ಮೈಸೂರು ಪ್ರಾಂತಗಳಲ್ಲಿ ಚಾಂದ್ರಮಾನ ಯುಗಾದಿ ಹೆಚ್ಚು ಪ್ರಸಿದ್ಧ..ಚಿರನವೀನವಾದ ಪ್ರಾಚೀನ ಯುಗಾದಿ


Team Udayavani, Mar 22, 2023, 7:30 AM IST

ಚಿರನವೀನವಾದ ಪ್ರಾಚೀನ ಯುಗಾದಿ

ವರ್ಷ ವರ್ಷವೂ ಹೊಸಹರ್ಷವನ್ನು ತರುವ ಯುಗಾದಿಯು ಅತಿಪುರಾತನ ಹಬ್ಬವಾದರೂ, ಅದು ತರುವ ಉತ್ಸಾಹ-ಉಲ್ಲಾಸಗಳು ನಿತ್ಯನೂತನ! ಒಣಗಿದೆಲೆಗಳನ್ನು ಉದುರಿಸಿ ಹೊಸಚಿಗುರುಗಳನ್ನು ತಳೆಯುವ ಚೈತ್ರರಥಾನ್ನೇರಿ ಬರುವ ಯುಗಾದಿಯು, ಕಣ್ಮನಗಳಿಗೆ ಆನಂದವನ್ನು ತರುತ್ತದೆ. ದೈವಸ್ಮರಣೆಯನ್ನು ಉದ್ದೀಪಿಸುತ್ತದೆ. ನಿಸರ್ಗದೊಂದಿಗೆ ಮತ್ತು ಸಹಮಾನವರೊಂದಿಗೆ ಬಾಂಧವ್ಯಗಳನ್ನು ಭದ್ರಗೊಳಿಸುತ್ತದೆ.

“ಯುಗ’ ಎನ್ನುವ ಪದಕ್ಕೆ “ಸಂವತ್ಸರ’ ಎನ್ನುವ ಅರ್ಥವೂ ಇದೆಯಾದ್ದರಿಂದ ಯುಗಾದಿಯೆಂದರೆ ವರ್ಷದ ಪ್ರಾರಂಭ. ನಮ್ಮಲ್ಲಿ ಎರಡು ಪಂಚಾಂಗ ಪದ್ಧತಿಗಳಿವೆ- ಸೌರಮಾನ ಹಾಗೂ ಚಾಂದ್ರಮಾನ. ಸೂರ್ಯನ ಚಲನವನ್ನು ಆಧರಿಸುವ ಸೌರಮಾನಯುಗಾದಿಯು, ಚೈತ್ರಮಾಸದ ಅಶ್ವಿ‌ನೀ ನಕ್ಷತ್ರದೊಂದಿಗೆ ಪ್ರಾರಂಭ. ಭಾರತದ ಪೂರ್ವ ಹಾಗೂ ಪಶ್ಚಿಮದ ಕಡಲ ತೀರದವರು ಹೆಚ್ಚಾಗಿ ಈ ಯುಗಾದಿಯನ್ನಾಚರಿಸುತ್ತಾರೆ. ಚಂದ್ರನ ವೃಧಿಹ್ರಾಸಗಳನ್ನೇ ಗಣಿಸಿ ಮಾಸ-ಪಕ್ಷ-ತಿಥಿಗಳನ್ನು ಅನುಸರಿಸುವ ಚಾಂದ್ರಮಾನ ಪಂಚಾಂಗ ಪದ್ಧತಿಯ ಯುಗಾದಿಯು ಚೈತ್ರಮಾಸದ ಶುಕ್ಲಪಕ್ಷದ ಮೊದಲ ದಿನವಾದ ಪಾಡ್ಯತಿಥಿಯೊಂದಿಗೆ ಪ್ರಾರಂಭ. ಕರ್ನಾಟಕದ ಬಯಲುಸೀಮೆ ಹಾಗೂ ಮೈಸೂರು ಪ್ರಾಂತಗಳಲ್ಲಿ ಚಾಂದ್ರಮಾನ ಯುಗಾದಿ ಹೆಚ್ಚು ಪ್ರಸಿದ್ಧ.

ಬ್ರಿಟಿಷರು ನಮ್ಮ ಮೇಲೆ ಬಲವಂತವಾಗಿ ಹೇರಿದ ಗ್ರೆಗೋರಿಯನ್‌ ಕ್ಯಾಲೆಂಡರ್‌ ಪದ್ಧತಿಯ ಪರದೆಯು ನಮ್ಮನ್ನು ನಮ್ಮದೇ ಪಂಚಾಂಗಪದ್ಧತಿಯ ವೈಜ್ಞಾನಿಕತೆಯನ್ನೂ ಅಭ್ಯಾಸವನ್ನೂ ಮರೆಯುವಂತೆ ಮಾಡಿದೆ. ಆದರೂ ನಮ್ಮೆಲ್ಲ ಧಾರ್ಮಿಕ-ಸಾಂಸ್ಕೃತಿಕ ಕಲಾಪಗಳಿಗೆ ಪಂಚಾಂಗವನ್ನೇ ಬಳಸುವ ಪದ್ಧತಿಯು ಮುಂಬರೆದದ್ದು ಸುದೈವ. ನಿಸರ್ಗದ ಬಣ್ಣವನ್ನೆಲ್ಲ ಒಣಗಿಸಿ, ಸೂರ್ಯರಶ್ಮಿಯನ್ನೂ ಮಂದಗೊಳಿಸಿ, ನಮ್ಮನ್ನು ಉಣ್ಣೆಬಟ್ಟೆಗಳಾವರಣದಲ್ಲಿ ಬಂಧಿಸುವ ಶುಷ್ಕ ಚಳಿಗಾಲದ ಕತ್ತಲರಾತ್ರಿಯಲ್ಲಿ ಬರುವ ಜನವರಿಯ ವರ್ಷಾರಂಭದಂತಲ್ಲ ನಮ್ಮ ಯುಗಾದಿ. ಎಲ್ಲೆಲ್ಲೂ ಹೊಸಚಿಗುರುಗಳು ಸೊಂಪು, ಪರಾಗಸುಗಂಧಗಳ ಕಂಪೂ, ಶುಕ ಪಿಕಗಳ ಗಾನದ ಇಂಪೂ ತುಂಬಿಸಿ ಕೊಂಡ ಚೈತ್ರಮಾಸದ ವಸಂತರ್ತುವಿನ ಸೂರ್ಯನ ಮೊದಲ ಕಿರಣದೊಡನೆ, ನಿಸರ್ಗಲಕ್ಷ್ಮೀಯ ನಮನದೊಡನೆ ಪ್ರಾರಂಭವಾಗುತ್ತದೆ ನಮ್ಮ ಯುಗಾದಿ! ವಿಶೇಷವೇನೆಂದರೆ ಸನಾತನ ಸಂಸ್ಕೃತಿಯಲ್ಲಿ ಹಳೆಯ ವರ್ಷದ ಕೊನೆಯೂ ಹೊಸವರ್ಷ‌ದ ಶುಭಾಪ್ರಾರಂಭವೂ ವಸಂತಋತುವಿನಲ್ಲಿ ಬರುತ್ತದೆ!

ಯುಗಾದಿಯ ಆಚರಣೆ
ಯುಗಾದಿ ವಿಶೇಷವಾಗಿ ಒಂದು ಋತೂತ್ಸವ. ಸನಾತನ ದರ್ಶನದಲ್ಲಿ ನಿಸರ್ಗವು ಜಡವಲ್ಲ, ಚೈತನ್ಯಮಯ, ಭವಗದ್ವಿಲಾಸದ ಸುಂದರಾಭಿವ್ಯಕ್ತಿ. ಆದ್ದರಿಂದ ಪ್ರಕೃತಿಯ ಆರಾಧನೆಯೂ ವಾಸ್ತವಿಕವಾಗಿ ಭಗವದಾರಾಧನೆಯೇ. ಸನಾತನ ಸಂಸ್ಕೃತಿಯಲ್ಲಿ ತಿಥಿ-ಪಕ್ಷ- ಮಾಸ-ಋತು-ಸಂವಸರಚಕ್ರದ ಉರುಳುವಿಕೆಯಲ್ಲಿ ಲಕ್ಷ್ಮೀಯ ಲೀಲಾವಿಲಾಸವನ್ನೂ ಮಾತೃವಾತ್ಸಲ್ಯವನ್ನೂ ಕಾಣುತ್ತ, ಸೂರ್ಯ ಭೂಮಿ ವನಸ್ಪತಿ ಮಧುಮಾಸಲಕ್ಷ್ಮೀ ಹೊಸಚಿಗುರುಗಳು ಎಲ್ಲವನ್ನೂ ಪೂಜಿಸಲಾಗುತ್ತದೆ!

ಭಾರತಾದ್ಯಂತ ಯುಗಾದಿ
ಸ್ವಯಂ ಪುಟ್ಟ ಪ್ರಪಂಚದಂತಿರುವ ಭಾರತದಲ್ಲಿ ಯುಗಾದಿಯು ಹಲವು ಬಗೆಯ ಪ್ರಾದೇಶಿಕ ರೀತಿಗಳಲ್ಲಿ ಆಚರಸಲಾಗುತ್ತದೆ. ಈ ವೈವಿಧ್ಯಗಳ ನಡುವೆಯೂ ಎದ್ದು ಕಾಣುವ ಭಾವೈಕ್ಯ, ಋತೂತ್ಸವ ದಾಚರಣೆಯ ಉಸ್ತಾಹೋಲ್ಲಾಸಗಳೂ ಗಮನೀಯ.

ಭಾರತಾದ್ಯಂತ ಸರ್ವೇಸಾಮಾನ್ಯವಾಗಿ ಕಾಣಬರುವ ಆಚರಣೆಗಳು- ಯುಗಾದಿಯ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದು, ಉದಯೋನ್ಮುಖಸೂರ್ಯನ ಮೊದಲ ಕಿರಣಗಳನ್ನು ದರ್ಶನ ಮಾಡುವುದು, ಅಭ್ಯಂಗಸ್ನಾನ, ಹೊಸ ಬಟ್ಟೆ ಧರಿಸುವುದು, ಸೂರ್ಯನಿಗೆ ಅರ್ಘ್ಯ - ನಮನ ಸಲ್ಲಿಸುವುದು, ಸೂರ್ಯೋದಯಕಾಲದಲ್ಲಿ ನದೀ ಅಥವಾ ಸಮುದ್ರಸ್ನಾನದ ಮಾಡುವುದು, ಹಿಂದಿನ ದಿನವೇ ಮನೆಯನ್ನೂ ಮನೆಯಂಗಳವನ್ನೂ ಸ್ವತ್ಛಗೊಳಿಸಿ, ಪ್ರಾಂತೀಯ ಶೈಲಿಯಲ್ಲಿ ರಂಗವಲ್ಲೀ, ಹೂಮಾಲೆ-ಎಲೆ-ಚಿಗುರು-ಬಳ್ಳಿ-ತಳಿರುತೋರಣಗಳಿಂದ ಅಲಂಕರಿಸುವುದು, ಅಥವಾ (ಆಯಾ ಪ್ರಾಂತದಲ್ಲಿ ಲಭ್ಯವಿರುವ ಅಥವಾ ಪದ್ಧತಿಯಲ್ಲಿರುವಂತೆ) ತೆಂಗಿನ ಗರಿ, ಬಾಳೆಕಂಬ, ಅಡಕೆ ತೆನೆ, ಗೋದೀ ತೆನೆ, ಜೊಂಡು, ಬಂಬು, ಬೆತ್ತ, ಮಾವಿನೆಲೆ.. ಮುಂತಾದ ವಸ್ತುಗಳಿಂದ ಕಿಟಕಿ- ದ್ವಾರ-ಗೋಡೆಗಳನ್ನು ಸಿಂಗರಿಸುವುದು.. ಇತ್ಯಾದಿ. ಕೆಲವೆಡೆ ಮನೆಯ ಮುಂಬಾಗಿಲ ಪಕ್ಕದ ಗೋಡೆಯ ಮೇಲೆ, ಕುಂಕುಮ ಅಥವಾ ರಕ್ತಚಂದನದ ಕೈಯಚ್ಚನ್ನೋ ಅಥವಾ ಸ್ವಸ್ತಿಕ, ಶುಭ- ಲಾಭ-ಕಲಶ, ಓಂಕಾರ-ಶ್ರೀಕಾರಾದಿಗಳನ್ನು ರಚಿಸಿ ಶುಭ ಕೋರು ವುದೂ ಉಂಟು. ಅರ್ಥಪೂರ್ಣ ಬಣ್ಣಗಳ-ಸಂಕೇತಗಳ ಆಕರ್ಷಕ ಧ್ವಜ ಮತ್ತು ಪತಾಕೆಗಳನ್ನು ಮನೆ-ಮಠ-ಮಂದಿರ-ಪುರಭವನಗಳ ಎತ್ತರದ ಸೌಧೆಗಳ ಮೇಲೆ ಕಟ್ಟುವುದೂ ಅತಿಪ್ರಾಚೀನ ಪದ್ಧತಿ.

ಯುಗಾದಿಯಂದು ಹೋಮಾಗ್ನಿಯಲ್ಲಿ ಸೃಷ್ಟಿಕರ್ತ ನಾದ ಬ್ರಹ್ಮನಿಗೆ ಹವಿಸ್ಸನ್ನು ಅರ್ಪಿಸ ಲಾಗುತ್ತದೆ. ಅಂತೆಯೇ ಋತು-ಮಾಸ-ದೇವತೆಗಳಿಗೆ, ಕುಲ ದೇವತೆ, ಊರ ದೇವತೆ, ಇಷ್ಟದೇವತೆಗಳಿಗೂ ಹವಿಸ್ಸಮರ್ಪಣೆ ಪೂಜೆಗಳು ನಡೆಯುತವೆ. ಇವಲ್ಲದೆ ದೈನಂದಿನ ಕಲಾಪಗಳಾದ ಭೂ-ನಮನ, ಗೋಮಾತೆಗೆ ಪೂಜೆ-ಗೋಗ್ರಾಸ, ಹೊಸ್ತಿಲ ಪೂಜೆ, ತುಳಸೀಪೂಜೆ, ನಿತ್ಯದ ಜಪಾನುಷ್ಠಾನಗಳೆಲ್ಲ ಹೆಚ್ಚಿನ ಸಂಭ್ರಮದಿಂದಲೇ ಜರುಗುತ್ತವೆ. ಮಠಮಂದಿರಗಳಿಗೆ ಭೇಟಿಯಿತ್ತು, ದೇವರ, ಗುರುಹಿರಿಯರ ದರ್ಶನ ಪಡೆಯುವುದೂ, ಮನೆಯ ಹಾಗೂ ಊರ ಹಿರಿಯರಿಗೂ ನಮಿಸಿ ಆಶೀರ್ವಾದವನ್ನು ಪಡೆಯುವುದು, ಬಂಧುಮಿತ್ರರಿಗೆ ವರ್ಸಾರಂಭದ ಅಭಿನಂದನೆ ಗಳನ್ನು ಸಲ್ಲಿಸುವುದು, ಸಿಹಿ ಹಂಚಿಕೊಳ್ಳುವುದು, ಇವೆಲ್ಲ ಸಡಗರದಿಂದ ಜರುಗುತ್ತವೆ. ವಸಂತ ಋತುವಿನ ನಡುವೆ ಬರುವ ಯುಗಾದಿಯು ವಸಂತೋತ್ಸವದ ಶಿಖರಪ್ರಾಯ ಪರ್ವ. ಗೀತ, ನೃತ್ಯ, ಕ್ರೀಡಾ ವಿನೋದಗಳಿಗೆ ಇದು ಭವ್ಯವೇದಿಕೆ. ವಸಂತೋತ್ಸವದ ಅಂಗವಾಗಿ ಅತಿಪ್ರಾಚೀನಕಾಲ ದಿಂದಲೂ ಗೀತ-ನೃತ್ಯ-ನಾಟಕಗಳೂ ಮೆರವಣಿಗೆ- ರಥೋತ್ಸವ ಗಳೂ ಕ್ರೀಡಾವಿನೋದಗಳೂ, ವನಗಮನ- ವನಮಹೋತ್ಸ ವ-ಪ್ರವಾಸ-ನೌಕಾಯಾನ-ಜಲಕ್ರೀಡೆಗಳೂ, ಮದುವೆ-ಮುಂಜಿ- ಕಾರ್ಯಾರಂಭ-ಶುಭಕಾರ್ಯಗಳು ಅದ್ದೂರಿಯಿಂದ ಜರುಗುತ್ತ ಬಂದಿವೆ. ಸಾಯಂಕಾಲ ಪಂಚಾಂಗಶ್ರವಣ ಮಾಡುವುದು ಯುಗಾ ದಿಯ ಒಂದು ಮುಖ್ಯಕಲಾಪ. ಬರುವ ವರ್ಷದ ಸಂಭಾವ್ಯ ಮಳೆಬೆಳೆಗಳನ್ನೂ ರಾಶಿಗಳ ಫಲಾಫಲಗಳನ್ನೂ ಆಲಿಸಿ, ಮಾನಸಿಕಸಿದ್ಧತೆ ಮಾಡಿಕೊಳ್ಳುವ ಈ ಪದ್ಧತಿ ಅರ್ಥಪೂರ್ಣವಾದದ್ದು.

ಕರ್ನಾಟಕದ ವಿಶೇಷ
ಮೇಲೆ ವಿವರಿಸಿದ ಎಲ್ಲ ಕಲಾಪಗಳೂ ಕರ್ನಾಟಕ ದಲ್ಲೂ ಕಾಣಬರುತ್ತವಲ್ಲದೆ, ಕನ್ನಡಿಗರ ಮನೆಗಳಲ್ಲಿ ಹಬ್ಬದೂಟ ಮತ್ತು ಬೇವು-ಬೆಲ್ಲಗಳ ಸೇವನೆ ವಿಶೇಷ. ಬಂಧುಮಿತ್ರರೊಡನೆ ಕೂಡಿಕೊಂಡು ಆಸ್ವಾದಿಸುವ ಬಾಳೆಯೆಲೆಯೂಟ. ಅದರಲ್ಲೂ ಪಾಯಸ ಮಾವಿನಕಾಯಿ ಚಿತ್ರಾನ್ನ, ಅಪ್ಪೆಹುಳೀ, ಆಂಬೊಡೇ ಹೋಳಿಗೆಗಳಂತೂ ಇರಲೇಬೇಕೆನ್ನಿ!

ಮಹಾರಾಷ್ಟ್ರಾದದಲ್ಲಿ ಗುಡೀಪಡ್ವಾ ಎಂದೂ, ಅಸ್ಸಾಂನಲ್ಲಿ ‘ರಂಗೋಲಿ ಬಿಹು’ ಎಂದೂ, ಬಂಗಾಲದಲ್ಲಿ ‘ನಬೊ ಬೊರ್ಶ್‌’ ಎಂದೂ, ತಮಿಳುನಾಡಿನಲ್ಲಿ ‘ಪುತ್ತಾಂಡ್‌’ ಎಂದೂ, ಕೇರಳದಲ್ಲಿ ‘ವಿಷು’ ಎಂದೂ ಪ್ರಸಿದ್ಧ. ಯುಗಾದಿಯಂದು ಕೇರಳದ ಮನೆಗಳಲ್ಲಿ ಮಕ್ಕಳಿಗೆ ‘ಕೈ-ವಿಷೇಶಮ್‌’ ಎನ್ನುವ ಕಾಣಿಕೆಯನ್ನೂ ಕೊಡಲಾಗುತ್ತದೆ.

ಯುಗಾದಿಯೊಂದಿಗೆ ಪ್ರಾರಂಭವಾಗಿ ಒಂಬತ್ತು ದಿನಗಳನ್ನು ವಸಂತ ನವರಾತ್ರವೆಂದು ಆಚರಿಸುವ ಪದ್ಧತಿ ಅತೀ ಪ್ರಾಚೀನವಾದದ್ದು. ವಸಂತೋತ್ಸವದ ಸಲು ವಾಗಿಯೇ ಅರಮನೆಗಳಲ್ಲೂ ದೇಗುಲಗ ಳಲ್ಲೂ ಊರ ಪ್ರಮುಖ ಬೀದಿಗಳಲ್ಲೂ ದೊಡª ವಸಂತ-ಮಂಟಪ ಗಳು, ಓಕಳಿ ಹೊಂಡಗಳು ಇದ್ದದ್ದನ್ನು ಇಂದಿಗೂ ಪ್ರಾಚೀನ ದೇಗುಲ ಮತ್ತು ಊರ ಕಟ್ಟಡಗಳಲ್ಲಿ ಕಾಣಬಹುದಾಗಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಹಂಪಿಯ ವಿರೂಪಾಕ್ಷನಿಗೆ ಒಂಬತ್ತು ದಿನಗಳ ಅತ್ಯಂತ ವೈಭವದ ವಸಂತ- ನವರಾತ್ರೋತ್ಸವ ಜರು ಗುತ್ತಿತ್ತು. ಈ ಉತ್ಸವಾಚರಣೆಯ ಮುಗಿಲುಮುಟ್ಟುವ ವೈಭವದ ವರ್ಣನೆ ಯನ್ನು ಪ್ರತ್ಯಕ್ಷದರ್ಶಿಯಾದ ಕವಿ ಅಹೋಬಿಲನ ಕೃತಿ ವಿರೂಪಾಕ್ಷವಸಂ ತೋತ್ಸವಚಂಪೂವಿನಲ್ಲಿ ಕಾಣಬಹುದು. ತಿರುಮಲೆಯಲ್ಲೂ ಯುಗಾದಿ ಯಂದು ಪ್ರಾರಂಭವಾಗುವ ವಸಂತನವರಾತ್ರದ ವೈಭವದ ಬ್ರಹ್ಮೋತ್ಸವವು ಇಂದಿಗೂ ನಡೆಯುತ್ತದೆ.

ಪಶ್ಚಿಮೋತ್ತರದ ಆಫ್ಘಾನಿಸ್ಥಾನ ಪಾಕಿಸ್ಥಾನಗಳಲ್ಲಂತೂ ಯುಗಾದಿಯ ಬಣ್ಣವೆಲ್ಲ ಮಾಸಿ, ಆಕ್ರಮಣಕಾರರ ಕರಾಳಕಪ್ಪು ಕವಿದಿದ್ದರೂ, ನೇಪಾಲ, ವಿಯಟ್ನಾಮ್‌, ಸಿಂಗಾಪುರ, ಇಂಡೊನೇಶಿಯಾ, ಕಾಂಬೋಡಿಯಾ, ಶ್ರೀಲಂಕಾ ಮುಂತಾದ ಭಾರತದ ಕೆಲವು ನೆರೆಕೆರೆಯ ದೇಶಗಳಲ್ಲಿ ಯುಗಾದಿಯಾ ಚರಣೆಯ ಪ್ರಾದೇಶಿಕ ಸೊಗಡಿನಲ್ಲಿ ಮುಂದುವರೆದಿದೆ.

ಈ ಯುಗಾದಿಯೊಂದಿಗೆ ಆಗಮಿಸಿರುವ ಪ್ಲವನಾಮ ಸಂವತ್ಸರವು ನಮಗೆಲ್ಲ ಆಯುರಾರೋಗ್ಯ ಶಾಂತಿ ಸಂತೋಷಗಳನ್ನು ತರಲಿ ಎಂದು ಹಾರೈಸೋಣ!

– ಡಾ| ಆರತೀ ವಿ ಬಿ

ಟಾಪ್ ನ್ಯೂಸ್

ಮಹಾಲಿಂಗಪುರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ, ಆಸ್ತಿ ಪಾಸ್ತಿ ನಷ್ಟ

ಮಹಾಲಿಂಗಪುರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ, ಆಸ್ತಿ ಪಾಸ್ತಿ ನಷ್ಟ

1wwwqe

Writer ಬಂಜಗೆರೆ ಜಯಪ್ರಕಾಶ್ ಅವರಿಗೆ ಮತ್ತೊಂದು ಜೀವ ಬೆದರಿಕೆ ಪತ್ರ

congress

Bihar; ಜೂನ್ 12ರ ವಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಭಾಗಿಯಾಗುತ್ತದೆ

ದಾಂಡೇಲಿ: ಸಮಯಕ್ಕೆ ಸರಿಯಾಗಿ ಬಾರದ ಬಸ್… ಪ್ರಯಾಣಿಕರಿಂದ ಆಕ್ರೋಶ

ದಾಂಡೇಲಿ: ಸಮಯಕ್ಕೆ ಸರಿಯಾಗಿ ಬಾರದ ಬಸ್… ಪ್ರಯಾಣಿಕರಿಂದ ಆಕ್ರೋಶ

1-sasad

DMK ಸಂಪೂರ್ಣ ಬೆಂಬಲ ನೀಡಲಿದೆ: ಕೇಜ್ರಿವಾಲ್ ಗೆ ಸ್ಟಾಲಿನ್ ಬಲ

NCERT

ವಿಕಾಸದ ಸಿದ್ಧಾಂತದ ನಂತರ ಪಠ್ಯಪುಸ್ತಕದಿಂದ ಆವರ್ತಕ ಕೋಷ್ಟಕವನ್ನು ತೆಗೆದುಹಾಕಿದ NCERT

1-sadas

Haryana ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ 10 ಶಾರ್ಪ್ ಶೂಟರ್ ಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TDY-20

ಸಂತಸ ಹೊತ್ತು ತರುವ ಯುಗಾದಿ

Ugadi special; ಕುಸುಮಾಕರನನ್ನು ಸ್ವಾಗತಿಸಿ

Ugadi special; ಕುಸುಮಾಕರನನ್ನು ಸ್ವಾಗತಿಸಿ

yugadi-article

ಹೊಸದೊಂದು ವರುಷವಿದು ಮತ್ತೆ ಯುಗಾದಿ

1-sa-ds

ಆಚರಣೆ ರೀತಿ ಬೇರೆಯಾದರೂ ಸಾರುವ ತಣ್ತೀ ಮಾತ್ರ ಒಂದೇ…

tdy-19

ಹೊಸ ಬದುಕಿನ ಆರಂಭ ಯುಗಾದಿ

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ

ಮಹಾಲಿಂಗಪುರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ, ಆಸ್ತಿ ಪಾಸ್ತಿ ನಷ್ಟ

ಮಹಾಲಿಂಗಪುರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ, ಆಸ್ತಿ ಪಾಸ್ತಿ ನಷ್ಟ

1wwwqe

Writer ಬಂಜಗೆರೆ ಜಯಪ್ರಕಾಶ್ ಅವರಿಗೆ ಮತ್ತೊಂದು ಜೀವ ಬೆದರಿಕೆ ಪತ್ರ

1-sdsadsad

Rabkavi Banhatti ಪೊಲೀಸ್ ಠಾಣೆ ಸ್ಥಾಪನೆಗೆ ಹೋರಾಟದ ಕೊರತೆ

congress

Bihar; ಜೂನ್ 12ರ ವಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಭಾಗಿಯಾಗುತ್ತದೆ

ದಾಂಡೇಲಿ: ಸಮಯಕ್ಕೆ ಸರಿಯಾಗಿ ಬಾರದ ಬಸ್… ಪ್ರಯಾಣಿಕರಿಂದ ಆಕ್ರೋಶ

ದಾಂಡೇಲಿ: ಸಮಯಕ್ಕೆ ಸರಿಯಾಗಿ ಬಾರದ ಬಸ್… ಪ್ರಯಾಣಿಕರಿಂದ ಆಕ್ರೋಶ