ಉಡುಪಿ: 1,061; ದಕ್ಷಿಣ ಕನ್ನಡ: 770 ಮಂದಿಗೆ ಕೋವಿಡ್ ಸೋಂಕು
Team Udayavani, Jan 23, 2022, 10:57 PM IST
ಸಾಂದರ್ಭಿಕ ಚಿತ್ರ
ಉಡುಪಿ: ಜಿಲ್ಲೆಯಲ್ಲಿ ಮಂದಿ 1,061 ಮಂದಿಗೆ ಕೋವಿಡ್ ದೃಢಪಟ್ಟಿದೆ. 5,179 ಮಂದಿ ಪರೀಕ್ಷೆ ಮಾಡಲಾಗಿದ್ದು, 503 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 6,546 ಸಕ್ರಿಯ ಪ್ರಕರಣಗಳಿವೆ. 7,877 ಮಂದಿಗೆ ಮುಂಜಾಗ್ರತೆ ಲಸಿಕೆ ನೀಡಲಾಗಿದೆ ಎಂದು ಡಿಎಚ್ಒ ಪ್ರಕಟನೆ ತಿಳಿಸಿದೆ.
ದಕ್ಷಿಣ ಕನ್ನಡ: 770 ಮಂದಿಗೆ ಸೋಂಕು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ 770 ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.
841 ಜನರು ಗುಣ ಹೊಂದಿದ್ದಾರೆ. 5,628 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಸಿಟಿವಿಟಿ ದರ ಶೇ. 7.62ರಷ್ಟಿದೆ.
ರವಿವಾರ ಜಿಲ್ಲೆಯ ಎರಡು ಸರಕಾರಿ ಶಾಲೆಗಳಲ್ಲಿ ತಲಾ 5 ಮಂದಿ, ಒಂದು ಆಶ್ರಮದಲ್ಲಿ 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಇದನ್ನೂ ಓದಿ:ಚಾಮರಾಜನಗರದಲ್ಲಿ ಕೋವಿಡ್ ಪ್ರಕರಣಗಳ ಸ್ಫೋಟ : 752 ಪ್ರಕರಣ ದೃಢ, ಓರ್ವ ಸೋಂಕಿತ ಸಾವು
ಕಾಸರಗೋಡು: 630 ಮಂದಿಗೆ ಸೋಂಕು
ಕಾಸರಗೋಡು: ಜಿಲ್ಲೆಯಲ್ಲಿ ರವಿವಾರ 630 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. 511 ಮಂದಿ ಗುಣಮುಖರಾಗಿದ್ದಾರೆ. 4,448 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಡಗು: 1,139 ಪ್ರಕರಣ, 1 ಸಾವು
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ರವಿವಾರ ಒಂದೇ ದಿನ 1,139 ಹೊಸ ಸೋಂಕುಪೀಡಿತರು ಪತ್ತೆಯಾಗಿದ್ದಾರೆ.
ಪ್ರಸ್ತುತ ಶೇ. 33.95ರಷ್ಟು ಪಾಸಿಟಿವಿಟಿ ಇದ್ದು, 3,020 ಸಕ್ರಿಯ ಪ್ರಕರಣಗಳಿವೆ. 95 ಮಂದಿ ಗುಣಮುಖರಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.