲ್ಯಾಂಡ್, ನ್ಯೂ ಹೆಮಿಸ್ಪಿಯರ್, ವೆಮೌìಂಟ್ ಮತ್ತು ಮೈನ್‌ಗಳಲ್ಲಿ ಶೀತ ಮಾರುತದ ಪ್ರಕೋಪದಿಂದಾಗಿ 1.6 ಕೋಟಿ ಮಂದಿಗೆ ತೊಂದರೆಯಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಅಮೆರಿಕದ ಹವಾಮಾನ ಸಂಸ್ಥೆ, ನ್ಯಾಷನಲ್ ವೆದರ್ ಸರ್ವಿಸ್ (ಎನ್‌ಡಬ್ಲೂéಎಸ್) ಸದ್ಯ ಕಾಣಿಸಿಕೊಂಡಿರುವ ಹೆಪ್ಪುಗಟ್ಟುವ ಪರಿಸ್ಥಿತಿ ತಾತ್ಕಾಲಿಕವಾಗಿದೆ. ಆದರೆ, ಮರಗಟ್ಟುವ ಪರಿಸ್ಥಿತಿಗೆ ತೆರೆದುಕೊಂಡರೆ ಜೀವ ನಷ್ಟ ಉಂಟಾಗಲಿದೆ ಎಂದು ಅದು ಎಚ್ಚರಿಕೆ ನೀಡಿದೆ.
ಬೋಸ್ಟನ್ ಮತ್ತು ವೊರ್ಸ್‌ಸ್ಟರ್‌ಗಳಲ್ಲಿ ಶಾಲೆಗಳಿಗೆ ಶೀತ ಮಾರುತದ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದೆ. ಬೋಸ್ಟನ್ ನಗರದಲ್ಲಿ ಮೇಯರ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ವಾಣಿ ಜಯರಾಂ ನಿಗೂಢ ಮೃತ್ಯು; ಪ್ರಕರಣ ದಾಖಲಿಸಿಕೊಂಡ ಪೊಲೀಸರು
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಹುಣಸೂರು: ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ

ಕಾಡಾನೆಯ ಹನಿಟ್ರ್ಯಾಪ್: ತೀರ್ಥಹಳ್ಳಿ ಪಟ್ಟಣಕ್ಕೆ ನುಗ್ಗಿದ್ದ ಕಾಡಾನೆಯ ಸೆರೆಯಾಗಿಸಿದ ಭಾನುಮತಿ

ಅಗ್ನಿ ಆಕಸ್ಮಿಕ: ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಬೆಂಕಿಗಾಹುತಿ

ಚಿತ್ರ ವಿಮರ್ಶೆ: ‘ಹೊಯ್ಸಳ’ ಸಾಮ್ರಾಜ್ಯದಲ್ಲಿ ಆ್ಯಕ್ಷನ್ ಅಬ್ಬರ

ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಜ್ಯೂರಿ ಮೆಚ್ಚುಗೆಯ ಪ್ರಶಸ್ತಿ ಪಡೆದ ‘ಇನ್’