ಕನಿಷ್ಠ 2,700 ಮಂದಿ ಸಾವು; 24 ತಾಸುಗಳ ಅವಧಿಯಲ್ಲಿ ಹಲವು ಬಾರಿ ಪಶ್ಚಾತ್‌ ಕಂಪನ

ಟರ್ಕಿ, ಸಿರಿಯಾದಲ್ಲಿ 7.8, 7.6 ತೀವ್ರತೆಯ ಅವಳಿ ಭೂಕಂಪ

Team Udayavani, Feb 7, 2023, 6:55 AM IST

ಕನಿಷ್ಠ 2,700 ಮಂದಿ ಸಾವು; 24 ತಾಸುಗಳ ಅವಧಿಯಲ್ಲಿ ಹಲವು ಬಾರಿ ಪಶ್ಚಾತ್‌ ಕಂಪನ

ಇಸ್ತಾಂಬುಲ್‌/ಅಜ್ಮರಿನ್‌: ನೈಋತ್ಯ ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪಗಳಿಂದ ಕನಿಷ್ಠ 2,700 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಸೋಮವಾರ ಬೆಳಗಿನ ಜಾವ 4.17ಕ್ಕೆ ಬಹುತೇಕರು ಮುಂಜಾನೆಯ ಸವಿನಿದ್ರೆಯಲ್ಲಿದ್ದಾಗಲೇ ಭೂಮಿತಾಯಿ ರುದ್ರನರ್ತನಗೈದಿದ್ದು, ಕಣ್ಣುಬಿಡುವ ಮೊದಲೇ ಸಾವಿರಾರು ಮಂದಿ ಮಣ್ಣಾಗಿದ್ದಾರೆ. ಇನ್ನೂ ನೂರಾರು ಮಂದಿ ಅವಶೇಷಗಳಡಿ ಸಿಲುಕಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಎಲ್ಲ ಸಾಧ್ಯತೆಗಳು ಇವೆ.

ಸ್ಥಳೀಯ ಕಾಲಮಾನ ಮುಂಜಾನೆ 4.17ಕ್ಕೆ ಮೊದಲ ಭೂಕಂಪ ಸಂಭವಿಸಿದರೆ, ಕೆಲವೇ ತಾಸುಗಳ ಬಳಿಕ 7.5ರ ತೀವ್ರತೆಯಲ್ಲಿ ಮತ್ತೂಂದು ಭೂಕಂಪ ಉಂಟಾಗಿದೆ. ಸೂರ್ಯ ಮುಳುಗುವ ಹೊತ್ತಿಗೆ ಮತ್ತೊಂದು ಬಾರಿ ಭೂಮಿ ಕಂಪಿಸಿದೆ. ಇದಲ್ಲದೆ 50ಕ್ಕೂ ಅಧಿಕ ಪಶ್ಚಾತ್‌ ಕಂಪನಗಳು ಸಂಭವಿಸಿವೆ. ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ ಟರ್ಕಿಯಿಂದ ಸುಮಾರು 5,500 ಕಿ.ಮೀ. ದೂರದಲ್ಲಿರುವ ಗ್ರೀನ್‌ಲ್ಯಾಂಡ್ ನ‌ಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.

ಭೂಮಿಯು ಅಲುಗಾಡುತ್ತಿರುವ ಅನುಭವವಾಗುತ್ತಿದ್ದಂತೆ ಕೆಲವರು ಮನೆ, ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ. ಅವರ ಕಣ್ಣೆದುರೇ ಮನೆಗಳು, ಕಟ್ಟಡಗಳು, ಮರ ಗಳು ಧರೆಗುರುಳಿವೆ. ತೀವ್ರ ಚಳಿ ಹಾಗೂ ಮಂಜಿನ ಮಳೆಯ ನಡುವೆ ಅನೇಕರು ತಮ್ಮವರನ್ನು ರಕ್ಷಿಸಲು ಹೆಣಗಾಡುತ್ತಿದ್ದ, ಅವಶೇಷಗಳಡಿಯಿಂದ ಹೊರಗೆಳೆ ಯಲು ಯತ್ನಿಸುತ್ತಿದ್ದ ದೃಶ್ಯಗಳು ಮನಕಲಕುವಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಭಾರತದಿಂದ ರಕ್ಷಣ ತಂಡ ರವಾನೆ
ಭೂಕಂಪ ಪೀಡಿತ ರಾಷ್ಟ್ರಗಳಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ ಬೆನ್ನಲ್ಲೇ ಸರಕಾರವು ಟರ್ಕಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆಯ ಶೋಧ ಮತ್ತು ರಕ್ಷಣ ತಂಡಗಳು, ವೈದ್ಯಕೀಯ ತಂಡಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ತತ್‌ಕ್ಷಣವೇ ಕಳುಹಿಸಿಕೊಟ್ಟಿದೆ.

ಭೂಕಂಪದಿಂದ ಉಂಟಾದ ಅಪಾರ ಸಾವು ನೋವಿನ ಸುದ್ದಿ ಕೇಳಿ ದುಃಖವಾಯಿತು. ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳುತ್ತೇನೆ. ಟರ್ಕಿ ಮತ್ತು ಸಿರಿಯಾದ ಜನರಿಗೆ ಬೆಂಬಲವಾಗಿ ಭಾರತ ನಿಲ್ಲುತ್ತದೆ.
– ನರೇಂದ್ರ ಮೋದಿ, ಪ್ರಧಾನಿ

ಟಾಪ್ ನ್ಯೂಸ್

1-manipal-station

ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪ; ಐವರು ವಿದ್ಯಾರ್ಥಿಗಳು ವಶಕ್ಕೆ

tdy-2

ಕನಸಿನಲ್ಲಿ ʼಶ್ರೀಕೃಷ್ಣʼ ದೇವರನ್ನು ಕಂಡು ನಿದ್ದೆಯಿಂದ ಎಚ್ಚೆದ್ದ ಸಚಿವ.!

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

TDY-22

ಸ್ಟಾರ್ಟ್‌ಅಪ್‌ ಕನಸು ಹೊತ್ತವರ ಚಿತ್ರ: ಮೇಡ್ ಇನ್ ಬೆಂಗಳೂರು

TDY-1

ಆನ್ಲೈನ್‌ ನಲ್ಲಿ ವಿದ್ಯುತ್‌ ಬಿಲ್‌ ಕಟ್ಟಲು ಹೋಗಿ 7 ಲಕ್ಷ ರೂ. ಕಳೆದುಕೊಂಡ ಮಹಿಳೆ

ರಣದೀಪ್ ಸಿಂಗ್ ಸುರ್ಜೆವಾಲ ಇತಿಹಾಸವನ್ನು ಓದಿಕೊಳ್ಳಬೇಕು: ಸಿಎಂ ಬೊಮ್ಮಾಯಿ

ರಣದೀಪ್ ಸಿಂಗ್ ಸುರ್ಜೆವಾಲ ಇತಿಹಾಸವನ್ನು ಓದಿಕೊಳ್ಳಬೇಕು: ಸಿಎಂ ಬೊಮ್ಮಾಯಿ

Vijay Mallya bought personal assets worth crores abroad before fleeing India: CBI

ಬ್ಯಾಂಕ್ ಸಾಲ ತೀರಿಸಲು ಮಲ್ಯ ಬಳಿ ಸಾಕಷ್ಟು ಹಣವಿತ್ತು,ಆದರೂ.; ಚಾರ್ಜ್’ಶೀಟ್ ಸಲ್ಲಿಸಿದ ಸಿಬಿಐ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ased

ಅಮೆರಿಕದಲ್ಲೂ ಖಲಿಸ್ತಾನಿ ಪರ ಧ್ವನಿ ; ಭಾರತೀಯ ಹೈಕಮಿಷನ್ ಗೆ ಬಿಗಿ ಭದ್ರತೆ

1-weqwwqewe

ಕ್ಸಿಗೆ ಪುಟಿನ್ ವಿದಾಯ ಹೇಳುತ್ತಿದ್ದಂತೆ ರಷ್ಯಾದಿಂದ ಉಕ್ರೇನ್ ನಗರಗಳ ಮೇಲೆ ದಾಳಿ

ಉಡುಗೊರೆಗಳ ವಿವರ ಬಹಿರಂಗಕ್ಕೆ ಟ್ರಂಪ್‌ ವಿಫ‌ಲ; ಅಮೆರಿಕ ಸಂಸತ್‌ ಸಮಿತಿ ವರದಿ ಆರೋಪ

ಉಡುಗೊರೆಗಳ ವಿವರ ಬಹಿರಂಗಕ್ಕೆ ಟ್ರಂಪ್‌ ವಿಫ‌ಲ; ಅಮೆರಿಕ ಸಂಸತ್‌ ಸಮಿತಿ ವರದಿ ಆರೋಪ

imf

ಶ್ರೀಲಂಕಾಗೆ ಐಎಂಎಫ್ 3 ಬಿಲಿಯನ್‌ ಡಾಲರ್‌ ನೆರವು

ಯುಎಸ್‌ ಹಣಕಾಸು ಆಯೋಗಕ್ಕೆ ಭಾರತೀಯಳು ನಾಮನಿರ್ದೇಶನ

ಯುಎಸ್‌ ಹಣಕಾಸು ಆಯೋಗಕ್ಕೆ ಭಾರತೀಯಳು ನಾಮನಿರ್ದೇಶನ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

1-manipal-station

ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪ; ಐವರು ವಿದ್ಯಾರ್ಥಿಗಳು ವಶಕ್ಕೆ

tdy-2

ಕನಸಿನಲ್ಲಿ ʼಶ್ರೀಕೃಷ್ಣʼ ದೇವರನ್ನು ಕಂಡು ನಿದ್ದೆಯಿಂದ ಎಚ್ಚೆದ್ದ ಸಚಿವ.!

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

TDY-22

ಸ್ಟಾರ್ಟ್‌ಅಪ್‌ ಕನಸು ಹೊತ್ತವರ ಚಿತ್ರ: ಮೇಡ್ ಇನ್ ಬೆಂಗಳೂರು

TDY-1

ಆನ್ಲೈನ್‌ ನಲ್ಲಿ ವಿದ್ಯುತ್‌ ಬಿಲ್‌ ಕಟ್ಟಲು ಹೋಗಿ 7 ಲಕ್ಷ ರೂ. ಕಳೆದುಕೊಂಡ ಮಹಿಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.