
ಶಿಕ್ಷಕರ ವರ್ಗಾವಣೆ: ಮೂರು ವರ್ಷ ಸೇವೆ ಸಲ್ಲಿಸಿದವರ ಪರಿಗಣನೆಗೆ ನಿರ್ಧಾರ
Team Udayavani, Feb 9, 2023, 7:15 AM IST

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ ಘಟಕ/ವಿಭಾಗದ ಹೊರಗೆ ಪರಸ್ಪರ ವರ್ಗಾವಣೆಗೆ ಸೇವಾ ವಧಿ ವೃಂದದಲ್ಲಿ ಕನಿಷ್ಠ 5 ವರ್ಷಗಳ ಸೇವೆ ಪೂರ್ಣ ಗೊಂಡಿರಬೇಕು. ಜತೆಗೆ ಕರ್ತವ್ಯನಿರತ ಸ್ಥಳ ದಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರುವ ಪ್ರಕರಣ ಗಳನ್ನು ಮಾತ್ರ ಪರಿಗಣಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯಕ್ತರು ನಿರ್ದೇಶನ ನೀಡಿದ್ದಾರೆ.
2022-23ನೇ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸಂಬಂಧ ವರ್ಗಾವಣ ಪ್ರಾಧಿಕಾರಗಳು ಕೆಲವು ಅಂಶಗಳ ಬಗ್ಗೆ ಮಾರ್ಗದರ್ಶನ ಕೋರಿದ ಹಿನ್ನೆಲೆಯಲ್ಲಿ ಆಯುಕ್ತರು ಈ ಮಾಹಿತಿ ನೀಡಿದ್ದಾರೆ. ಸೇವಾವಧಿಯಲ್ಲಿ ಒಮ್ಮೆ ಆದ್ಯತೆಯ ಮೇಲೆ ವರ್ಗಾವಣೆ ಪಡೆಯಬಹುದು. ಇದು ಹೆಚ್ಚುವರಿ ವರ್ಗಾವಣೆಗೆ ಅನ್ವಯವಾಗದು.
ಪತಿ-ಪತ್ನಿ ಪ್ರಕರಣದಲ್ಲಿ ಒಬ್ಬರು ಒಂದು ಜಿಲ್ಲೆ ಯಿಂದ ಹೊರಗೆ ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಅಂಥವರಿಗೆ ಹೆಚ್ಚುವರಿಯಲ್ಲಿ ಆದ್ಯತೆ ಕೊಡಬ ಹುದು. ಜಿಪಿಟಿ ಹಾಗೂ ಪಿಎಸ್‌ಟಿ ಶಿಕ್ಷಕರಿಗೆ ಅವರ ನೇಮಕ ಆದೇಶದಲ್ಲಿ 5 ವರ್ಷ ಅಥವಾ 10 ವರ್ಷ ಅದೇ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ಷರತ್ತು ವಿಧಿಸಿದ್ದಲ್ಲಿ ನೇಮಕ ಆದೇಶದಲ್ಲಿರುವ ಷರತ್ತಿನ ಅನ್ವಯ ಪರಿಗಣಿಸಬೇಕು.
ಸೇವಾ ಹಿರಿತನದ ಮೇಲೆ ಪರಿಗಣಿಸುವು ದಾದರೆ, ಶಿಕ್ಷಕರು ಒಂದೇ ದಿನ ಕರ್ತವ್ಯಕ್ಕೆ ಹಾಜರಾ ಗಿದ್ದಲ್ಲಿ ಜನ್ಮ ದಿನಾಂಕವನ್ನು ಪರಿಗಣಿಸಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿವಮೊಗ್ಗದಲ್ಲಿ 1.40 ಕೋಟಿ ರೂ.ವಶ; ತರೀಕೆರೆಯಲ್ಲಿ 6 ಕೋಟಿ ರೂ. ಮೌಲ್ಯದ ಚಿನ್ನ ವಶ

ರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿವಾದ; ಬಿಜೆಪಿ ಶಾಸಕ ಶರಣು ಸಲಗರ ಕ್ಷಮೆ

ಎಲೆಕ್ಟ್ರಿಕ್ ಸ್ಕೂಟರ್ ಏಕಾಏಕಿ ಸ್ಫೋಟ; ಅಕ್ಕಪಕ್ಕದಲ್ಲಿದ್ದ ನಾಲ್ಕು ಬೈಕ್‌ಗಳು ಭಸ್ಮ

ಕಲಬುರಗಿಯಲ್ಲಿ ಬಂಜಾರಾ ಸಮುದಾಯದ ಬೃಹತ್ ಪ್ರತಿಭಟನೆ

ವರುಣಾ ಕ್ಷೇತ್ರದಲ್ಲಿ ಸಿದ್ದು ವಿರುದ್ಧ ವಿಜಯೇಂದ್ರ ಸ್ಪರ್ಧಿಸಲಿದ್ದಾರಾ ?