ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಟ್ರೆಂಟ್ ಬೌಲ್ಟ್ ಆಗಮನ
Team Udayavani, Jun 7, 2021, 10:05 PM IST
ಬರ್ಮಿಂಗ್ಹ್ಯಾಮ್: ನ್ಯೂಜಿಲ್ಯಾಂಡ್ ವೇಗಿ ಟ್ರೆಂಟ್ ಬೌಲ್ಟ್ ಇಂಗ್ಲೆಂಡ್ ಎದುರಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಡಲಿಳಿಯಲಿದ್ದಾರೆ ಎಂದು ತಂಡದ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.
ಐಸೊಲೇಶನ್ನಲ್ಲಿರುವ ಕಾರಣ ಟ್ರೆಂಟ್ ಬೌಲ್ಟ್ ಅವರಿಗೆ ಮೊದಲ ಟೆಸ್ಟ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಬ್ರಿಟನ್ ಸರಕಾರ ಕ್ವಾರಂಟೈನ್ ನಿಯಮವನ್ನು ಸಡಿಲುಗೊಳಿಸಿದ್ದರಿಂದ ಬೌಲ್ಟ್ ನಿರೀಕ್ಷೆಗಿಂದ 3-4 ದಿನ ಮೊದಲೇ ಐಸೊಲೇಶನ್ನಿಂದ ಹೊರಬರಲು ಸಾಧ್ಯವಾಗಿದೆ.
ಇದರಿಂದ ಟ್ರೆಂಟ್ ಬೌಲ್ಟ್ ಅವರಿಗೆ ಭಾರತದೆದುರಿನ ವಿಶ್ವಕಪ್ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ಉತ್ತಮ ಅಭ್ಯಾಸ ಲಭಿಸಿದಂತಾಗುತ್ತದೆ. ದ್ವಿತೀಯ ಟೆಸ್ಟ್ ಇಲ್ಲಿನ ಎಜ್ಬಾಸ್ಟನ್ ಅಂಗಳದಲ್ಲಿ ಜೂ. 10ರಂದು ಆರಂಭವಾಗಲಿದೆ.
ಇದನ್ನೂ ಓದಿ :ಬಗೆಹರಿದ ವೀಸಾ ಸಮಸ್ಯೆ : ಪೋರ್ಚುಗಲ್ ತಲುಪಿದ ನೀರಜ್ ಚೋಪ್ರಾ
ಲಾರ್ಡ್ಸ್ ಟೆಸ್ಟ್ ಡ್ರಾ
ನಿರೀಕ್ಷೆಯಂತೆ ಇಂಗ್ಲೆಂಡ್-ನ್ಯೂಜಿ ಲ್ಯಾಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಗೆಲುವಿಗೆ 273 ರನ್ ಗುರಿ ಪಡೆದಿದ್ದ ಇಂಗ್ಲೆಂಡ್, 3 ವಿಕೆಟಿಗೆ 170 ಮಾಡಿತ್ತು. ಚೊಚ್ಚಲ ಟೆಸ್ಟ್
ನಲ್ಲೇ ದ್ವಿಶತಕ ಬಾರಿಸಿದ ಡೇವನ್ ಕಾನ್ವೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ