
ಉಳ್ಳಾಲ: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಶವ ಪತ್ತೆ
Team Udayavani, Feb 1, 2023, 2:09 PM IST

ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿ ಬಾಡಿಗೆ ಮನೆಯೊಂದರಲ್ಲಿ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಯುವತಿಯ ಬಾಯಿಗೆ ಬಟ್ಟೆಯನ್ನು ಗಟ್ಟಿಯಾಗಿ ಕಟ್ಟಿರುವುದು ಕೊಲೆ ಸಂಶಯ ವ್ಯಕ್ತಪಡಿಸಿದೆ.
ಛತ್ತೀಸಗಢ ಮೂಲದ ಸರಿತಾ ವರ್ಮ (23) ನಿಗೂಢ ರೀತಿಯಲ್ಲಿ ಸಾವನ್ನಪ್ಪಿದಾಕೆ.
ಇಬ್ಬರು ಸಹೋದರರು ಹಾಗೂ ಅತ್ತಿಗೆಯ ಜೊತೆ ಸರಿತಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಘಟನೆ ವೇಳೆ ಸಹೋದರರಿಬ್ಬರು ಕೆಲಸಕ್ಕೆ ತೆರಳಿದ್ದರೆ, ಅತ್ತಿಗೆ ಆಸ್ಪತ್ರೆಗೆ ತೆರಳಿದ್ದರು. ಬಾಡಿಗೆ ಮನೆ ಮಾಲೀಕರು ವೃದ್ದರಾಗಿದ್ದು, ಅಸೌಖ್ಯದಿಂದಿದ್ದಾರೆ. ಕೆಳಗಿನ ಅಂತಸ್ತಿನಲ್ಲಿ ಮಾಲೀಕರಿದ್ದರೆ, ಮೇಲಿನ ಅಂತಸ್ತಿನಲ್ಲಿ ಬಾಡಿಗೆ ಕುಟುಂಬ ವಾಸ್ತವ್ಯವಿತ್ತು.
ಸರಿತಾ ವರ್ಮ ವಿಶೇಷ ಚೇತನರಾಗಿದ್ದು, ಬಾಯಿ ಮತ್ತು ಕಿವಿ ಕೇಳದ ಸ್ಥಿತಿಯಲ್ಲಿದ್ದರು.
ಕೊಲೆ ಶಂಕೆ: ಸರಿತಾ ಬಾಯಿಗೆ ಬಟ್ಟೆಯನ್ನು ಬಿಗಿಯಾಗಿ ಕಟ್ಟಲಾಗಿದೆ. ಇದು ಸಂಶಯಕ್ಕೆ ಕಾರಣವಾಗಿದ್ದು, ಹತ್ಯೆ ನಡೆಸಿದ ಬಳಿಕ ಯುವತಿಯನ್ನು ನೇಣು ಹಾಕಿದರೆ ಎನ್ನುವ ಸಂಶಯವನ್ನು ಉಳ್ಳಾಲ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕೆಳಗಿನ ಮನೆಯಲ್ಲಿರುವ ವೃದ್ದ ಮಾಲೀಕರಿಗೆ ಯುವಕನೋರ್ವ ಮಧ್ಯಾಹ್ನ ಹಾಗೂ ರಾತ್ರಿ ಊಟ ತರುತ್ತಾನೆ. ಸರಿತಾ ವರ್ಮ ಮೃತದೇಹ ಪತ್ತೆಯಾದ ದಿನದಂದು ಆತ ಮಾತ್ರ ಕಂಪೌಂಡ್ ಪ್ರವೇಶಿಸಿರುವ ಕುರಿತು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಯುಡಿಆರ್ ದಾಖಲಿಸಿರುವ ಪೊಲೀಸರು ಸಂಶಯಾಸ್ಪದರನ್ನು ಠಾಣೆಗೆ ಕರೆಸಿ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ: ನಳಿನ್ ಕುಮಾರ್ ಕಟೀಲ್

ಇಬ್ಬರು ಶಾಸಕರ ರಾಜೀನಾಮೆ? ಶಿರಸಿಯತ್ತ ಎಲ್ಲರ ಚಿತ್ತ!

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್

ಹುಣಸೂರು: ಮೊದಲ ವರ್ಷಧಾರೆಗೆ ನೂರಾರು ಎಕರೆ ಬಾಳೆ ಬೆಳೆ ನಾಶ, ಲಕ್ಷಾಂತರ ರೂ. ನಷ್ಟ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ