
ಅವಶೇಷಗಳಡಿಯಲ್ಲಿ ನಿಲ್ಲದ ಆಕ್ರಂದನ!
ಟರ್ಕಿ, ಸಿರಿಯಾದಲ್ಲಿ ಭೂಕಂಪ ಸಂಭವಿಸಿ ಎರಡು ದಿನಗಳು ಕಳೆದರೂ ನಿಲ್ಲದ ಆತಂಕ
Team Udayavani, Feb 9, 2023, 6:55 AM IST

ಇಸ್ತಾಂಬುಲ್: ಅವಶೇಷಗಳಡಿಯಲ್ಲಿ ಸಿಕ್ಕಿಬಿದ್ದಿರುವ ಜೀವಗಳ ಆಕ್ರಂದನ, ಕಾಪಾಡುವ ಮನಸ್ಸಿದ್ದರೂ ಕೈಚಾಚಲಾಗದ ಅಸಹಾಯಕತೆ. ಇದೆಲ್ಲದರ ನಡುವೆಯೂ ಕಾರ್ಯಾಚರಣೆಗಳ ಮೂಲಕ ಕಾಪಾಡಿದ ಜೀವಗಳು ಕಣ್ಣೆದುರು ಬಂದಾಗ, ಸಂಬಂಧಗಳನ್ನೂ ಮೀರಿ ಜನರು ಕಂಬನಿ ಮಿಡಿಯುತ್ತಿದ್ದಾರೆ.
ವಿಶ್ವವನ್ನೇ ಬೆಚ್ಚಿಬೀಳಿಸಿದ ಟರ್ಕಿ-ಸಿರಿಯಾದಲ್ಲಿ ಅವಶೇಷಗಳ ಅಡಿಯಲ್ಲಿ ಎಷ್ಟೋ ಜೀವಗಳ ಉಸಿರು ನಿಂತರೆ, ಮತ್ತೆಷ್ಟೋ ಜೀವಗಳು ಮರುಜೀವ ಪಡೆದುಕೊಂಡಿವೆ.
2 ದಿನದ ಬಳಿಕ ಕುಟುಂಬ ಪಾರು: ಸಿರಿಯಾದ ಬಿಸಿನಿಯಾ ಗ್ರಾಮದ ಕಟ್ಟಡವೊಂದು ಕುಸಿದು ಇಡೀ ಕುಟುಂಬ ಅವಶೇಷಗಳ ಅಡಿಯಲ್ಲಿ ಸಿಲುಕಿತ್ತು. ಸತತ 2 ದಿನಗಳ ಕಾರ್ಯಾಚರಣೆ ಬಳಿಕ ಕುಟುಂಬವನ್ನು ಜೀವಂ ತವಾಗಿ ಹೊರತೆಗೆಯಲಾಗಿದ್ದು, ಕುಟುಂಬದಲ್ಲಿದ್ದ ಮಗುವನ್ನು ಎತ್ತಿ ಹಿಡಿದು ರಕ್ಷಣ ತಂಡ ಸಂತಸ ವ್ಯಕ್ತ ಪಡಿಸಿದೆ.
55 ಗಂಟೆ ಅನಂತರ ಶ್ವಾನದ ರಕ್ಷಣೆ: ಭೂಕಂಪವಾದ 55 ಗಂಟೆಗಳ ಬಳಿಕ ಟರ್ಕಿಯ ಹ್ಯಾತೆನಲ್ಲಿ ಅವಶೇಷಗಳಡಿ ಸಿಲುಕಿಕೊಂಡಿದ್ದ ಶ್ವಾನವನ್ನು ಜೀವಂತವಾಗಿ ರಕ್ಷಿಸಲಾಗಿದೆ.ಶ್ವಾನಕ್ಕೆ ಚಿಕಿತ್ಸೆಯನ್ನೂ ಸಿಬಂದಿ ನೀಡಿದ್ದಾರೆ.
100 ಬಾರಿ ಭೂಕಂಪ: ಕಳೆದ 2 ದಿನಗಳಲ್ಲಿ ಟರ್ಕಿಯಲ್ಲಿ 100 ಬಾರಿ ಭೂಕಂಪವಾಗಿದ್ದು, 81 ಬಾರಿ 4ರ ತೀವ್ರತೆ ಯಲ್ಲಿ, 20 ಬಾರಿ 5ರ ತೀವ್ರತೆಯಲ್ಲಿ ಭೂಕಂಪ ಸಂಭವಿಸಿವೆ.
ಶವಗಳ ಗುರುತಿಗೂ ಪರದಾಟ: ಹ್ಯಾತೆ ಆಸ್ಪತ್ರೆಯ ಹೊರಾಂಗಣದಲ್ಲಿ ನೂರಾರು ಶವಗಳನ್ನು ಇರಿಸಲಾಗಿದ್ದು, ಸಂಬಂಧಿಕರು ತಮ್ಮ ಕುಟುಂಬದವರ ಶವ ಹುಡಕಲು ಪರದಾಡುವಂತಾಗಿದೆ.
45 ಗಂಟೆ ಬಳಿಕ ಬಾಲಕ ಪಾರು
ಸಿರಿಯಾ ಮೂಲದ ಬಾಲಕ ಮೊಹಮ್ಮದ್ ಕಟ್ಟಡದಡಿ ಸಿಲುಕಿದ್ದು, 45 ಗಂಟೆಗಳ ಬಳಿಕ ಆತನನ್ನು ಹೊರತೆಗೆಯಲಾಗಿದೆ. ಅದಕ್ಕೂ ಮುನ್ನ ರಕ್ಷಣ ತಂಡ ಮಗುವಿಗೆ ಬಾಟಲ್ ಕ್ಯಾಪ್‌ನಲ್ಲಿ ನೀರು ಕುಡಿಸಿದ್ದು ಈ ದೃಶ್ಯ ಎಲ್ಲ ಕರುಳು ಹಿಂಡಿದಂತಾಗಿದೆ.
ತಂದೆಯನ್ನು ಬದುಕಿಸಿ ಎಂದಳು: ಕಟ್ಟಡದ ಅಡಿ ಸಿಲುಕಿದ್ದ ಬಾಲಕಿಯೊಬ್ಬಳನ್ನು ಸಿಬಂದಿ ರಕ್ಷಿಸಿದ್ದು ಆಕೆ ಹೊರಬರುತ್ತಿದ್ದಂತೆ ತನ್ನ ತಂದೆಯನ್ನು ಬದುಕಿಸಿ ಎಂದು ಕೇಳಿದ್ದಾಳೆ.ಆಕೆಯ ತಂದೆಯನ್ನೂ ಸಿಬಂದಿ ಹೊರತೆಗೆದಿದ್ದಾರೂ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆ ತಂದೆ-ಮಗಳು ಇಬ್ಬರೂ ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಮೇರು ಗಾಯಕ; ಕಿರಾಣಾ ಘರಾಣಾ ಶೈಲಿಯ ಕೊಂಡಿ ಜಯತೀರ್ಥ ಮೇವುಂಡಿ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ನೀತಿ ಸಂಹಿತೆ ಉಲ್ಲಂಘನೆ: ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಎಫ್ ಐಆರ್

ದೊಡ್ಡಣಗುಡ್ಡೆ ‘ಭವಾನಿ ರೆಸಿಡೆನ್ಸಿ’ ವಸತಿ ಸಮುಚ್ಚಯ ಮಾ. 31ರಂದು ಉದ್ಘಾಟನೆ

ಉಡುಪಿ: ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ